ಹುಟ್ಟು ಸಾವುಗಳು ಆಕಸ್ಮಿಕ ,ನಮ್ಮ ಹೆಜ್ಜೆ ಗುರುತು ಮಾದರಿಯಾಗಬೇಕು : ಕೆ ಎನ್‌ ಆರ್‌

ಮಧುಗಿರಿ:

    ಹುಟ್ಟು ಸಾವುಗಳು ಆಕಸ್ಮಿಕ ಆದರೆ ನಾವುಗಳು ಸಮಾಜದಲ್ಲಿ ಬಿಟ್ಟು ಹೋಗುವ ಹೆಜ್ಜೆ ಗುರುತುಗಳು ಇತರರಿಗೆ ಮಾದರಿಯಾಗಬೇಕೆಂದು ಹಾಸನ ಉಸ್ತುವಾರಿ ಸಚಿವರು ಹಾಗೂ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅಭಿಪ್ರಾಯ ಪಟ್ಟರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಕಾರ ರತ್ನ ಕೆ. ಎನ್. ಆರ್. ಸಭಾಂಗಣದಲ್ಲಿ
ಪ್ರಾಂಶುಪಾಲ ಪ್ರೊ. ಡಿ. ಎಸ್. ಮುನೀಂದ್ರ ಕುಮಾರ್ ರವರ ಅಭಿನಂದನಾ ಸಮಾರಂಭ ಹಾಗೂ ಮಲ್ಲಿಗೆ ಮನಕೆ ಅಕ್ಷರ ಬಾಗಿನ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,

   ವಿದ್ಯಾರ್ಥಿಗಳು ಪುಸ್ತಕಗಳ ಜ್ಞಾನದ ಜೊತೆಗೆ ಪ್ರಪಂಚದ ಜ್ಞಾನ ವನ್ನು ಆಳವಡಿಸಿಕೊಳ್ಳಬೇಕು. ಕವಿ ಸರ್ವಜ್ಞರು ಸಾಮಾನ್ಯ ಜ್ಞಾನ ವನ್ನು ಹೊಂದಿದ್ದರು ಸಹ ತ್ರಿಪದಿಗಳನ್ನು ಬರೆದು ಮಹಾಪುರುಷ ರೆನಿಸಿಕೊಂಡಿದ್ದಾರೆ.

   ಮಲ್ಲಿಗೆ ಮನಕೆ ಅಕ್ಷರ ಬಾಗಿನ ಗ್ರಂಥವು ಉತ್ತಮವಾದ ಶೀರ್ಷಿಕೆಯುನ್ನು ಒಳಗೊಂಡಿದೆ. ಮುನೀಂದ್ರ ಕುಮಾರ್ ಕಾಲೇಜಿನ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳೆಂದು ಭಾವಿಸಿದ್ದಾರೆ. ಮುನೀಂದ್ರ ಕುಮಾರ್ ರವರ ಪುತ್ರ ಆಕಸ್ಮಿಕವಾಗಿ ಮರಣ ಹೊಂದಿದ್ದು ಎದೆಗುಂದದೆ ಇಲ್ಲಿಯವರೆವಿಗೂ ಸೇವೆ ಮಾಡಿದ್ದಾರೆ. ಇವರ ನಿವೃತ್ತಿಯ ನಂತರ ಬರುವ ಹಣದಲ್ಲಿ ಒಂದು ಲಕ್ಷ ರೂಗಳನ್ನು ಮಗನ ಹೆಸರಿನಲ್ಲಿ ಇಡಿಗಂಟನ್ನು ಬ್ಯಾಂಕಿನಲ್ಲಿಟ್ಟು ಕಾಲೇಜಿನಲ್ಲಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳಿಗೆ ಪ್ರತಿ ವರ್ಷ ಪ್ರೋತ್ಸಾಹ ಧನವನ್ನಾಗಿ ನೀಡಲು ಮುಂದೆ ಬಂದಿದ್ದಾರೆ. ಆದ್ದರಿಂದ ಅವರು ನನಗೆ ಅಚ್ಚುಮೆಚ್ಚಿನ ಪ್ರಾಂಶುಪಾಲರಾಗಿದ್ದಾರೆಂದರು.

    ಕಾರ್ಯಕ್ರಮದಲ್ಲಿ ಪಾವಗಡ ತಾಲೂಕಿನ ನಿಡಗಲ್ ಸಂಸ್ಥಾನದ ಮಹರ್ಷಿ ವಾಲ್ಮೀಕಿ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಸಂಜಯಕುಮಾರ ಸ್ವಾಮೀಜಿ ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಗಿ , ಮಿಡಿಗೇಶಿ ಕಾಲೇಜಿನ ಪ್ರಾಚಾರ್ಯ ಬಸವರಾಜು , ಉಪನ್ಯಾಸಕ ಮಹಾಲಿಂಗೇಶ್ , ಮುಖಂಡರಾದ ಎಂ ಎಸ್ ಮಲ್ಲಿಕಾರ್ಜುನಯ್ಯ, ಎಂ.ಕೆ.ನಂಜುಂಡಯ್ಯ , ಸಾಹಿತಿ ಮಲನ ಮೂರ್ತಿ ಹಾಗೂ ಕಾಲೇಜಿನ ಅಭಿವೃದ್ಧಿ ಮಂಡಲಿಯ ಪದಾಧಿಕಾರಿಗಳು , ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap