ಬೆಂಗಳೂರು
ಒಳಮೀಸಲಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಾವಿರಕ್ಕೂ ಹೆಚ್ಚು ಮಾದಿಗ ಸಮುದಾಯದವರು ಒಳಮೀಸಲಿಗೆ ಆಗ್ರಹಿಸಿ ಸರ್ಕಾರದ ವಿರುಧ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಆಗ್ರಹಿಸಿ ಹರಿಹರದಿಂದ ಪ್ರಾರಂಭವಾದ ಕ್ರಾಂತಿಕಾರಿ ಪಾದಯಾತ್ರೆಯು ಶುಕ್ರವಾರ ಬೆಂಗಳೂರು ತಲುಪಿದೆ, ಇಂದಿಗೆ ಎರಡನೇ ದಿನ, ಮಾದಿಗ ಸಮುದಾಯಗಳಿಗೆ ಮೋಸವಾಗುತ್ತದೆ ಅದಕ್ಕಾಗಿ ಒಳಮೀಸಲಾತಿ ಜಾರಿಗೊಳಿಸುವವರೆಗೂ, ಹಾಗೆ ಮುಖ್ಯವಾಗಿ ರಾಜ್ಯಪಾಲರ ಸಹಿ ಮಾಡುವರೆಗೂ ಸರ್ಕಾರದ ವಿರುದ್ಧ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾದಿಗ ಸಮುದಾಯದವರು ಆಗಮಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಬೃಹತ್ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಮಾದಿಗ ಸಮುದಾಯ ಒಕ್ಕೂಟದ ಅಧ್ಯಕ್ಷ ಡಾ. ಬಿ.ಆರ್. ಮುನಿರಾಜು ತಿಳಿಸಿದರು.
ಪ್ರತಿಭಟನೆಯಲ್ಲಿ ಬಿ ಆರ್ ಭಾಸ್ಕರ್ ಪ್ರಸಾದ್, ಮುನಿರಾಜು , ನಾಗರಾಜ್ ನಂದಾಪುರು, ಕುಷ್ಟಗಿ ಪ್ರಭುರಾವ್ ತಳಮಡಗಿ, ಪ್ರಭು ರಾಜು ಕೋಡ್ಲಿ, ಯಮನೂರಾ , ಮನ್ನೆರಾಳ ,s ಮಲಿಯಪ್ಪ .ವಿ ಸುರೇಶ. ಉಮೇಶ್. ಜಯರಾಜ್ ಕೊಡ್ಲಿ ದುರಗೇಶ್ ಮಿಯಾಪುರ, ಹನಮಂತ ದೋಟಿಹಾಳ ಸೇರಿದಂತೆ ಅನೇಕ ಗಣ್ಯರು ಭಾಗಿ.
