ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮನವಿ

ಹರಪನಹಳ್ಳಿ

      ನಮ್ಮ ಜನ, ನಮ್ಮ ತಾಲ್ಲೂಕು, ನಮ್ಮ ಅಭಿವೃದ್ಧಿ ಘೋಷಣೆ ಅಡಿಯಲ್ಲಿ ಹರಪನಹಳ್ಳಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಕ್ರಮಕೈಗೊಳ್ಳಬೇಕು ಎಂದು ಭಾರತ ಕಮ್ಯೂನಿಷ್ಟ್ ಪಕ್ಷದ ತಾಲೂಕು ಸಮಿತಿ ಕಾರ್ಯಕರ್ತರು ಹಕ್ಕೋತ್ತಾಯಗಳನ್ನು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

     ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ದ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವ ಇತಿಹಾಸವಿದೆ, ಅಲ್ಲದೇ ಗಾಂಧೀಜಿಯವರು ಸಹ ಹರಪನಹಳ್ಳಿಗೆ ಭೇಟಿಯಾಗಿರುವುದು ಸಾಕ್ಷಿಯಾಗಿದೆ. ನಮ್ಮ ತಾಲೂಕಿನ ಜನತೆ ಇಂದು ಗಂಭೀರ ಸಮಸ್ಯೆ ಎದುರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

      ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದರೂ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಹಾಗೆ ಹಲವಾರು ಗ್ರಾಮಗಳಲ್ಲಿ ಶುದ್ಧ ನೀರು ಸಿಗದಿರುವುದು, ಭೂಹೀನ ಕುಟುಂಬಗಳು, ಕೆಲಸಕ್ಕಾಗಿ ಗುಳೆ ಹೋಗುವ ಜನಸಮುದಾಯ, ಸಾವಿರ ಸಾವಿರ ಸಂಖ್ಯೆಯಲ್ಲಿರುವ ವಸತಿಹೀನ ಕುಟುಂಬಗಳು ಬಡಜನತೆಗೆ ಕೈಗೆಟಕದ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

     ಇದಕ್ಕಾಗಿ ನಮ್ಮ ನಡಿಗೆ ಎಂಬ ಘೋಷಣೆಯಡಿಯಲ್ಲಿ 4 ದಿನಗಳ ಕಾಲ ಸುಮಾರು 128 ಕಿ.ಮೀ. ಕಾಲ್ನೇಡಿಗೆ ಜಾಥವನ್ನು ಮಾಡಲಾಗಿದೆ. ಆದ್ದರಿಂದ ನಮ್ಮ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಇಂದಿನ ತುರ್ತು ಅಗತ್ಯವಾಗಿದೆ. ಆದ್ದರಿಂದ ನಮ್ಮ ತಾಲ್ಲೂಕಿಗೆ ಅಗತ್ಯವಾದ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

     ತಾಲೂಕಿಗೆ ನೀರಾವರಿಗೆ ಆದ್ಯತೆ, ಕೆರೆಗಳಿಗೆ ನೀರು ತುಂಬಿಸುವುದು, ಹೈ.ಕ.ಸೌಲಭ್ಯ ಒದಗಿಸುವುದು, ಸೇರಿದಂತೆ ಇತರೆ ಬೇಡಿಕೆಗಳ ಮೇಲೆ ತಾಲೂಕು ಆಡಳಿತ ಎಲ್ಲಾ ಅಧಿಕಾರಿಗಳು, ಸಿಪಿಐ ಪಕ್ಷದ ಸದಸ್ಯರ ಜಂಟಿ ಸಭೆ ಕರೆದು ಚರ್ಚೆ ಮಾಡಬೇಕೆಂದು ಕೋರಿದರು.ಈ ಸಂದರ್ಭದಲ್ಲಿ ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್, ಸಹಕಾರ್ಯದರ್ಶಿ ಎಚ್.ಎಂ.ಸಂತೋಷ್, ಸುರೇಶ್, ಜಿ.ಎನ್.ಬಸವರಾಜ, ತಿಂದಪ್ಪ, ಬಿ.ಕಾಶಿನಾಥ, ಎಂ.ಎಚ್.ಕೊಟ್ರೇಶ್, ಮತ್ತಿತರರು ಇದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link