ಶಿರಾ ತಾಲ್ಲೂಕಿನಲ್ಲಿ ಓಮಿಕ್ರಾನ್ ಸೋಂಕು ಪತ್ತೆ

ಶಿರಾ:


ಬಿಗಿ ಕ್ರಮ ಕೈಗೊಳ್ಳದಿದ್ದರೆ ಮತ್ತೊಮ್ಮೆ ಮಹಾಮಾರಿ ವಕ್ಕರಿಸೀತು ಜೋಕೆ…..!

ರಾಜ್ಯದೆಲ್ಲೆಡೆ ಕೋವಿಡ್ 3ನೇ ಅಲೆಯು ತೀವ್ರಗೊಳ್ಳುತ್ತಿದ್ದು ಮಂಗಳವಾರವಷ್ಟೆ ಶಿರಾ ತಾಲ್ಲೂಕಿನಲ್ಲೂ ಓರ್ವ ವ್ಯಕ್ತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎನ್ನಲಾಗಿದ್ದು, ಇದೀಗ ಶಿರಾ ಭಾಗದ ಸಾರ್ವಜನಿಕರಲ್ಲೂ ಆತಂಕ ಮನೆ ಮಾಡತೊಡಗಿದೆ.

ಕಳೆದ ಕೆಲವು ದಿನಗಳ ಹಿಂದೆ ಹುಲಿಕುಂಟೆ ಹೋಬಳಿಯ ಕ್ಯಾನ್ಸರ್ ರೋಗಿಯೊಬ್ಬರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಬಂದಿದ್ದು, ಸದರಿ ವ್ಯಕ್ತಿಯ ಸ್ವಾಬ್ ಪರೀಕ್ಷೆಯ ನಂತರ ಆತನಿಗೆ ಓಮಿಕ್ರಾನ್ ಸೋಂಕು ಇರುವುದು ಪತ್ತೆಯಾಗಿದೆ.

ಸದರಿ ವ್ಯಕ್ತಿಯನ್ನು ಅವರ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಾ. ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಪ್ರಥಮವಾಗಿ ಮೊದಲನೆಯ ಅಲೆಯಲ್ಲಿನ ಸೋಂಕು ರಾಜ್ಯದ ಜನತೆಯ ಮನೆ ಬಾಗಿಲು ತಟ್ಟಿದಾಗ ಅದು ಮೊದಲನೆಯ ಪ್ರಕರಣವಾಗಿ ಹೊರ ಹೊಮ್ಮಿದ್ದು ಶಿರಾ ತಾಲ್ಲೂಕಿನಿಂದಲೆ ಎಂಬುದು ಅತ್ಯಂತ ಗಮನಾರ್ಹವಾದ ವಿಚಾರವೂ ಆಗಿದೆ.

ಮೊದಲನೆಯ ಹಂತದ ಸುಳಿವು ಲಭ್ಯವಾದಾಗ ಇಡೀ ಶಿರಾ ನಗರವೇ ಸ್ಥಬ್ಧವಾಗಿತ್ತು. ಪ್ರಕರಣಗಳು ಕಂಡು ಬಂದ ಕಡೆಗಳಲ್ಲಿ ಸೀಲ್‍ಡೌನ್ ಲಾಕ್‍ಡೌನ್‍ಗಳು ನಡೆದಿದ್ದವು.

ಮಹಾಮಾರಿಯಿಂದ ದೂರವಿರಲು ಬಿಗಿ ಕ್ರಮಗಳನ್ನು ಜನತೆಯೇ ಕಟ್ಟುನಿಟ್ಟಾಗಿ ಪಾಲಿಸಿದ್ದರು. ರಾಜ್ಯದಲ್ಲಿ 2020ರ ಮಾರ್ಚ್ ಮಾಹೆಯಲ್ಲಿ ಕೋವಿಡ್ ಸೋಂಕು ಪ್ರಥಮ ಹಂತದಲ್ಲಿ ಕಾಣಿಸಿಕೊಂಡಾಗ ಶಿರಾ ಮೂಲಕ ಓರ್ವ ವ್ಯಕ್ತಿ ಈ ಸೋಂಕಿಗೆ ಮೊದಲ ಗುರಿಯಾಗಿದ್ದು ಸರಿಯಷ್ಟೆ.

ಮೊದಲ ಹಂತದಲ್ಲಿ ಸೋಂಕು ಹರಡಿದಾಗ ಶಿರಾ ತಾಲ್ಲೂಕಿನಲ್ಲಿ ಈ ಮಹಾಮಾರಿಗೆ ಮೂರು ಮಂದಿ ತುತ್ತಾಗಿದ್ದನ್ನು ಈಗಲೂ ಕೂಡ ಯಾರೂ ಮರೆಯಲಾಗದ ಕಹಿ ಘಟನೆಗಳೇ ಆಗಿವೆ.

ಎರಡನೆಯ ಹಂತದಲ್ಲಿನ ಕೋವಿಡ್ ಸೋಂಕು ಕಾಣಿಸಿಕೊಂಡಾಗಲಂತೂ ಇಡೀ ಶಿರಾ ಭಾಗದ ಜನತೆ ಬೆಚ್ಚಿ ಬಿದ್ದರಲ್ಲದೆ ಮಡುಗಟ್ಟಿದ ಆತಂಕದ ವಾತಾವರಣವೂ ಸೃಷ್ಟಿಯಾಗಿತ್ತು.

2021 ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಸೋಂಕು ಮಿತಿ ಮೀರಿದಾಗ ಶಿರಾ ತಾಲ್ಲೂಕಿನಲ್ಲಿ ಮೃತರ ಸಂಖ್ಯೆಯ ಪ್ರಮಾಣವೂ ಹೆಚ್ಚುತ್ತಾ ಹೋಯಿತು. ಬೆಂಗಳೂರಿನ ಪಾದರಾಯನಪುರದ ಸೋಂಕು ಶಿರಾ ಜನತೆಯ ಎದೆಯನ್ನು ತಲ್ಲಣಿಸಿತ್ತು.

2021 ರ ಮಾರ್ಚ್ ತಿಂಗಳಲ್ಲಿ ತಾಲ್ಲೂಕಿನಾದ್ಯಂತ ಸೋಂಕಿನ ಪ್ರಮಾಣ ಹೆಚ್ಚಾದಂತೆ ಸಾವಿನ ಸಂಖ್ಯೆಯೂ ಹೆಚ್ಚಾಗತೊಡಗಿತ್ತು. ಎರಡನೆಯ ಹಂತದ ಸೋಂಕಿನ ಪ್ರಮಾಣ ಹೆಚ್ಚಾದಾಗ ಇಲ್ಲಿನ ಸರ್ಕಾರಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಹೆಚ್ಚಿನ ಚಿಕಿತ್ಸೆಗೆ ಅನುವು ಮಾಡಿಕೊಡಲಾಗಿತ್ತು.

ತಾಲ್ಲೂಕಿನಾದ್ಯಂತ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ತಾಲ್ಲೂಕು ಆಡಳಿತ ಕೈಗೊಂಡಿದ್ದರೂ ಕೂಡ ಸುಮಾರು 150ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.

ನೆರೆಯ ಹಿರಿಯೂರು, ಆಂಧ್ರ್ರಪ್ರದೇಶ, ಮಧುಗಿರಿ, ಪಾವಗಡ ಸೇರಿದಂತೆ ವಿವಿಧ ತಾಲ್ಲೂಕುಗಳಿಂದಲೂ ಕೋವಿಡ್ ಚಿಕಿತ್ಸೆಗೆ ಬಂದ ಅನೇಕ ಮಂದಿ ಚಿಕಿತ್ಸೆ ಫಲಕಾರಿಯಾಗದೆ ಶಿರಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಎರಡನೆಯ ಹಂತದಲ್ಲಿ ಮೃತರ ಸಂಖ್ಯೆ ಹೆಚ್ಚಾದಾಗ ಮೃತ ದೇಹಗಳನ್ನು ಮುಟ್ಟಲು ಸಂಬಂಧಿಗಳೆ ಹಿಂಜರಿಯುವಂತಹ ಸಂದರ್ಭದಲ್ಲಿ ಕೆಲವು ಸ್ವಯಂ ಸೇವಕರು ಮೃತ ದೇಹಗಳ ಅಂತ್ಯ ಸಂಸ್ಕಾರ ಮಾಡಿ ಭೇಷ್ ಅನ್ನಿಸಿಕೊಂಡಿದ್ದು ನಿಜಕ್ಕೂ ಸ್ತುತ್ಯಾರ್ಹವೇ ಸರಿ.

