ಬೆಂಗಳೂರು
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿವತಿಯಿಂದ ಒಳಮೀಸಲಾತಿ ವರ್ಗಿಕರಣ ಜಾರಿ ಮಾಡಲು ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಯಿತು . ಸದರಿ ಪ್ರತಿಭಟನೆಯಲ್ಲಿ ಸುಮಾರು 2,000 ಜನರು ಭಾಗವಹಿಸಿದ್ರು.. ಪ್ರತಿಭಟನೆಯಲ್ಲಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿವಿಜೈ ಮಾದಿಗರ ಬೌದ್ಧಿಕ ವೇದಿಕೆ ರಾಜ್ಯಾಧ್ಯಕ್ಷರಾದ ಬಿ.ಆರ್ ಮುನಿರಾಜು ತಿಳಿಸಿದರು.
ಜೈ ಮಾದಿಗರ ಬೌದ್ಧಿಕ ವೇದಿಕೆ ವತಿಯಿಂದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಆರ್ ಮುನಿರಾಜು ರವರ ನೇತೃತ್ವದಲ್ಲಿ ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕು, ಜಾಲ ಹೋಬಳಿ, ಬೆಟ್ಟಹಲಸೂರು ಗ್ರಾಮದ ಸರ್ವೆ ನಂ-364 ರಲ್ಲಿನ 4 ಎಕರೆ 09 ಗುಂಟೆ ಜಮೀನಿನ ವಿಚಾರವಾಗಿ ಮಾನ್ಯ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಪ್ರಕರಣದ ಸಂಖ್ಯೆ-38/23 ರಂತೆ ಕೆ. ಎಸ್.ಸಿ/ಎಸ್.ಟಿ ದಾವೆ ಹೂಡಿದ್ದು, ದಾವೆಯಂತೆ ದಲಿತರ ಪರವಾಗಿ ನ್ಯಾಯ ರೀತಿಯಲ್ಲಿ ಆದೇಶ ಮಾಡುತ್ತೇವೆಂಬ ಮಾಹಿತಿ ನೀಡಿ ದಾವೆಗೆ ಹಾಜರಾಗದಂತಹ ನಕಲಿ ಜಿ.ಪಿ.ಎ ಹೋಲ್ಡರ್ ರಾಧಾಕೃಷ್ಣನ ಮಾತು ಕೇಳಿ ಕೋಟ್ಯಾಂತರ ರೂ.ಗಳ ಲಂಚ ಪಡೆದುಕೊಂಡು ದಲಿತರಿಗೆ ವಂಚನೆ ಮಾಡಿರುವ ಭ್ರಷ್ಟ ದಲಿತ ವಿರೋಧಿ ಬೆಂಗಳೂರು ಉತ್ತರ ಉಪವಿಭಾಗದ ಅಧಿಕಾರಿಯಾದ ಪ್ರಮೋದ್ ಪಾಟೀಲ್, ರಾಥೋಡ್ ಮತ್ತು ಪ್ರೇಮಲಮಾ ಕೇಸ್ ವರ್ಕರ್ ರವರುಗಳನ್ನು ಅಮಾನತ್ತುಗೊಳಿಸಿ ಸದರಿರವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ನರಸಪ್ಪ, ಮುನಿರಾಜು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಂಘಟನೆಗಳ ಹೋರಾಟಗಾರರು ಭಾಗಿಯಾಗಿದ್ದರು..








