ಕೊರಟಗೆರೆಯಲ್ಲಿ ಪ್ರಪ್ರಥಮ ಆ್ಯಕ್ಸಿಜನ್ ತಯಾರಿಕಾ ಘಟಕ

ಕೊರಟಗೆರೆ :

      ಕೊರೊನಾ 3ನೇ ಅಲೆಯ ಆತಂಕದ ನಡುವೆ 2ನೆ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ರಾಜ್ಯದಲ್ಲಿ ಹಲವೆಡೆ ಅವಘಡ ನಡೆದಿದೆ. ಇದರ ಮುನ್ನೆಚ್ಚರಿಕಾ ಕ್ರಮವಾಗಿ ಭಾರತದಲ್ಲಿ ಮೊದಲನೆಯದಾಗಿ ಅದರಲ್ಲೂ ರಾಜ್ಯದ ಪ್ರಥಮ ಎಂಬುವಂತೆ ನಮ್ಮ ಕ್ಷೇತ್ರದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ. ಜಿ ಪರಮೇಶ್ವರ್ ಅಭಿಪ್ರಾಯಪಟ್ಟರು.

      ಅವರು ಕೊರಟಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸ್‍ಫಾಮ್ (OXFAM) ಇಂಡಿಯಾ ಕಡೆಯಿಂದ ಆಮ್ಲಜನಕ ಘಟಕ ಉದ್ಘಾಟನೆಗೊಳಿಸಿ ಮಾತನಾಡಿ, ಭಾರತದಲ್ಲಿ ಮೊದಲನೆಯದಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ನಮ್ಮ ಕ್ಷೇತ್ರದಲ್ಲಿ ಕ್ಷೇತ್ರದ ಜನತೆಯ ಉಪಯೋಗವಾಗುವಂತೆ ಆ್ಯಕ್ಸಿಜನ್ ಘಟಕ ಉದ್ಘಾಟನೆ ನಡೆಸಲಾಗಿದೆ.

      ಕೊರೋನಾ 2 ನೇ ಅಲೆಯ ಸಂದರ್ಭದಲ್ಲಿ ಆ್ಯಕ್ಸಿಜನ್ ಕೊರತೆಯಿಂದ ದೊಡ್ಡ ಅವಘಡವೇ ಸಂಭವಿಸಿದ್ದು,ಆಕ್ಸ್‍ಫಾಮ್ ಇಂಡಿಯಾ ತನ್ನ ಮಿಷನ್ ಸಂಜೀವಿನಿ ಯೋಜನೆಯಡಿ ಘಟಕ ಸ್ಥಾಪಿಸಿದ್ದು, 300 LPM ಘಟಕವು ಸುತ್ತಲಿನ ನೂರಾರು ಹಳ್ಳಿಗಳ ಜನರಿಗೆ ಅನುಕೂಲವಾಗಲಿದೆ ಎಂದರು.

      ಕಂಪನಿ ಆಕ್ಸ್‍ಫಾಮ್ ಇಂಡಿಯಾದ ನಿರ್ದೇಶಕ ಪಂಕಜ್ ಆನಂದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಮಕ್ಕಳಿಗೆ ವಿಶೇಷ ಕೋವಿಡ್ ಕೇಂದ್ರ ಸ್ಥಾಪನೆ ಸೇರಿದಂತೆ, ಕೊರೊನಾ ಎರಡನೆಯ ಅಲೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಆಕ್ಸ್‍ಫಾಮ್ ಇಂಡಿಯಾ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಭದ್ರಗೊಳಿಸುವತ್ತ ಕೆಲಸ ಮಾಡುತ್ತಿದ್ದು, ಮುಂದಿನ ಸಂಭಾವ್ಯ ಕೊರೊನಾ ಅಲೆಗೆ ತಯಾರಿ ನಡೆಸುತ್ತಿದೆ. ಸಂಸ್ಥೆ ಯೋಜಿಸಿರುವ ಏಳು ಆಮ್ಲಜನಕ ಘಟಕಗಳಲ್ಲಿ ತುಮಕೂರಿನ ಕೊರಟಗೆರೆ ಆಸ್ಪತ್ರೆಯಲ್ಲಿ ಸ್ಥಾಪಿಸಿರುವುದು ಮೊದಲನೆಯದಾಗಿದೆ ಎಂದರು.

      ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ 9 ಆಸ್ಪತೆಗಳಿಗೆ ಮತ್ತು 40 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಉಪಕರಣಗಳನ್ನು ನೀಡಲಿದ್ದೇವೆ. 850 ಕುಟುಂಬಗಳಿಗೆ ಆಹಾರ ಕಿಟ್‍ಗಳನ್ನು ಒದಗಿಸಿರುವ ಜೊತೆಗೆ ನಮ್ಮ ಸಂಸ್ಥೆ ರಾಜ್ಯಾದ್ಯಂತ 7000 ಆಶಾ ಕಾರ್ಯಕರ್ತೆಯರೊಂದಿಗೆ ಕೆಲಸ ಮಾಡುತ್ತಾ ಆರೋಗ್ಯ ಕಿಟ್‍ಗಳನ್ನು ಒದಗಿಸುತ್ತಿದೆ. ಆರೋಗ್ಯ ಸಲಕರಣೆಗಳಾದ ಆಮ್ಲಜನಕ ಸಿಲಿಂಡರ್, ಃiPಂP ಮೆಷಿನ್‍ಗಳು ಮತ್ತು ಆಮ್ಲಜನಕ ಸಾಂದ್ರಕಗಳು, ಬೆಡ್‍ಗಳು ಹಾಗೂ PPಇ ಕಿಟ್‍ಗಳನ್ನು ಮೂರು ಸರ್ಕಾರಿ ಆಸ್ಪ್ರತ್ರೆಗಳು, ಒಂದು ಸೇವಾ ಆಸ್ಪತ್ರೆ ಹಾಗೂ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸಿದ್ದೇವೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಸೆಣಸಲು ಬೇಕಾದ ನಡವಳಿಕೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸೇರಿದಂತೆ ಜನರಲ್ಲಿ ಲಸಿಕೆ ಬಗ್ಗೆ ಇರುವ ತಿರಸ್ಕಾರವನ್ನು ಹೊಡೆದೋಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

     ಕಂಪನಿ ಸಿಇಒ ಅಮಿತಾಬ್ ಬೆಹರ್ ಮಾತನಾಡಿ, ಮಾರ್ಚ್ 2020ರಿಂದ ದೇಶದ 16 ರಾಜ್ಯಗಳಲ್ಲಿ ಆಕ್ಸ್‍ಫಾಮ್ ಇಂಡಿಯಾ ಕೊರೊನಾ ಸಾಂಕ್ರಾಮಿಕದ ವಿರುದ್ಧ ಕೆಲಸ ಮಾಡುತ್ತಿದೆ. ಕೋವಿಡ್ ರೆಸ್ಪಾನ್ಸ್ ಅಡಿಯಲ್ಲಿ 9481 ಕುಟುಂಬಗಳಿಗೆ 2.96 ಕೋಟಿ ರೂ.ಗಳನ್ನು ನೇರವಾಗಿ ಜಮಾ ಮಾಡಿದ್ದೇವೆ. ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಈ ವರ್ಷ ಏಪ್ರಿಲ್ ನಿಂದ ಈಚೆಗೆ 4,58506 ಮಂದಿಗೆ ತಲುಪಿಸಿದ್ದೇವೆ.  ಜೊತೆಗೆ ಜೀವ ಉಳಿಸುವ ಸಾಧನಗಳಾದ 400 ಆಮ್ಲಜನಕ ಸಿಲಿಂಡರ್ ಗಳು, 100 ಆಮ್ಲಜನಕ ಸಾಂದ್ರಕಗಳು, 1700 ಡಿಜಿಟಲ್ ಥರ್ಮಾಮೀಟರ್‍ಗಳು, 900 ಆ್ಯಕ್ಸಿಮೀಟರ್‍ಗಳು, 18,000 ಕೋವಿಡ್ ಟೆಸ್ಟಿಂಗ್ ಕಿಟ್‍ಗಳು, 25,500 ಸಮುದಾಯ ಸುರಕ್ಷಾ ಕಿಟ್‍ಗಳು ಮತ್ತು 15,000 PPಇ ಕಿಟ್‍ಗಳನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಫ್ರಂಟ್‍ಲೈನ್ ವಾರಿಯರ್ಸ್ ಆದ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಿದ್ದೇವೆ ಎಂದರು.

      ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಾಟೀಲ್ ಯಲಗೌಡ ಶಿವನಗೌಡ ಮತ್ತು ಆಕ್ಸ್‍ಫಾಮ್ ಇಂಡಿಯಾದ ನಿರ್ದೇಶಕ ಪಂಕಜ್ ಆನಂದ್, THO ವಿಜಯ ಕುಮಾರ್, ವೈದ್ಯಾಧಿಕಾರಿಗಳಾದ ಡಾ. ಪ್ರಕಾಶ್, ವೈದ್ಯರಾದ ಡಾ. ನಾಗಭೂಷಣ್, ತಹಸೀಲ್ದಾರ್ ಗೋವಿಂದ ರಾಜು, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶ್ವತ್ಥ ನಾರಾಯಣ್, ಅರಕೆರೆ ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap