ಸಂಚಾರಿ ಕಣ್ಣಾಸ್ಪತ್ರೆಗೆ ಚಾಲನೆ
ಪಾವಗಡ :
ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರು ಕೂಡ ಕಣ್ಣಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು ಎಂದು ಸ್ವಾಮಿ ಜಪಾನಂದಜಿ ತಿಳಿಸಿದರು. ಅವರು ತುಮಕೂರು ನಗರದ ಎಂಪ್ರೆಸ್ ಬಾಲಕಿಯರ ಪಾಠಶಾಲೆಯಲ್ಲಿ ಶ್ರೀ ಶಾರದಾದೇವಿ ಸಂಚಾರಿ ಕಣ್ಣಿನ ಆಸ್ಪತ್ರೆ ವತಿಯಿಂದ ಸಂಚಾರಿ ನೇತ್ರ ಚಿಕಿತ್ಸಾಲಯಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಬೋರ್ಡ್ ಮೇಲೆ ಬರೆದ ಅಕ್ಷರಗಳು ಕಾಣುವುದಿಲ್ಲ ಎಂದಾದಲ್ಲಿ ತಕ್ಷಣ ತಮ್ಮ ಶಿಕ್ಷಕರಿಗೆ ಅಥವಾ ಪೋಷಕರಿಗೆ ತಿಳಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಇಂತಹ ತೊಂದರೆಯಿAದ ಬಳಲುವವರಿಗಾಗಿಯೇ ಈ ಸಂಚಾರಿ ಕಣ್ಣಿನ ಆಸ್ಪತ್ರೆಯನ್ನು ಪ್ರಾರಂಭ ಮಾಡಲಾಗಿದೆ. ಇದು ರಾಜ್ಯದಲ್ಲಿಯೇ ಕ್ರಾಂತಿಕಾರಿ ಯೋಜನೆಯಾಗಿದೆ, ಯೋಜನೆಯನ್ನು ಸುಮಾರು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಇನ್ಫೋಸಿಸ್ ಸಂಸ್ಥೆಯವರ ಸಹಕಾರದೊಂದಿಗೆ ರೂಪಿಸಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ವಿನಂತಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಮಾತನಾಡುತ್ತಾ, ಶಿಕ್ಷಣದಲ್ಲಿ ಉತ್ತಮ ವಿಷಯಗಳನ್ನು ಮಕ್ಕಳಿಗೆ ಪರಿಚಯಿಸಿ ಮಾತಾ-ಪಿತೃಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯವು ಮುಖ್ಯ ಎಂಬ ಜವಾಬ್ದಾರಿ ಹೊರಬೇಕು. ಸರ್ಕಾರವು ಮಾಡುವಂತಹ ಕೆಲಸಗಳನ್ನು ಪಾವಗಡದ ಜಪಾನಂದ ಮಹಾರಾಜ್ ಮಾಡಿರುವ ಸಾಧನೆ ಎಂದು ಮರೆಯುವಂತಿಲ್ಲ. ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗಳನ್ನು ಆರೋಗ್ಯ ಶಿಕ್ಷಣ ಸಮಾನತೆಯನ್ನು ತೋರಿಸಿರುವಂತಹ ಸ್ವಾಮಿಗಳವರನ್ನು ಎಂದೂ ಮರೆಯುವಂತಿಲ್ಲ ಎಂದರು.
ತುಮಕೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್,ಪ್ರಜಾಪ್ರಗತಿ ಪ್ರಾದೇಶಿಕ ದಿನಪತ್ರಿಕೆ – ಪ್ರಗತಿ ಟಿ ವಿ ವಾಹಿನಿಯ ಎಸ್. ನಾಗಣ್ಣ ಹಾಗೂ ತುಮಕೂರು ಜಿಲ್ಲಾ ಕುಟುಂಬ ಕಲ್ಯಾಣ ಆರೋಗ್ಯ ಅಧಿಕಾರಿ ಡಾ. ಮಂಜುನಾಥ್ ರವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