ರೋಗಿಗಳ ಉಸಿರಾಟದ ಸಮಸ್ಯೆಯ ದೃಷ್ಟಿಯಿಂದ ದಾನಿಗಳು ಉಚಿತ ಆಮ್ಲಜನಕದ ಯಂತ್ರಗಳನ್ನು ನೀಡಿದ್ದು ಮೆಚ್ಚುಗೆಯ ವಿಚಾರವೂ ಹೌದು.

ಇದೀಗ ಓಮಿಕ್ರಾನ್ ಸೋಂಕು ಇಡೀ ದೇಶದ ಜನರನ್ನು ಕಾಡತೊಡಗಿದ್ದು ರಾಜ್ಯಕ್ಕೂ ಕಾಲಿಟ್ಟಿದೆ.

ಈ ಹಿನ್ನೆಲೆಯಲ್ಲಿ ಸೋಂಕಿನ ಪ್ರಮಾಣ ಸದ್ಯಕ್ಕೆ ಕಾಣಿಸಿರಲಿಲ್ಲವೆಂಬ ನೆಮ್ಮದಿ ಶಿರಾ ಭಾಗದ ಜನತೆಗೆ ಇದ್ದಿತಾದರೂ ಮಂಗಳವಾರದಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ತಾಲ್ಲೂಕಿನ ಓರ್ವ ವ್ಯಕ್ತಿಗೆ ಓಮಿಕ್ರಾನ್ ಕಾಣಿಸಿಕೊಂಡಿರುವುದು ಈ ಆತಂಕ ಹೆಚ್ಚಾಗಲು ಕಾರಣವಾಗಿದೆ.

ಮೂರನೆಯ ಅಲೆಯಲ್ಲಿಯೂ ಸೋಂಕು ಹೆಚ್ಚಾಗುವ ಸಾದ್ಯತೆಗಳಿದ್ದರೂ ಶಿರಾ ಭಾಗದಲ್ಲಿ ಇನ್ನೂ ಕೂಡಾ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಂತೆ ಕಾಣುತ್ತಲೇ ಇಲ್ಲ.

ನಗರವೂ ಸೇರಿದಂತೆ ಕೆಲವೊಂದು ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತಹ ಕ್ರಮಗಳಿವೆಯಾದರೂ ಸರ್ಕಾರಿ ಕಛೇರಿಗಳಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳಂತೂ ಕಣ್ಣಿಗೆ ಕಾಣಿಸುತ್ತಲೇ ಇಲ್ಲ.

ಸ್ಯಾನಿಟೈಸರ್ ಮಾತ್ರ ಸಂಪೂರ್ಣವಾಗಿ ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಬಳಕೆಯಾಗುತ್ತಲೇ ಇಲ್ಲ.

ನಗರದ ಸರ್ಕಾರಿ ಕಛೇರಿಗಳಿಗೆಂದು ಬಂದು ಹೋಗುವ ಅನೇಕ ಮಂದಿ ಸಾರ್ವಜನಿಕರು ಮಾಸ್ಕ್ ಧರಿಸದೇ ಸಂಚರಿಸುವುದು ಸಾಮಾನ್ಯವಾಗಿದೆ.

ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಆರಂಭಗೊಂಡಕೂಡಲೆ ಮೊದಲು ಶಿರಾ ಭಾಗವೇ ಅದಕ್ಕೆ ಗುರಿಯಾಗುತ್ತದೆ ಎಂಬ ಅರಿವಿದ್ದರೂ ಇಲ್ಲಿನ ತಾಲ್ಲೂಕು ಮಟ್ಟದ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕೂರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ತಾಲ್ಲೂಕು ಮಟ್ಟದ ಸರ್ಕಾರಿ ಕಛೇರಿಗಳು, ಬ್ಯಾಂಕ್‍ಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಕ್ರಮ ಇನ್ನೂ ಕೂಡ ಜಾರಿಗೆ ಬಂದಿಲ್ಲ.

ಸಾರ್ವಜನಿಕ ಸಂತೆ, ಮಾರುಕಟ್ಟೆಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳಿಗೆ ತಾಲ್ಲೂಕು ಆಡಳಿತ ಈ ಕೂಡಲೇ ಫರ್ಮಾನು ಹೊರಡಿಸದಿದ್ದರೆ ಓಮಿಕ್ರಾನ್ ಸೋಂಕು ಹೆಚ್ಚಳಗೊಂಡು ಜನತೆ ಭೀತಿಯಲ್ಲಿ ಬದುಕಬೇಕಾಗುತ್ತದೆ ಎಂಬುದನ್ನು ತಾಲ್ಲೂಕು ಆಡಳಿತ ಗಮನಿಸಬೇಕಿದೆ.

