ಬೆಂಗಳೂರು
ಎಲ್ಲಾ ಉಪ ಖನಿಜ ಮತ್ತು ಮುಖ್ಯ ಖನಿಜ ಸಾಗಾಣಿಕೆ ಮಾಡುವ ವಾಹನಗಳಾದ ಲಾರಿ, ಟಿಪ್ಪರ್ ಗಳನ್ನು ಒನ್ ಸ್ಟೇಟ್ ಒನ್ ಜಿಪಿಸ್ ವ್ಯವಸ್ಥೆಗೆ ಒಳಪಡಿಸುವ ಕಾರ್ಯಕ್ರಮದಿಂದ ಸೋರಿಕೆ ತಡೆಗಟ್ಟಿ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಖನಿಜ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ?ಒನ್ ಸ್ಟೇಟ್ ಒನ್ ಜಿಪಿಸ್? ಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಹೊಸ ಬದಲಾವಣೆಯೊಂದಿಗೆ ಸಾಗುವುದು ಅತ್ಯಂತ ಅಗತ್ಯವಾಗಿದ್ದು, ಖನಿಜ ಸಾಗಣೆ ವಾಹನಗಳು ತಂತ್ರಾAಶದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು. ಸೋರಿಕೆ ತಡೆಗಟ್ಟಲು ಅಧಿಕಾರಿಗಳು ಕಣ್ಗಾವಲು ಹಾಕಬೇಕು ಎಂದರು.
ಗಣಿ ಗುತ್ತಿಗೆ ಪ್ರದೇಶದಿಂದ ಅಗತ್ಯ ಸ್ಥಳ ತಲುಪಿರುವುದನ್ನು ತಂತ್ರಾಂಶದಿಂದ ಖಾತರಿಪಡಿಸಿಕೊಳ್ಳ ಬಹುದು. ಗುತ್ತಿಗೆ ಪ್ರದೇಶ ಹೊರತುಪಡಿಸಿ ಇತರೆ ಪ್ರದೇಶಗಳಿಂದ ಖನಿಜ ಸಾಗಾಣಿಕೆ ಮಾಡುವ ವಾಹನಗಳ ಚಲನವಲನಗಳ ಬಗ್ಗೆ ನಿಗಾವಹಿಸಲು ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಅನಧಿಕೃತ ಗಣಿಗಾರಿಕೆ ನಡೆಯುವ ಸ್ಥಳ ಗಳಲ್ಲಿ ವಾಹನಗಳ ಸಂಚಾರದ ಮೇಲೆ ನಿಗಾವಹಿಸಲು ಮತ್ತು ಅಕ್ರಮ ಸಾಗಾಣಿಕೆ ನಿಯಂತ್ರಿಸಲು ಹಾಗೂ ಖನಿಜ ಸಾಗಾಣಿಕೆ ಪರವಾನಿಗೆಗಳನ್ನು ಮರು ಬಳಕೆ ಮೇಲೆ ನಿಗಾವಹಿಸಲು ಸಹಕಾರಿಯಾಗಲಿದೆ ಎಂದರು.
ಒಂದು ಬಾರಿಗೆ ವಾಹನ ನೋಂದಣಿ ಶುಲ್ಕ ಪಡೆಯಲು, ತಂತ್ರಾAಶ ಅಭಿವೃದ್ಧಿಪಡಿಸುವ, ವಾರ್ಷಿಕ ನಿರ್ವಹಣೆ, ಮಾನವ ಸಂಪನ್ಮೂಲ, ಇತರೆ ವಿಷಯಗಳನ್ನು ಒಳಗೂಂಡ ವಾರ್ಷಿಕ ವೆಚ್ಚವನ್ನು ಲಾರಿ ಮಾಲೀಕರಿಂದ ಭರಿಸಲು ತೀರ್ಮಾನಿಸಲಾಗಿದೆ. ವಾಹನಗಳ ನೋಂದಣಿ ಸಮಯದಲ್ಲಿ ಒಂದು ಬಾರಿಗೆ 100 ರೂ ನೋಂದಣಿ ಶುಲ್ಕ, 500 ರೂ ವಾರ್ಷಿಕ ನಿರ್ವಹಣೆ ವೆಚ್ಚವನ್ನು ವಾಹನ ಮಾಲೀಕರು ಪಾವತಿಸಬೇಕು.
ಈ ಸಂಬಂಧ ಎಲ್ಲಾ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾರ್ಗಸೂಚಿ ನೀಡಲಾಗಿದೆ. ನೋಂದಣಿಗೆ ಒಂದು ತಿಂಗಳು ಕಾಲಾವಕಾಶ ನೀಡಿದ್ದು, ಉಲ್ಲಂಘನೆ ಮಾಡಲಾದ ವಾಹನಗಳ ಮೇಲೆ ಕಾಯ್ದೆ ಮತ್ತು ನಿಯಮಗಳನ್ವಯ ಸೂಕ್ತ ಕ್ರಮಕೈಗೊಳ್ಳಲು ಈಗಾಗಲೇ ಇಲಾಖೆಯ ಜಿಲ್ಲಾ ಕಛೇರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.
ಕರ್ನಾಟಕ ಖನಿಜ ಸಂಪತ್ಭರಿತ ರಾಜ್ಯವಾಗಿದ್ದು, ಮುಖ್ಯವಾಗಿ ಕಬ್ಬಿಣ, ಮ್ಯಾಂಗನೀಸ್, ಸುಣ್ಣದಕಲ್ಲು, ಕಟ್ಟಡ ಕಲ್ಲು, ಅಲಂಕಾರಿಕಾ ಶಿಲೆ, ಮರಳು, ಎಂ-ಸ್ಯಾAಡ್ ಇತ್ಯಾದಿ ಖನಿಜಗಳಿಗೆ ಗುತ್ತಿಗೆ, ಪರವಾನಿಗೆ ನೀಡಲಾಗಿದೆ. ರಾಜ್ಯಾದ್ಯಂತ ಖನಿಜಾಧಾರಿತ ಕಾರ್ಖಾನೆಗಳು, ಸಂಸ್ಕರಣಾ ಘಟಕಗಳು, ಕ್ರಷರ್ ಘಟಕಗಳು, ಪಾಲಿಷಿಂಗ್ ಯುನಿಟ್ ಗಳಿಗೆ ಖನಿಜ ಸಾಗಾಣಿಕೆಯು ಬಹುತೇಕ ರಸ್ತೆ ಮೂಲಕ ಸಾಗಾಣಿಕೆಯಾಗುತ್ತಿದೆ ಎಂದರು.
ಅಕ್ರಮ ಖನಿಜ ಸಾಗಾಣೆ ತಡೆಗಟ್ಟಲು ಈ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳ ಬೇಕಾಗಿದೆ. ಅಧಿಕಾರಿ ವರ್ಗ ಹೊಣೆಗಾರಿಕೆ ಮರೆಯಬಾರದು. ನಾಮಕಾಸ್ತೆಯಿಂದ ಕೆಲಸ ಮಾಡಿದರೆ ಗೌರವ ದೊರೆಯುವುದಿಲ್ಲ. ರಾಜ್ಯ ಮತ್ತು ಬೊಕ್ಕಸಕ್ಕೆ ಇದರಿಂದ ಅನುಕೂಲವಿಲ್ಲ, ಇಂದು ಪುರುಷ ಪ್ರಧಾನ ಸಮಾಜ ಎನ್ನುವುದು ಬದಲಾಗಿದ್ದು, ಎಲ್ಲಾ ಇಲಾಖೆಗಳಲ್ಲಿ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಕರ್ತವ್ಯ ನಿರ್ವಹಿಸಿ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆ ತನ್ನ ಪಾಡಿಗೆ ನಡೆಯುತ್ತದೆ. ನಿಮ್ಮ ಕೆಲಸ ಕಾರ್ಯಗಳನ್ನು ಮತ್ತು ಕೊಟ್ಟಿರುವ ಜವಾಬ್ದಾರಿಯನ್ನು ಮುತುವರ್ಜಿ ವಹಿಸಿ ಮಾಡಬೇಕು. ಇರುವ ವ್ಯವಸ್ಥೆಯನ್ನು ಸರಿಯಾಗಿ ಬಳಕೆ ಮಾಡಿಕೊಂಡಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