ಬೆಂಗಳೂರು:
ವಿಧಾನಸಭಾ ಚುನಾವಣೆ ಸಮೀಪಿಸುತ್ತೀರುವ ಮುನ್ನ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಬೇಡಿಕೆ ಮತ್ತೆ ಕೇಳಿ ಬರುತ್ತಿದೆ. ಮೊದಲ ರಾಷ್ಟ್ರೀಯ ಮಟ್ಟದ ಲಿಂಗಾಯತ ಮಹಾ ಅಧಿವೇಶನದ ವೇಳೆ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಬೇಡಿಕೆಗೆ ಮರು ಚಾಲನೆ ನೀಡಲು ಕಾರ್ಯತಂತ್ರ ರೂಪಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ಜಾಗತೀಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್‌ಎಂ ಜಾಮದಾರ್ ಹೇಳಿದ್ದಾರೆ.
ರಾಷ್ಟ್ರೀಯ ಲಿಂಗಾಯತ ಸಮ್ಮೇಳನ, ಶನಿವಾರ ಮತ್ತು ಭಾನುವಾರ ಬಸವಕಲ್ಯಾಣದಲ್ಲಿ ನಡೆಯಲಿದೆ. ಪ್ರತ್ಯೇಕ ಧರ್ಮ ಬೇಡಿಕೆಗಾಗಿ ಒತ್ತಾಯಿಸಿ ಹೋರಾಟದ ಬಗ್ಗೆ ಪ್ರತ್ಯೇಕ ಅಧಿವೇಶನದಲ್ಲಿ ಚರ್ಚಿಸಲಾಗುವುದು.
ಕೇಂದ್ರ ಸರ್ಕಾರವು 2018 ರಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ನಿರಾಕರಿಸಿದೆ ಹಾಗೂ ಇದಕ್ಕಾಗಿ ಕೆಲವು ಕಾರಣಗಳನ್ನು ನೀಡಿದೆ ಎಂದು ಜಾಮದಾರ್ ಹೇಳಿದ್ದಾರೆ. ಸಮ್ಮೇಳನದಲ್ಲಿ ಕಾರಣಗಳನ್ನು ಚರ್ಚಿಸಿ, ಜ್ಞಾಪಕ ಪತ್ರವನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಮುಂಬರುವ ವಾರಾಂತ್ಯದಲ್ಲಿ ಸಮ್ಮೇಳನದಲ್ಲಿ ಸಮಸ್ಯೆಯನ್ನು ಚರ್ಚಿಸಿದ ನಂತರ ಹೋರಾಟವನ್ನು ಮರುಪ್ರಾರಂಭಿಸುವುದಾಗಿ ಅವರು ತಿಳಿಸಿದ್ದಾರೆ.
