ಬೆಂಗಳೂರು
ಕರ್ನಾಟಕದ ಸರ್ಕಾರಿ ಶಾಲೆಗಳ ಪೈಕಿ, ಸುಮಾರು 6,158 ಸರ್ಕಾರಿ ಶಾಲೆಗಳಲ್ಲಿ ತಲಾ ಒಬ್ಬರು ಶಿಕ್ಷಕರು ಮಾತ್ರವೇ ಇದ್ದಾರೆ. ಈ ಶಾಲೆಗಳಲ್ಲಿ ಒಟ್ಟು 1.38 ಲಕ್ಷ ವಿದ್ಯಾರ್ಥಿಗಳಿದ್ದು, ಅವರಿಗೆ ಪಾಠ ಕಲಿಸುವ ಜವಾಬ್ದಾರಿ ಆಯಾ ಶಾಲೆಗಳ ಏಕೈಕ ಶಿಕ್ಷಕರ ಮೇಲಿದೆ.
ಇದು, ಶಿಕ್ಷಣ ವ್ಯವಸ್ಥೆಯ ಅಸ್ಥಿರತೆ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಲಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ (2023-24) ಏಕೈಕ ಶಿಕ್ಷಕರನ್ನು ಹೊಂದಿರುವ 6,360 ಶಾಲೆಗಳು ರಾಜ್ಯದಲ್ಲಿದ್ದವು. ಈ ವರ್ಷ (2024-25) ಈ ಶಾಲೆಗಳ ಸಂಖ್ಯೆ 6,158 ಇಳಿಕೆಯಾಗಿದೆ. ಕೆಲವು ಶಾಲೆಗಳಲ್ಲಿದ್ದ ಹೆಚ್ಚುವರಿ ಶಿಕ್ಷಕರನ್ನು ಏಕೈಕ ಶಿಕ್ಷಕರಿಸಿದ್ದ ಶಾಲೆಗಳಿಗೆ ವರ್ಗಾಯಿಸಲಾಗಿದೆ.ಗಮನಾರ್ಹವೆಂದರೆ, ಈ ವರ್ಷ 530 ಶಾಲೆಗಳು ಶೂನ್ಯ ದಾಖಲಾತಿ ಹೊಂದಿವೆ. ಶಿಕ್ಷಕರ ಕೊರತೆಯು ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಂದ ದೂರ ಮಾಡುತ್ತಿದೆ.
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮಬಲ ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ ರಾಜ್ಯಾದ್ಯಂತ ಸುಮಾರು 5,000 ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಮುಂದಾಗಿದೆ ಎಂದು ಇಲಾಖೆಯ ಆಯುಕ್ತ ಕೆ.ವಿ ತ್ರಿಲೋಕಚಂದ್ರ ತಿಳಿಸಿದ್ದಾರೆ.