ಗೆದ್ದರೆ ಸಮುದಾಯ ಭವನಕ್ಕೆ 1 ಕೋಟಿ ಅನುದಾನ :ಎಂ.ಟಿ.ಕೃಷ್ಣಪ್ಪ

ತುರುವೇಕೆರೆ

     45 ದಿನದಲ್ಲಿ ನನ್ನನ್ನು ಶಾಸಕನಾಗಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡಿದರೆ ಶ್ರೀ ಪತ್ರೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಸಮುದಾಯ ಭವನ ನಿರ್ಮಾಣಕ್ಕೆ 1 ಕೋಟಿ ಅನುದಾನ ನೀಡುವುದಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಭರವಸೆ ನೀಡಿದರು.

     ತಾಲ್ಲೂಕಿನ ದಬ್ಬೇಘಟ್ಟ ಸಮೀಪದ ಶ್ರೀ ಪತ್ರೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯಲ್ಲಿ ಭಾನುವಾರ ಬೃಹತ್ ಆಂಜನೇಯಮೂರ್ತಿ ಸ್ಥಾಪನೆ, ಪೂಜೆ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಶಾಸಕರ ಅನುದಾನ 10 ಲಕ್ಷವನ್ನು ನೀಡಿದ್ದೇನೆ. ದಬ್ಬೇಘಟ್ಟ ಹೋಬಳಿಯ ಜನರ ಮೇಲೆ ಎಚ್.ಡಿ.ದೇವೇಗೌಡರಿಗೆ ಅಪಾರ ಪ್ರೀತಿ ಇದೆ.

    ಹೋಬಳಿ ಜನರೂ ಸಹ ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮೇಲೆ ಹೆಚ್ಚು ಗೌರವ ಇಟ್ಟು ಕೊಂಡಿದ್ದಾರೆ. ಆದ್ದರಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 15 ಸಾವಿರ ಲೀಡ್ ಕೊಟ್ಟು ನನ್ನನ್ನು ಗೆಲ್ಲಿಸಿ ಎಂದು ಜನತೆಯಲ್ಲಿ ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜೆಡಿಎಸ್ ಅಧ್ಯಕ್ಷ ಸ್ವಾಮಿ, ಮುಖಂಡರಾದ ಎ.ಬಿ.ಜಗದೀಶ್, ಬಾಣಸಂದ್ರ ರಮೇಶ್, ದೊಡ್ಡಾಘಟ್ಟ ಚಂದ್ರೇಶ್, ಬಿ.ಎಸ್.ದೇವರಾಜು, ವೆಂಕಟಾಪುರ ಯೋಗೀಶ್, ಡಿ.ಪಿ.ರಾಜು, ಬಡಗರಹಳ್ಳಿ ತ್ಯಾಗರಾಜು, ಮಧು, ಲಕ್ಷö್ಮಣ್‌ಗೌಡ, ಪ್ರಸನ್ನಕುಮಾರ್, ತಿಮ್ಮೇಗೌಡ, ಎಂ.ಎನ್. ಚಂದ್ರೇಗೌಡ, ವಕೀಲ ಧನಪಾಲ್, ಹರೀಶ್, ರಮೇಶ್, ಆನಂದ್ ಮರಿಯಾ, ಲೀಲಾವತಿ ಗಿಡ್ಡಯ್ಯ, ಸೇರಿದಂತೆ ಅನೇಕ ಮುಖಂಡರು ಹಾಗೂ ಅಪಾರ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap