ಪಾವಗಡ :
ಶಾಶ್ವತ ಬರಪೀಡಿತ ಪ್ರದೇಶದಲ್ಲಿ ಉತ್ತರ ಪಿನಾಕಿನಿ ನದಿ ತುಂಬಿ ಹರಿಯುತ್ತಿರುವುದು ತಾಲೂಕಿನ ರೈತರಿಗೆ ಶಕ್ತಿ ತುಂಬಿದಂತಾಗಿದೆ ಎಂದು ಸಮಾಜ ಸೇವಕ ಹಾಗೂ ವಿಧಾನ ಸಭಾ ಕ್ಷೇತ್ರದ ಪ್ರಭಲ ಆಕಾಂಕ್ಷಿಯಾದ ನೇರಳಕುಂಟೆ ನಾಗೇಂದ್ರ ಕುಮಾರ್ ತಿಳಿಸಿದರು.
ಗುರುವಾರ ತಾಲೂಕಿನ ನಾಗಲಮಡಿಕೆ ಗ್ರಾಮದ ಅಂತ್ಯಸುಭ್ರಮಣ್ಯ ಸ್ವಾಮಿಯ ಸನ್ನಿದಿಯಲ್ಲಿ ಮೈತುಂಬಿ ಹರಿಯುತ್ತಿರುವ ಉತ್ತರ ಪಿನಾಕಿನಿ ನದಿಗೆ ಭಾಗೀನ ಆರ್ಪಿಸಿ ಮಾತನಾಡಿದ ಅವರು ಗಡಿ ಪ್ರದೇಶ ಪಾವಗಡ ಶಾಶ್ವತ ಬರಪೀಡಿತ ಪ್ರದೇಶವೆಂಬ ಆಣೆಪಟ್ಟಿ ಕಟ್ಟಿಕೊಂಡು ಕಳೆದು 15 ವರ್ಷಗಳಿಂದ ಸಕಾಲದಲ್ಲಿ ಮಳೆ ಬೆಳೆ ಇಲ್ಲದೆ ರೈತರು ಸಾಲದ ಸಂಕಷ್ಠಕ್ಕೆ ಸಿಲುಕಿ ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ, ಕೃಷಿಯನ್ನೇ ತ್ಯಜಿಸಿ ನಗರ ಪ್ರದೇಶಗಳಿಗೆ ವಲಸೇ ಹೋಗಿದ್ದನ್ನ ನಾವು ಕಾಣಬಹುದೆಂದರು.
ಕಳೆದಾ ಒಂದು ವಾರದಿಂದ ಸುರಿದಾ ದಾರಕಾರ ಮಳೆಗೆ ಉತ್ತರ ಪಿನಾಕಿನಿ ನದಿ ಮೈತುಂಬಿ ಹರಿಯುತ್ತಿದ್ದು ಡ್ಯಾಂ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ವೃದ್ದಿಯಾಗುವುದರ ಜೋತೆಗೆ ಪ್ಲೋರೈಡ್ ಕೂಡ ಕಡಿಮೇಯಾಗಿ ಆಪೌಷ್ಠಿಕತೆಗೆ ಹಿನ್ನಡೆವುಂಟಾಗುತ್ತದೆ ಎಂದಾ ಅವರು ಇದೇ ರೀತಿ ವರ್ಷ ಸಕಾಲದಲ್ಲಿ ಮಳೆ ಬೆಳೆಯಾದರೆ ತಾಲೂಕಿನ ಕೃಷಿ ಚಟುವಟಿಕೆಗಳು ವೇಗ ಪಡೆದು ಅನ್ನದಾತನ ಕಷ್ಠಗಳು ದೂರವಾಗುತ್ತವೆ ಎಂದರು.ಈ ಸಂದರ್ಭದಲ್ಲಿ ಜೈ ಕರ್ನಾಟಕ ವೇದಿಕೆಯ ತಾಲೂಕು ಅದ್ಯಕ್ಷರಾದ ಗೋವರ್ದನ್ ಹಾಗೂ ನಾಗಲಮಡಿಕೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
