ಬೆಂಗಳೂರು:
ರಾಜ್ಯದ ನಿವೃತ್ತ ಡಿಜಿ, ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದ ಆರೋಪಿಯಾಗಿರುವ ಓಂ ಪ್ರಕಾಶ ಅವರ ಪತ್ನಿ ಪಲ್ಲವಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ 39 ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಸದ್ಯ ಆರೋಪಿ ಪಲ್ಲವಿಗೆ ಮೇ 3 ವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ.ದಯಾನಂದ್ ಆದೇಶಿಸಿದ್ದಾರೆ.
ಹತ್ಯೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿ ಅವರೇ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮಗಳು ಕೃತಿ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಠಾಣೆಯಲ್ಲಿ ಓಂ ಪ್ರಕಾಶ್ ಅವರ ಮಗಳು ಕೃತಿ ಕಿರಿಕ್ ತೆಗೆದಿದ್ದು, ಇನ್ಸಪೆಕ್ಟರ್ಗೆ ಪರಚಿದ್ದಾರೆ ಎನ್ನಲಾಗುತ್ತಿದೆ. ಅಮ್ಮ-ಮಗಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ.
ಬೆಂಗಳೂರು ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸರ್ಕಾರಿ ಗೌರವದೊಂದಿಗೆ ನಿವೃತ್ತ ಪೊಲೀಸ್ ಅಧಿಕಾರಿಯ ಅಂತ್ಯಕ್ರಿಯೆ ನೆರವೇರಿದೆ. ಮಗ ಕಾರ್ತಿಕೇಶ್ ಅಂತ್ಯ ಸಂಸ್ಕಾರ ನೆರವೇರಿಸಿದರು. ಇತ್ತ HSR ಲೇಔಟ್ ಠಾಣೆಯಲ್ಲಿ ಅಮ್ಮ-ಮಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಲೆ ಮಹಿಳಾ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಕೃತಿ ಪರಚಿದ್ದಾರೆ ಎನ್ನಲಾಗ್ತಿದೆ.
ನಿನ್ನೆ ಪೊಲೀಸರು ವಶಕ್ಕೆ ಪಡೆಯುವ ವೇಳೆ ಕೂಡ ಓಂ ಪ್ರಕಾಶ್ ಮಗಳು ರಂಪಾಟ ಮಾಡಿ ಇಬ್ಬರು ಮಹಿಳಾ ಸಿಬ್ಬಂದಿಗೆ ಪರಚಿದ್ದರು. ಬಳಿಕ ಇಬ್ಬರು ಪೊಲೀಸರು ಆಸ್ಪತ್ರೆಯಲ್ಲಿ ಇಂಜೆಕ್ಷನ್ ಕೂಡ ಪಡೆದಿದ್ದಾರೆ. ಇದೀಗ ಮಹಿಳಾ ಸಬ್ ಇನ್ಸ್ಪೆಕ್ಟರ್ ಒಬ್ಬರಿಗೆ ಕೃತಿ ಪರಚಿದ್ದಾರೆ. ಕೃತಿ ವರ್ತನೆ ಕಂಡು ಪೊಲೀಸ್ ಸಿಬ್ಬಂದಿ ಬೇಸತ್ತಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕೃತಿ ಬಳಿ ಆಕೆಯ ಸ್ನೇಹಿತೆಯನ್ನು ಕಳಿಸಿದ್ದಾರೆ. ಕೃತಿಯನ್ನು ಸ್ನೇಹಿತರ ಮೂಲಕ ಸಮಾಧಾನ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಓಂ ಪ್ರ ಕಾಶ್ ಪತ್ನಿ ಪಲ್ಲವಿಯನ್ನು ಮಾತ್ರ ಬಂಧನ ಮಾಡಿರುವ ಪೊಲೀಸರು, ಮಗಳು ಕೊಲೆಯಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಮಗಳು ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಕೃತಿಯ ಸ್ನೇಹಿತರನ್ನು ಕರೆಸಿ ಮಾಹಿತಿ ಸಂಗ್ರಹಿಸಲಾಗಿದೆ. ಮಗಳು ಕೂಡ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ತಾಯಿ ಹೇಳಿದ್ದಾರೆ. ನಾನೊಬ್ಬಳೇ ಕೊಲೆ ಮಾಡಿದ್ದು ಎಂದು ತಾಯಿ ಪಲ್ಲವಿ ಹೇಳಿದ್ದಾರೆ. ಓಂ ಪ್ರಕಾಶ್ ಮಗಳು ಕೃತಿ ಪೊಲೀಸರಿಗೆ ಸಹಕಾರ ನೀಡದ ಹಿನ್ನಲೆ ಖುದ್ದು ವಿಚಾರಣೆ ಮಾಡಲು ಡಿಸಿಪಿ ಸಾ.ರಾ ಫಾತೀಮಾ ಅವರೇ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ.








