ತುಮಕೂರು : ಡಿ.9ರಿಂದ ಜಿಲ್ಲೆಯಲ್ಲಿ ಸಾಧಾರಣ ಮಳೆ….!

ತುಮಕೂರು: 

    ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ತುಮಕೂರು ಜಿಲ್ಲೆಯಾದ್ಯಂತ ಡಿಸೆಂಬರ್ 09 ರಿಂದ ಡಿಸೆಂಬರ್ 12 ರವರಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಗಾಳಿಯು ಗಂಟೆಗೆ ಸರಾಸರಿ 10.0-14.0 ಕಿ.ಮೀ. ವೇಗದಲ್ಲಿ ಬೀಸುವ ಸಂಭವವಿದೆ. ಗರಿಷ್ಟ ಉಷ್ಣಾಂಶ 28.00-29.00 ಮತ್ತು ಕನಿಷ್ಟ ಉಷ್ಣಾಂಶ 18.00-20.00, ಬೆಳಗಿನ ಆದ್ರತೆ ಪ್ರಮಾಣ ಶೇ 94-96 ಇದ್ದು ಮಧ್ಯಾಹ್ನ ಶೇ 60-67ಇರುವ ಸಾಧ್ಯತೆಇದೆ.

    ಮೋಡಕವಿದ ವಾತಾವರಣ ಮತ್ತು ಹಗುರದಿಂದ ಸಾಧಾರಣಮಳೆಯಾಗುವ ಸಂಭವವಿದ್ದು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಸ್ಯಸಂರಕ್ಷಣೆ ಸಿಂಪರಣೆ, ಬೆಳೆಗಳ ಕಟಾವು ಮತ್ತು ಒಕ್ಕಣೆ ಮಾಡುವುದನ್ನು ಮುಂದೂಡಬೇಕು.ಎಂದು ತಿಪಟೂರು ತಾ.ಕೊನೇಹಳ್ಳಿಯ ಕೃಷಿ ವಿಜ್ಞಾನಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿಗಳು ಹಾಗೂ ಮುಖ್ಯಸ್ಥರಾದ ಡಾ.ಗೋವಿಂದಗೌಡ. ವಿ.ರವರು ಮಾಹಿತಿ ನೀಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link