ಗರ್ಭಿಣಿಗೆ ಓವರ್ ಡೋಸ್ ಇಂಜೆಕ್ಷನ್ ಶಿಶು ಸಾವು

ಬೆಂಗಳೂರು:

     ಕೊಟ್ಟು ಆರು ತಿಂಗಳ ತುಂಬು ಗರ್ಭಿಣಿಗೆ ಅಭಾರ್ಷನ್ ಮಾಡಲಾಗಿದೆ. ಈ ಹಿನ್ನೆಲೆ ಪುಟ್ಟ ಕಂದಮ್ಮ ಕಣ್ಣು ಬಿಡುವುದಕ್ಕೂ ಮೊದಲೇ ಅಸು ನೀಗಿದೆ. ಹೀಗಾಗಿ ಆಕ್ರೋಶಗೊಂಡ ಪೋಷಕರು, ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.

    ಇನ್ನು ಈ ಕುರಿತು ಮಾತನಾಡಿದ ಗರ್ಭಿಣಿ ಮಹಿಳೆಯ ಪತಿ ‘ಪ್ರತಿ ತಿಂಗಳೂ ಟೆಸ್ಟಿಂಗ್ಗೆ ಎಂದು ಬರುತ್ತಿದ್ದೇವೆ. ಅದೇ ರೀತಿಯಾಗಿ ಶುಕ್ರವಾರ ಕೂಡ ಬಂದಿದ್ವಿ, ಈ ವೇಳೆ ನನ್ನ ಹೆಂಡತಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಕೂಡಲೇ ತಡೆ ನಾಗಮ್ಮ ಇಂಜೆಕ್ಷನ್ ಕೊಟ್ಟಿದ್ದರು ಎಂದಿದ್ದಾರೆ.

    ಆದರೆ ಎಡಭಾಗದಲ್ಲಿ ಇಂಜೆಕ್ಷನ್ ಕೊಟ್ಟಂತಹ ಜಾಗದಲ್ಲಿ ಊದಿಕೊಂಡಿದ್ದು, ಬಳಿಕ ನನ್ನ ಹೆಂಡತಿಗೆ ಓಡಾಡುವುದಕ್ಕೆ ಆಗುತ್ತಿರಲಿಲ್ಲ. ಊದಿಕೊಂಡಿರುವುದು ಕಡಿಮೆಯಾಗಲಿ ಎಂದು 20 ಪೈನ್ ಕ್ಯುಲರ್ ಓವರ್ ಡೋಸ್ ಇಂಜೆಕ್ಷನ್ ಕೊಟ್ಟಿದ್ದಾರೆ. ಇದರಿಂದ ಮತ್ತೆ ಹೊಟ್ಟೆನೋವು ಜಾಸ್ತಿಯಾಗಿದೆ. ಆಸ್ಪತ್ರೆಗೆ ಬಂದು ತೋರಿಸಿದ್ರೆ ಮಗು ಉಳಿಯೋದಿಲ್ಲ ಅಬಾರ್ಷನ್ ಮಾಡಬೇಕು ಎಂದು ಹೇಳಿದ್ದಾರೆ. ಈಗ ಅಬಾರ್ಷನ್ ಮಾಡಿ ಹೊರಗಿಟ್ಟಿದ್ದಾರೆ. ನನ್ನ ಹೆಂಡತಿ, ಮಗು ಕೇಳಿದ್ರೆ ನಾನು ಏನು ಹೇಳಲಿ? ಹೀಗಾಗಿ ಆಸ್ಪತ್ರೆಯ ವಿರುದ್ದ ಎಫ್ಐಆರ್ ದಾಖಾಲಿಸುತ್ತೇವೆ. ತಪ್ಪಿತಸ್ಥ ಸಿಬ್ನಂದಿಗಳ ವಿರುದ್ದ ಕ್ರಮತೆಗೆದುಕೊಳ್ಳಬೇಕು ಎಂದು ಪತಿ ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದೆ ಸಮಸ್ಯೆಯಾದ್ರೆ ಆಸ್ಪತ್ರೆಯೇ ಹೊಣೆ

    ಇನ್ನು ಮಗುವಿನ ಸಾವಿನ ಕುರಿತು ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆಗೆ ಮುಂದಾದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪೋಲಿಸರ ಬಳಿ ನಮಗೆ ಕ್ಷಮೆ ಕೇಳಬೇಕು. ಮುಂದೆ ನನ್ನ ಹೆಂಡತಿಗೆ ಯಾವುದೇ ಸಮಸ್ಯೆಯಾದರೂ ಅದರ ಹೊಣೆಯನ್ನು ಆಸ್ಪತ್ರೆಯೇ ಹೊರಬೇಕು ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link