ಮಧುಗಿರಿ :
ಮಹಿಳಾ ಸರ್ಕಾರಿ ನೌಕರೊಬ್ಬರ ಮೊಬೈಲ್ ಗೆ ಬಂದಿದ್ದ ಎಸ್ ಎಂ ಎಸ್ ತೆರೆದಾಗ ಆಕೆಯ ಮತ್ತು ಮಗಳ ಉಳಿತಾಯ ಖಾತೆಯಲ್ಲಿದ್ದ ಒಟ್ಟು 2,45,009 ರೂ ಗಳನ್ನು ಕೆಲವೇ ಕ್ಷಣಗಳಲ್ಲಿ ಲಪಾಟಿಸಿ ಯಾಮಾರಿಸಿರುವ ಘಟನೆ ನಡೆದಿದೆ.
ಪಟ್ಟಣದ ರಾಘವೇಂದ್ರ ಕಾಲನಿಯ ವಾಸಿಯಾಗಿರುವ. ಸೌಮ್ಯಶ್ರೀ ಎಸ್.ಎಂ. ಕೋಂ ಲೇಟ್ ಶಶಿಧರಾಚಾರ್ ಎನ್ನುವವರು ಮಧುಗಿರಿ ಟೌನ್, ತುಮಕೂರು ಗೇಟ್ ಬಳಿಯ ಕೆನರಾ ಬ್ಯಾಂಕ್ ನ ಖಾತೆ ನಂ. 20112610004535 ನೇ ಖಾತೆಯನ್ನು ಹೊಂದಿದ್ದು, ಈ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದು ಹಾಗೂ ನನ್ನ ಮಗಳು ಇಂಪನಾ ಎಸ್. ಆಚಾರ್ಯ ಎಂಬವರ ಹೆಸರಿನಲ್ಲಿ ಕೆನರಾ ಬ್ಯಾಂಕ್ ಖಾತೆ ನಂ. 110168508620 ಗೂ ಸಹ ಇದೆ ಮೇಲ್ಕಂಡ ನನ್ನ ಮೊಬೈಲ್ ನಂಬರ್ ಲಿಂಕ್ ಮಾಡಲಾಗಿತ್ತು.
ಅ.26 ರಂದು ಸಂಜೆ ಸುಮಾರು 04-55 ಗಂಟೆ ಸಮಯದಲ್ಲಿ.. ನನ್ನ ಮೊಬೈಲ್ ಗೆ ಬಂದ ಎಸ್.ಎಂ.ಎಸ್ ನ್ನು ಓಪನ್ ಮಾಡಿದ ನಂತರ ನನ್ನ ಕೆನರಾ ಬ್ಯಾಂಕ್ ಅಕೌಂಟ್ ನಂ. 20112610004535 ನಿಂದ ಕೆಲವೇ ನಿಮಿಷಗಳಲ್ಲಿ 99,999/- ರೂ.ಗಳು ಡೆಬಿಟ್ ಆಗಿರುವ ಬಗ್ಗೆ, ಮೆಸೇಜ್ ಬಂದಿದ್ದು, ಸದರಿ ಅಮೌಂಟ್ ಕಟ್ ಆಗಿದೆ. ಮತ್ತೆ ಸಂಜೆ 04-59 ಗಂಟೆಗೆ ನಂತರ ಸಂಜೆ 05-06 ನಿಮಿಷಕ್ಕೆ ಸದರಿ ಖಾತೆಯಿಂದಲೇ 80,000/- ಹಣ ಡೆಬಿಟ್ ಆದ ಬಗ್ಗೆ, ಎಸ್.ಎಂ.ಎಸ್. ಬಂದಿದ್ದು, ನಂತರ ಸಂಜೆ 05-12 ಗಂಟೆಗೆ ಮಹಿಳೆಯ ಕೆನರಾ ಬ್ಯಾಂಕ್ ಅಕೌಂಟ್ ನಿಂದ 65,000/- ರೂ. ಡೆಬಿಟ್ ಆದ ಬಗ್ಗೆ ಮೆಸೇಜ್ ಬಂದಿದ್ದು, ಈ ಬಗ್ಗೆ ಮಹಿಳೆಯು ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿ ಆಕೌಂಟ್ ಗೆ ಲಿಂಕ್ ಆಗಿರುವ ಯುಪಿಐ ನಂಬರ್ ಗಳನ್ನು ಹಾಗೂ ಪೋನ್ ಪೇ, ಗೂಗಲ್ ಪೇ, ಎ.ಟಿ.ಎಂ ಕಾರ್ಡನ್ನು ಲಾಕ್ ಮಾಡಿಸಿ ಸೈಬರ್ ಹೆಲ್ಪ್ ಲೈನ್ ನಂಬರ್ ಗೆ ಸಹ ಕರೆ ಮಾಡಿ ದೂರು ನೀಡಿದ್ದಾರೆ.
ಅ.27 ರಂದು ರಾತ್ರಿ 11-10 ಗಂಟೆಯಲ್ಲಿ ನನ್ನ ಮಗಳು ಇಂಪನಾ ಎಸ್. ಆಚಾರ್ಯ ಎಂಬವರ ಹೆಸರಿನಲಿ. ಕೆನರಾ ಬ್ಯಾಂಕ್ ಖಾತೆ ನಂ. 110168508620 ನಿಂದ ಸಹ 10/- ರೂ. ಡೆಬಿಟ್ ಆದ ಬಗ್ಗೆ ಮೆಸೇಜ್ ಬಂದಿದೆ. ಅ-28 ರಂದು ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿ ನನ್ನ ಮಗಳ ಅಕೌಂಟ್ ನಂಬರ್ ನ್ನು ಸಹ ಲಾಕ್ ಮಾಡಿಸಿದ್ದಾರೆ.
ಸೈಬರ್ ವಂಚಕರು ಮೊಬೈಲ್ ಗೆ ಮೆಸೇಜ್ ಕಳುಹಿಸಿ ಮೆಸೇಜ್ ನ ಲಿಂಕ್ ಮುಖಾಂತರ ಮಹಿಳೆ ಮತ್ತು ಆಕೆಯ ಪುತ್ರಿಯ ಬ್ಯಾಂಕ್ ಆಕೌಂಟ್ ನ್ನು ಹ್ಯಾಕ್ ಮಾಡಿ ವಂಚನೆ ಮಾಡಿ ಕೆನರಾ ಬ್ಯಾಂಕ್ ಖಾತೆಯಿಂದ ಒಟ್ಟು 2,44,999/- ರೂ. ಹಾಗೂ ಮಗಳ ಬ್ಯಾಂಕ್ ಖಾತೆಯಿಂದ 10/- ರೂ ಗಳನ್ನು ಮೋಸದಿಂದ ಹಣವನ್ನು ತೆಗೆದುಕೊಂಡಿರುವವರನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
