10 ಮತ್ತು 12 ನೇ ಕ್ಲಾಸಿನ ವಿದ್ಯಾರ್ಥಿಗಳಿಗೆ ಮಾತ್ರ ಆನ್​ಲೈನ್ ತರಗತಿಗಳು, ಉಳಿದವರಿಗೆ ಕೇವಲ ಆಫ್​ಲೈನ್: ಆರ್ ಅಶೋಕ

ಬೆಂಗಳೂರು:

  ನಮ್ಮ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಲ್ಲಿ ಪಾಸಿಟಿವಿಟಿ ದರ ಶೇಕಡಾ ಮೂರಕ್ಕಿಂತ ಹೆಚ್ಚಾಗಿದೆ ಎಂದರು. ಸೋಂಕು 20 ರಿಂದ 50 ವರ್ಷ ವಯಸ್ಸಿನವರಿಗೆ ತಾಕುತ್ತಿದೆ ಎಂದು ಅಶೋಕ ಹೇಳಿದರು.

          ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಒಂದೇಸಮ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಸಂಪುಟದ ಸಹೋದ್ಯೋಗಿ, ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘವಾದ ಸಭೆ ನಡೆಸಿ ಸೋಂಕನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ದೃಷ್ಟಿಯಿಂದ ಕೆಲವು ನಿಯಮಗಳನ್ನು ಜಾರಿಗೊಳಿಸುವ ನಿರ್ಧಾರ ತೆಗೆದುಕೊಂಡರು.

        ಸಭೆಯ ಬಳಿಕ ಹಿರಿಯ ಸಚಿವ ಆರ್ ಅಶೋಕ ಅವರು ಸರ್ಕಾರ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು.

          ಬೆಂಗಳೂರು ನಗರ ಪ್ರದೇಶದಲ್ಲಿ ಕೇವಲ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಆಫ್ ಲೈನ್ ತರಗತಿ ನಡೆಸುವ ಅವಕಾಶವನ್ನು ನೀಡಲಾಗಿದ್ದು 1ರಿಂದ 9 ನೇ ತರಗತಿಗಳನ್ನು ಕೇವಲ ಅನ್ ಲೈನಲ್ಲಿ ನಡೆಸುವಂತೆ ಶಾಲಾ ಕಾಲೇಜುಗಳಿಗೆ ತಿಳಿಸಲಾಗಿದೆ ಎಂದು ಅಶೋಕ ಹೇಳಿದರು.

ಅಮೇರಿಕನಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಕಾಳ್ಗಿಚಿನಂತೆ ಹಬ್ಬುತ್ತಿವೆ ಸದ್ಯಕ್ಕೆ ಆ ದೇಶದಲ್ಲೊಂದೇ 5 ಕೋಟಿಗೂ ಹೆಚ್ಚು ಸೋಂಕಿತರಿದ್ದಾರೆ ಎಂದು ಹೇಳಿದ ಸಚಿವರು ರಾಜ್ಯದ ಅರೋಗ್ಯ ಸಚಿವ ಡಾ ಕೆ ಸುಧಾಕರ್ ಆ ದೇಶದ ಕೋವಿಡ್ ಸ್ಥಿತಿಯ ಬಗ್ಗೆ ಮಾಹಿತಿ ತರಿಸಿಕೊಂಡಿದ್ದಾರೆ ಎಂದು ಹೇಳಿದರು.

ನಮ್ಮ ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಲ್ಲಿ ಪಾಸಿಟಿವಿಟಿ ದರ ಶೇಕಡಾ ಮೂರಕ್ಕಿಂತ ಹೆಚ್ಚಾಗಿದೆ ಎಂದರು. ಸೋಂಕು 20 ರಿಂದ 50 ವರ್ಷ ವಯಸ್ಸಿನವರಿಗೆ ತಾಕುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರಿನಲ್ಲಿ ನಾಳೆ ರಾತ್ರಿಯಿಂದ ಎರಡು ವಾರಗಳ ಕಾಲ ನೈಟ್ ಕರ್ಫ್ಯೂ ಜಾರಿಗೆ ಬರುತ್ತದೆ ಎಂದು ಆರ್ ಆಶೋಕ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap