ಕ್ಷುಲಕ ಕಾರಣಕ್ಕೆ ಜಗಳ: ಓರ್ವ ಕೊಲೆ

ಹುಬ್ಬಳ್ಳಿ:

    ಕ್ಷುಲಕ ಕಾರಣಕ್ಕೆ ಒಂದೇ ಮನೆಯಲ್ಲಿ ಬಾಡಿಗೆ ಇದ್ದ ಇಬ್ಬರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಕೊಲೆಯಾಗಿರುವ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬಿಹಾರ ಮೂಲದ ಮಿಥಿಲೇಶಕುಮಾರ ಕೊಲೆಯಾದವ. ರಾಜೇಶಕುಮಾರ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.ಕಳೆದ‌ರಾತ್ರಿ ಇಬ್ಬರ ನಡುವೆ ಮನೆಯಲ್ಲಿ ಗಲಾಟೆಯಾಗಿತ್ತು. ಈ ವೇಳೆ ಹಲ್ಲೆ ಮಾಡಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಿಥಿಲೇಶಕುಮಾರ ಮೃತಪಟ್ಟಿದ್ದಾನೆ. ಪೊಲೀಸರು ಪರಿಶೀಲನೆ‌ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link