ಕುಣಿಗಲ್:
ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುತ್ರಿದುರ್ಗ ಬೆಟ್ಟದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು.
ಐತಿಹಾಸಿಕ ಪ್ರವಾಸಿ ತಾಣ ಹಾಗೂ ಸಂರಕ್ಷಿತ ಗಿರಿಧಾಮವಾಗಿ ಗುರುತಿಸಿಕೊಂಡಿರುವ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಬೆಟ್ಟದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಲಾಗುತ್ತಿರುವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಗೋಮಾಳ ಸರ್ವೆ ನಂ 205 ರಲ್ಲಿ ಒಂದು ಎಕರೆ ಐದು ಗುಂಟೆ ಭೂಮಿಯನ್ನು ಕಸ ವಿಲೇವಾರಿ ಘಟಕ ಸ್ಥಾಪನೆಗೆ ಈಗಾಗಲೆ ಕಂದಾಯ ಇಲಾಖೆಯಿಂದ ಭೂಮಿ ಮಂಜೂರು ಮಾಡಲಾಗಿದ್ದು, ಸದರಿ ಜಾಗವನ್ನು ಹುತ್ರಿದುರ್ಗ ಬೆಟ್ಟದಲ್ಲಿ ಗುರುತಿಸಲಾಗಿದೆ. ಈಗಾಗಲೆ ಗ್ರಾಮ ಪಂಚಾಯಿತಿ ವತಿಯಿಂದ ಕಾಮಗಾರಿ ಆರಂಭಿಸಲಾಗಿದ್ದು, ಬೆಟ್ಟದ ಬುಡದಲ್ಲಿ ನಾಲೈದು ಅಡಿ ಆಳದÀಷ್ಟು ಭೂಮಿಯನ್ನು ಅಗೆಯಲಾಗಿದ್ದು, ಮುಂದಿನ ದಿನಗಳಲ್ಲಿ ಬೆಟ್ಟ ಕುಸಿಯುವ ಆತಂಕ ಗ್ರಾಮಸ್ಥರಿಗೆ ಎದುರಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿವೆ. ಈಗಾಗಲೆ ಬೆಟ್ಟದ ಹಲವು ಕಡೆಗಳಲ್ಲಿ ಕುಸಿತ ಉಂಟಾಗಿದೆ. ಹೀಗೆಯೆ ಬೆಟ್ಟದ ಹಲವು ಕಡೆಗಳಲ್ಲಿ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿದರೆ.
ತಾಲ್ಲೂಕಿನ ಐತಿಹಾಸಿಕ ಪ್ರವಾಸಿ ಸ್ಥಳವಾಗಿ ಗುರುತಿಸಿಕೊಂಡಿರುವ ಹುತ್ರಿದುರ್ಗ ಬೆಟ್ಟದ ಅವನತಿಗೆ ಕಾರಣವಾಗಬಹುದೆಂಬ ನಿಟ್ಟಿನಲ್ಲಿ ಗುರುವಾರ ಗ್ರಾಮಸ್ಥರು ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಹುತ್ರಿದುರ್ಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹೆಚ್.ಡಿ ಮಲ್ಲೇಶ್, ಗ್ರಾಮಸ್ಥರಾದ ಲಕ್ಕಣ್ಣ, ಆನಂದ್, ಪ್ರಮೋದ್, ಈಶ್ವರ್, ಗೌರಮ್ಮ, ಶಿವಮ್ಮ, ಚಿಕ್ಕಮ್ಮ, ರಂಗಮ್ಮ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
