ಗಾಂಜಾ ಮಾರಾಟ : ಒಬ್ಬನ ಬಂಧನ….!

ಮಧುಗಿರಿ :

   ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಯುವಕನೊಬ್ಬನನ್ನು ಮಧುಗಿರಿ ಪೋಲೀಸರು ಕಾರ್ಯಾಚರಣೆ ನಡೆಸಿ ಮಾಲು ಸಮೇತ ಬಂಧಿಸಿರುವ ಘಟನೆ ನಡೆದಿದೆ.

   ತಾಲೂಕಿನ ಕಸಬ ವ್ಯಾಪ್ತಿಯ ಸಿದ್ದಾಪುರದಿಂದ ಗೊಲ್ಲರ ಹಟ್ಟಿಗೆ ತೆರಳುವ ಮಾರ್ಗ ಮಧ್ಯೆದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪಟ್ಟಣದ ಫಸ್ಟ್ ಬ್ಲಾಕ್ ವಾಸಿ ಮಹಮದ್ ಹರ್ಷು ಲೇಟ್ ಅಯಾಜ್ ಅಹಮದ್ (24) ಎನ್ನುವವನು ಗುಜರಿ ವ್ಯಾಪರ ಮಾಡುತ್ತ ಈ ದಂದೆ ನಡೆಸುತ್ತಿದ್ದನೆಂದು ತಿಳಿದು ಬಂದಿದ್ದು ಇತನ ಬಳಿಯಿದ್ದ 215 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿರುವ ಮಧುಗಿರಿ ಪೋಲೀಸರು ಆರೋಪಿಯನ್ನು ಬಂಧಿಸಿ 176/24 , 20 (ಬಿ)ಎನ್ .ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿದ್ದಾರೆ.

   ಸಿಪಿಐ ಹನುಮಂತರಾಯಪ್ಪನವರ ನೇತೃತ್ವದಲ್ಲಿ ಪಿಎಸ್ಐ ವಿಜಯಕುಮಾರ್. ಮುಖ್ಯ ಪೇದೆ ಮಲ್ಲಿಕಾರ್ಜುನ್ ಸಿಬ್ಬಂದಿಗಳಾದ ಶಿವಣ್ಣ , ರಂಗರಾಜು , ರಾಜಕುಮಾರ. ರಂಜಿತ್ ಕುಮಾರ್ , ಪಾಂಡು ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Recent Articles

spot_img

Related Stories

Share via
Copy link