ಈ ಹಿಂದಿನ ಎರಡನೆಯ ಹಂತದ ಸೋಂಕು ಹೆಚ್ಚಳದ ಸಂದರ್ಭದಲ್ಲಿ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿದ್ದ ಕ್ಷೇತ್ರದ ಶಾಸಕರು ಕೂಡ ಸೋಂಕಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಇನ್ನೂ ಎಚ್ಚರವಹಿಸದೇ ಇರುವುದು ಅಚ್ಚರಿಯೂ ಆಗಿದ್ದು,

ಈ ಕೂಡಲೇ ಶಾಸಕರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮುಂಜಾಗ್ರತಾ ಕ್ರಮಗಳ ಬಗ್ಗೆ ಚಿಂತಿಸುವರೇನೋ ಕಾದು ನೋಡಬೇಕಿದೆ.

ಈ ಹಿಂದಿನ ಎರಡನೆಯ ಹಂತದ ಸೋಂಕು ಹೆಚ್ಚಳದ ಸಂದರ್ಭದಲ್ಲಿ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿದ್ದ ಕ್ಷೇತ್ರದ ಶಾಸಕರು ಕೂಡ ಸೋಂಕಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಇನ್ನೂ ಎಚ್ಚರವಹಿಸದೇ ಇರುವುದು ಅಚ್ಚರಿಯೂ ಆಗಿದ್ದು,

ಈ ಕೂಡಲೇ ಶಾಸಕರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮುಂಜಾಗ್ರತಾ ಕ್ರಮಗಳ ಬಗ್ಗೆ ಚಿಂತಿಸುವರೇನೋ ಕಾದು ನೋಡಬೇಕಿದೆ.

ತಾಲ್ಲೂಕು ಮಟ್ಟದ ಸರ್ಕಾರಿ ಕಛೇರಿಗಳು, ಬ್ಯಾಂಕ್‍ಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಕ್ರಮ ಇನ್ನೂ ಕೂಡ ಜಾರಿಗೆ ಬಂದಿಲ್ಲ. ಸಾರ್ವಜನಿಕ ಸಂತೆ,

ಮಾರುಕಟ್ಟೆಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳಿಗೆ ತಾಲ್ಲೂಕು ಆಡಳಿತ ಈ ಕೂಡಲೇ ಫರ್ಮಾನು ಹೊರಡಿಸದಿದ್ದರೆ ಓಮಿಕ್ರಾನ್ ಸೋಂಕು ಹೆಚ್ಚಳಗೊಂಡು ಜನತೆ ಭೀತಿಯಲ್ಲಿ ಬದುಕಬೇಕಾಗುತ್ತದೆ ಎಂಬುದನ್ನು ತಾಲ್ಲೂಕು ಆಡಳಿತ ಗಮನಿಸಬೇಕಿದೆ.

ಮೂರನೆಯ ಅಲೆಯಲ್ಲಿಯೂ ಸೋಂಕು ಹೆಚ್ಚಾಗುವ ಸಾದ್ಯತೆಗಳಿದ್ದರೂ ಶಿರಾ ಭಾಗದಲ್ಲಿ ಇನ್ನೂ ಕೂಡ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಂತೆ ಕಾಣುತ್ತಲೇ ಇಲ್ಲ.

ನಗರವೂ ಸೇರಿದಂತೆ ಕೆಲವೊಂದು ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತಹ ಕ್ರಮಗಳಿವೆಯಾದರೂ ಸರ್ಕಾರಿ ಕಛೇರಿಗಳಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳಂತೂ ಕಣ್ಣಿಗೆ ಕಾಣಿಸುತ್ತಲೇ ಇಲ್ಲ.

ಸ್ಯಾನಿಟೈಸರ್ ಮಾತ್ರ ಸಂಪೂರ್ಣವಾಗಿ ಯಾವುದೇ ಸರ್ಕಾರಿ ಕಛೇರಿಗಳಲ್ಲಿ ಬಳಕೆಯಾಗುತ್ತಲೇ ಇಲ್ಲ.

  – ಬರಗೂರು ವಿರೂಪಾಕ್ಷ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap