ಆಕ್ಸಿಜನ್ (ಆಮ್ಲಜನಕ) ಪ್ರಾಣಾವಾಯು ನಾವೆಷ್ಟು ಅರಿತಿದ್ದೇವೆ..?

 `ಹಸಿರೇ ಉಸಿರು’. ಮಾನವ ತನ್ನ ಸ್ವಾರ್ಥಕ್ಕೋಸ್ಕರ ಕಾಡುಗಳನ್ನು ಕಡಿದು ನಾಡು ನಿರ್ಮಿಸಿ ನಿಸರ್ಗದ ನಿಕ್ಷೇಪವ ಬಗೆದು ತಾಯಿ ಗರ್ಭವ ಬಗೆದ ಪಾಪಕ್ಕೆ ಪಡೆದ ಪ್ರತಿಫಲವೇ ಈ ಕೊರೊನಾ. ಉಸಿರ ವಾಯುವಿಗಾಗಿ ಪರಿತಪಿಸುವ ಪರಿಸ್ಥಿತಿಯೊಂದು ನಿರ್ಮಾಣವಾಗಬಹುದೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಕೋವಿಡ್-19 ಎಂಬ ಮಹಾಮಾರಿಯಿಂದ ಇಡೀ ವಿಶ್ವ ಆಮ್ಲಜನಕಕ್ಕೋಸ್ಕರ ಹಾಹಾಕಾರ ಪಡುವಂತಾಗಿದೆ. ಆಮ್ಲಜನಕದ ಅವಶ್ಯಕತೆ ಅಷ್ಟೊಂದು ಇದೆಯೇ ಎಂಬ ಒಂದು ಚಿಂತನೆ ಜನಸಾಮಾನ್ಯರಲ್ಲಿ ಮೂಡಬಹುದು. ಆದ್ದರಿಂದ ಆಮ್ಲಜನಕದ ಬಗ್ಗೆ ಒಂದಿಷ್ಟು ತಿಳಿಯೋಣ.

ಆಮ್ಲಜನಕವನ್ನು ಪ್ರಾಣವಾಯು ಎಂದು ಏಕೆ ಕರೆಯುತ್ತೇವೆ? 

      ಆಕ್ಸಿಜನ್ ಮನುಷ್ಯನ ದೇಹದ ಪ್ರತಿಯೊಂದು ಜೀವರಾಶಿಗೂ ಅತ್ಯವಶ್ಯಕ. ಎಟಿಪಿ (ಅಡಿನೋಸಿಸ್ ಟ್ರಿಫಾಸ್‍ಪೇಟ) ಮಾನವ ದೇಹದ ಶಕ್ತಿಯ ಮೂಲ.ATP ಯನ್ನು ‘ಶಕ್ತಿಯ ನಾಣ್ಯ’ (Energy Currancy) ಎಂದು ಕರೆಯಲಾಗುತ್ತದೆ.

      ATP  ಉತ್ಪಾದಿಸಲು ಆಮ್ಲಜನಕ ಮತ್ತು ಗ್ಲೂಕೋಸ್ ಅವಶ್ಯಕತೆ ಇದೆ. ನಾವು ಸೇವಿಸುವ ಆಹಾರದಿಂದ ಗ್ಲೂಕೋಸ್ ಉಸಿರಾಡುವ ಗಾಳಿಯಿಂದ ಆಮ್ಲಜನಕ ದೊರೆಯುತ್ತದೆ. ಜೀವಕೋಶಗಳಲ್ಲಿರುವ ಮೈಟೋಕಾಂಡ್ರಿಯಗಳಿಂದ ಉಂಟಾಗುವrobic Respiration ಕ್ರಿಯೆಯಿಂದ ಆಮ್ಲಜನಕ ಉಪಯೋಗಿಸಿಕೊಂಡು ATP ಉತ್ಪಾದನೆಯ ಕ್ರಿಯೆ ಜರುಗುವುದು. ಈ ಪ್ರಕ್ರಿಯೆಯ ಜೊತೆ ಇಂಗಾಲ ಆಮ್ಲ (Co2) ಮತ್ತು ನೀರು (H2o) ಸಹ ಬಿಡುಗಡೆಯಾಗುತ್ತದೆ.

Formula for ATP (ಎ.ಟಿ.ಪಿ.ಯ ಸಮೀಕರಣ)
ಗ್ಲೂಕೋಸ್ + ಆಮ್ಲಜನಕ+ ಎಟಿಪಿ+ಇಂಗಾಲ+ ನೀರು
C6H12 o2+ o2= ATP+ o2+H2o
ನೈಸರ್ಗಿಕ ವಾಯುವಿನಲ್ಲಿ ಆಮ್ಲಜನಕದ ಪ್ರಮಾಣ ಎಷ್ಟು..?

ನಾವು ಉಸಿರಾಡುವ ಗಾಳಿಯಲ್ಲಿ 21% ಆಮ್ಲಜನಕ (ಆಕ್ಸಿಜನ್)
78% ಸಸಾರಜನಕ (ನೈಟ್ರೋಜನ್),
1% ಇತರೆ

ನಮ್ಮ ದೇಹದಲ್ಲಿ ಆಕ್ಸಿಜನ್ ಸಾಗಣೆ ಹೇಗೆ..? 

Resp disease cover pic - Research for the Future

      ನಾವು ಉಸಿರಾಡಿದ ಗಾಳಿಯಲ್ಲಿರುವ ಆಮ್ಲಜನಕವನ್ನು ಶ್ವಾಸಕೋಶದ ರಚನೆಯಲ್ಲಿ ಅಡಕವಾಗಿರುವ ಆಲ್‍ನಿಲೋವಲ್ ಸಮೂಹ ಹಲವಾರು ಕ್ರಿಯಾತ್ಮಕ ಪರಿಕರಗಳ ಸಹಕಾರದಿಂದ ಆಮ್ಲಜನಕವನ್ನು ರಕ್ತದಲ್ಲಿರುವ ಕೆಂಪುರಕ್ತ ಕಣಗಳಲ್ಲಡಗಿರುವ “ಹಿಮೋಗ್ಲೋಬಿನ್’’ಗೆ ವರ್ಗಾಯಿಸಿ, ಇಂಗಾಲವನ್ನು ಶ್ವಾಸಕೋಶಕ್ಕೆ ಹಿಂದಿರುಗಿಸುತ್ತವೆ.

      ಕೆಂಪು ರಕ್ತಗಳ ಕೆಂಪು ಬರ್ಣಣಕ್ಕೆ ಕಾರಣವಾಗಿರುವ ‘ಹಿಮೋಗ್ಲೋಬಿನ್’ ಕ್ರಿಯೆಯೆ ಜೀವಕೋಶಗಳಿಗೆ ‘ಆಮ್ಲಜನಕ ಸಾಗಾಣೆ’ ಒಂದು ಗ್ರಾಂ ಹಿಮೋಗ್ಲೋಬಿನ್ 1.34 ಎಂ.ಎಲ್. ಆಮ್ಲಜನಕ ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದೆ. ಅಂದರೆ, ಆರೋಗ್ಯವಂತನಲ್ಲಿರುವ 14 ಗ್ರಾಂ ಹಿಮೋಗ್ಲೋಬಿನ್ ಸರಾಸರಿ 18-20 ಎಂ.ಎಲ್.ಆಕ್ಸಿಜನ್‍ನನ್ನು 100 ಎಲ್ ರಕ್ತ ಸಾಗಿಸಲ್ಪಡುತ್ತದೆ.

      ಆರೋಗ್ಯವಂತ ವ್ಯಕ್ತಿಯಲ್ಲಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ 97% (ಸರಾಸರಿ : 95% ರಿಂದ 100%.) ಒಬ್ಬ ವ್ಯಕ್ತಿ ವಿಶ್ರಾಂತಿಯಲ್ಲಿದ್ದಾಗ ನಮ್ಮ ದೇಹದ ವಿಸ್ತೀರ್ಣಕ್ಕೆ (1.8sqm)ಕ್ಕೆ ಅನುಗುಣವಾಗಿ 250 mಟ/miಟಿ ಆಮ್ಲಜನಕ ಬೇಕಾಗುತ್ತದೆ.
ಕೋವಿಡ್-19 ರೋಗದಲ್ಲಿ ಬೇಕಾಗುವ ಆಮ್ಲಜನಕ ಪ್ರಮಾಣ ಎಷ್ಟು..?

     ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೋವಿಡ್ ರೋಗ ಘಾಸಿಗೊಳಿಸುತ್ತಿರುವುದು ಶ್ವಾಸಕೋಶವನ್ನು. ಶ್ವಾಸಕೋಶದ ಪ್ರಕ್ರಿಯೆಯಾದ ಆಮ್ಲಜನಕ ಒದಗಿಸುವುದು. ಆಮ್ಲಜನಕದ ಕೊರತೆಯಿಂದ ರಕ್ತದಲ್ಲಿನ ಪ್ರಮಾಣ ಕಡಿಮೆಯಾಗಿ ಉಸಿರಾಟದ ಏರುಪೇರು ಆಗುತ್ತದೆ. ಆದ್ದರಿಂದಲೇ ಕೃತಕವಾಗಿ ಆಕ್ಸಿಜನ್ ನೀಡಬೇಕಾಗುತ್ತದೆ. ಆಕ್ಸಿಜನ್ ಎಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬುದು ಮೇಲೆ ಸೂಚಿಸಲಾದ ತೀವ್ರತೆಯಿಂದ ನಿರ್ಧರಿಸಲಾಗುತ್ತದೆ. ಇದನ್ನು Pulse oxymeter (ನಾಡಿ ಆಕ್ಸಿ ಮಾಪನ) ದಿಂದ ಕಂಡು ಹಿಡಿಯಬಹುದು.

ಆಕ್ಸಿಜನ್ ಕ್ಷೀಣತೆ ಪ್ರಮಾಣ :

Mild – < 90%-95%
Montrace <85 – 90%
Severe – ತೀವ್ರ <80%-75%

ಕೋವಿಡ್ ರೋಗಿಗಳಿಗೆ ಯಾರು ಯಾರಿಗೆ ಎಷ್ಟೆಷ್ಟು ಅವಶ್ಯಕತೆ ಇದೆ?

Covid surge: Oxygen shortage reported in several Delhi hospitals

     ಈ ನಿರ್ಧಾರ ವೈದ್ಯರಿಗೆ ಬಿಟ್ಟಿದ್ದು. ರೋಗಿಯ ರೋಗದ ಗುಣಲಕ್ಷಣಗಳು, ತೀವ್ರತೆ, ಇತರೆ ಪ್ರಮಾಣದ ಪರೀಕ್ಷೆಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಕೋವಿಡ್ ಇದೆ ಎಂದ ತಕ್ಷಣ ಎಲ್ಲರಿಗೂ ಆಕ್ಸಿಜನ್ ಬೇಕಾಗುವುದಿಲ್ಲ. ಒಂದು ವೇಳೆ ಉಸಿರಾಟದ ತೊಂದರೆ, ಆಕ್ಸಿಜನ್ ಪ್ರಮಾಣ ಶೇ. 85 -90 ಕ್ಕಿಂತ ಕಡಿಮೆಯಾದಲ್ಲಿ Mask Oxygen ಸಾಮಾನ್ಯ ವಾರ್ಡ್‍ಗಳಲ್ಲಿ ನೀಡುತ್ತಾರೆ (5-7 Wse/hಡಿ)
85% ಕ್ಕಿಂತ ಕಡಿಮೆ ಇದ್ದಲ್ಲಿ HFNO (High Flow Nasal Oxggen) ಸಲಕರಣೆಯ ಮೂಲಕ 60 ರಿಂದ 80 ತಿಣ/hಡಿ ಆಕ್ಸಿಜನ್ ನೀಡಬೇಕಾಗುತ್ತದೆ.

NIV Biphp, CPAP ಇತರೆ ವಿಧಾನಗಳಿಂದ ICU ನಲ್ಲಿ ಆಕ್ಸಿಜನ್ ನೀಡಲಾಗುತ್ತದೆ. ಕೊನೆ ಹಂತದಲ್ಲಿ ಶ್ವಾಸಕೋಶಕ್ಕೆ Intusation ನೀಡಿ ಆಕ್ಸಿಜನ್ ನೀಡಲಾಗುತ್ತದೆ. ಆದರೆ ಈ ವಿಧಾನ ಉಪಯುಕ್ತವೊ ಅಲ್ಲವೊ ಎಂಬುದು ನಿರ್ಧಾರವಾಗಿಲ್ಲ. ಒಮ್ಮೊಮ್ಮೆ ಅನಿವಾರ್ಯ ಕೂಡ.

ಆಮ್ಲಜನಕ ಮತ್ತು ಕೋವಿಡ್-19 :

      ಕೋವಿಡ್-19 ರೋಗಿಗೆ ಆಮ್ಲಜನಕವೆ ಸಂಜೀವಿನಿ. ಅನೇಕ ವಿಜ್ಞಾನಿಗಳ, ವೈದ್ಯರುಗಳ ಅನುಭವದ ಮೇರೆಗೆ ಇಲ್ಲಿಯವರೆವಿಗೂ ದೃಢಪಟ್ಟ ಚಿಕಿತ್ಸೆಯೆಂದರೆ ಅದುವೇ ಆಮ್ಲಜನಕ. ಆದ್ದರಿಂದ ಸರ್ಕಾರ ಎಚ್ಚೆತ್ತು ಕೊಂಡು ಆಮ್ಲಜನಕ ಉತ್ಪಾದನೆಯನ್ನು ಹೆಚ್ಚಿಸಿ, ಯಾವುದೇ ಕಾರಣಕ್ಕೂ ಆಮ್ಲಜನಕ ಸಿಗಲಿಲ್ಲ ಎಂಬ ಕಾರಣಕ್ಕೆ ಸಾವನ್ನಪ್ಪಿದರೆ ಇದಕ್ಕೆ ಹೊಣೆ ವೈದ್ಯರುಗಳಲ್ಲ, ಆಸ್ಪತ್ರೆಗಳಲ್ಲ, ಆಡಳಿತ ಚುಕ್ಕಾಣಿ ಹಿಡಿದಿರುವ ಘನ ಸರ್ಕಾರದ್ದೆ ಇದರ ಹೊಣೆ, ಕರ್ತವ್ಯ ಮತ್ತು ಜವಾಬ್ದಾರಿ.

ರೋಗಿ ಚಿಕಿತ್ಸೆಗಿಂತ ತಡೆಯುವುದೇ ಸೂಕ್ತ

      ದಯವಿಟ್ಟು ಎರಡೆರಡು ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ, ಗುಂಪು ಸೇರದೆ ಇರುವುದು ಇವೇ ಕೊರೊನಾ ತಡೆಯುವ ಮೂಲಮಂತ್ರ. ಧೈರ್ಯವಾಗಿರಿ, ದೃಢವಾಗಿರಿ, ಇದೊಂದು ಸಾಮಾನ್ಯ ವೈರಾಣು. ಇನ್ನು ಕೆಲವೇ ವಾರಗಳಲ್ಲಿ ಇದು ಮರೆಯಾಗುತ್ತದೆ. ಇದಕ್ಕೆ ಸಾರ್ವಜನಿಕರೆಲ್ಲ ಸಹಕರಿಸಬೇಕು.

-ಡಾ.ಟಿ.ಎಸ್. ಶಶಿಧರ್, ಫಿಜಿಷಿಯನ್ ಮತ್ತು ಡಯಾಬಿಟೀಸ್ ತಜ್ಞರು.

Recent Articles

spot_img

Related Stories

Share via
Copy link