ರಾಮನಗರ
ಇತ್ತೀಚಿನ ದಿನಗಳಲ್ಲಿ ಹೈಸ್ಕೂಲ್ ಮೆಟ್ಟಿಲೇರಿರುವುದಿಲ್ಲ ಆಗಲೆ ಪ್ರೀತಿ ಪ್ರೇಮ ಎಂದು ಓದು ಮತ್ತು ಜೀವನ ಹಾಳು ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೊನೆಗೆ ದುರಂತ ಅಂತ್ಯ ಕಾಣುತ್ತಾರೆ ಅಂತಹುದೆ ಒಂದು ಪ್ರಕರಣ ಕನಕಪುರದಲ್ಲಿ ವರದಿಯಾಗಿದೆ.
ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಮೇಲೆ ಒರ್ವ ಯುವಕ ಆಸಿಡ್ ದಾಳಿ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ನಗರದಲ್ಲಿ ಶುಕ್ರವಾರ ನಡೆದಿದೆ.
ಕುರುಪೇಟೆ ಮೂಲದ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ 22 ರ ಯುವಕ ನಗರದ ಬೈಪಾಸ್ ರಸ್ತೆ ಬಳಿ ಆಸಿಡ್ ಅಪ್ರಾಪ್ರ ಬಾಲಕಿ ಮೇಲೆ ಆಸಿಡ್ ದಾಳಿ ಮಾಡಿದ್ದಾನೆ.ಈ ಘಟನೆಯಲ್ಲಿ ಯುವತಿಯ ಎಡ ಭಾಗದ ಕಣ್ಣಿಗೆ ಗಂಭೀರ ಗಾಯವಾಗಿದ್ದು, ನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ನಗರ ವೃತ್ತ ನಿರೀಕ್ಷಕ ಮಿಥುನ್ ಶಿಲ್ಪಿ ಸ್ಥಳ ಪರಿಶೀಲನೆ ನಡೆಸಿ, ಯುವತಿಯ ಹೇಳಿಕೆ ದಾಖಲಿಸಿಕೊಂಡು ಪೋಷಕರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯುವತಿಯನ್ನ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಸಮಂತ್ ನಿನ್ನೆ ಆಕೆಯ ಮನವೊಲಿಸಲು ಶುಕ್ರವಾರ ನಗರದ ಬೈಪಾಸ್ ರಸ್ತೆಯಲ್ಲಿ ಕರೆದೊಯ್ದಿದ್ದ. ಆಕೆ ಒಪ್ಪದಿದ್ದಾಗ ಕುಪಿತಗೊಂಡು ಕಾರ್‌ಎಂಜಿನ್ ಶುಚಿಗೊಳಿಸಲು ಬಳಸುತ್ತಿದ್ದ ಆಸಿಡ್ ನ್ನು ಮುಖದ ಮೇಲೆ ಎರಚಿದ್ದಾನೆ. ಆಸಿಡ್ ದಾಳಿ ಮಾಡಿದ ಸಮಂತ್ ಎಸ್ಕೇಪ್ ಆಗಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.