ಜೈಪುರ
ಕೆಲದಿನಗಳ ಹಿಂದೆ ಹರಿಯಾಣದಲ್ಲಿ ಮಹೀಂದ್ರ ಬೊಲೇರೋ ಎಸ್‌ಯುವಿ ವಾಹನದಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಟ್ಯಾಕ್ಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯಗಳಲ್ಲಿ ಅಭಯಾನಕ ಎಂದು ಹೇಳಬಹುದಾದ ಘಟನೆ ಎಂದರೆ ಇಬ್ಬರು ಮುಸಲ್ಮಾನರನ್ನು ಬೊಲೆರೋ ವಾಹನದಲ್ಲಿ ಇಬ್ಬರನ್ನು ಸಜೀವ ದಹನ ಮಾಡಲಾಗತ್ತು ಎನ್ನಲಾಗಿದೆ ಈ ಪ್ರಕರಣದಲ್ಲಿ ಐವರಿಗೆ ಸಂಬಂಧವಿದ್ದು ಅದರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯಾಣದ ನುಹ್ ಜಿಲ್ಲೆಯ ಫಿರೋಜ್‌ಪುರ ಜಿರ್ಕಾ ನಿವಾಸಿ ರಿಂಕು ಸೈನಿ (32) ಅವರನ್ನು ವಿಚಾರಣೆ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ರಾಜಸ್ಥಾನ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಟ್ಯಾಕ್ಸಿ ಡೈವರ್ ಆಗಿದ್ದ ಸೈನಿ ಗೋರಕ್ಷಕರ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರ ಕುಟುಂಬಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ಸೈನಿ ಮತ್ತು ಇತರ ನಾಲ್ವರನ್ನು ಬಜರಂಗದಳದ ಸದಸ್ಯರು ಎಂದು ಹೆಸರಿಸಲಾಗಿದೆ.
ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಘಾಟ್‌ಮೀಕಾ ಗ್ರಾಮದ ನಿವಾಸಿಗಳಾದ ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಅವರನ್ನು ಬುಧವಾರ ಅಪಹರಿಸಲಾಗಿದ್ದು, ಗುರುವಾರ ಬೆಳಗ್ಗೆ ಹರಿಯಾಣದ ಭಿವಾನಿಯ ಲೋಹರು ಎಂಬಲ್ಲಿ ಅವರಿಬ್ಬರ ದೇಹ ಸುಟ್ಟ ಬೊಲೆರೊ ಎಸ್‌ಯುವಿಯಲ್ಲಿ ಪತ್ತೆಯಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
