ಬೆಂಗಳೂರು :
ಬೆಂಗಳೂರು ನಗರದ ರಸ್ತೆಯೊಂದಕ್ಕೆ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ.
ಬೆಂಗಳೂರು ಯಲಹಂಕ ನ್ಯೂಟೌಟ್‍ನ ಎ ಸೆಕ್ಟರ್ 13ನೇ ಎ ಮುಖ್ಯರಸ್ತೆ, 3ನೇ ಎ ಅಡ್ಡರಸ್ತೆಯು ಇಂದಿನಿಂದ ಮೇಜರ್ ಅಕ್ಷಯ್ ಗಿರೀಶ್ ರಸ್ತೆ ಎನ್ನುವುದಾಗಿ ಕರೆಯಲ್ಪಡುತ್ತದೆ.
ಬೆಂಗಳೂರಿನ ಯಲಹಂಕದವರಾಗಿದ್ದ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಭಾರತೀಯ ಸೇನೆ ಸೇರಿಕಾಶ್ಮೀರದ ಗಡಿಯಲ್ಲಿ ಉಗ್ರರೊಡನೆ ಹೋರಾಡುತ್ತಾ 2016ರ ನವೆಂಬರ್‍ನಲ್ಲಿ ಹುತಾತ್ಮರಾಗಿದ್ದರು.
ಈ ಕುರಿತು “ವಿಜಯ್ ದಿವಸ್ ಆದ ಈ ದಿನ ಕರ್ನಾಟಕದ ಹೆಮ್ಮೆಯ ಸೈನಿಕ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಅವರ ಹೆಸರನ್ನು ನಗರದ ಪಶ್ಚಿಮ ವಿಭಾಗದ ರಸ್ತೆಗೆ ನಾಮಕರಣ ಮಾಡುತ್ತಿದ್ದೇವೆ.ಅಕ್ಷಯ್ ಗಿರೀಶ್ ನಾಗ್ರೋಟಾದಲ್ಲಿ ಉಗ್ರಗಾಮಿಗಳೊಂದಿಗೆ ಹೋರಾಡಿ ಹುತಾತ್ಮರಾಗಿದ್ದಾರೆ.” ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.