ಹೆಣ್ಣು ಮಕ್ಕಳ ರಕ್ಷಣೆ/ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆಗೆ ಒತ್ತಾಯಿಸಿ ಪಾದಯಾತ್ರೆ

ಬೆಂಗಳೂರು

   ಹೆಣ್ಣು ಮಕ್ಕಳ ರಕ್ಷಣೆ/ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆಗೆ ಒತ್ತಾಯಿಸಿ ಪ್ರವೀಣ್ ಹಾಗು ಮೂಸಾ ಶ ಶರೀಫ್ ರವರ ನಾಯಕತ್ವದಲ್ಲಿ ಭೇಟಿ ಬಚಾವೋ ಎಂದು “ದಕ್ಷಿಣದಿಂದ ಉತ್ತರಕ್ಕೆ” (ಮಂಗಳೂರಿನಿಂದ ರಿಂದ ದೆಹಲಿ) ಪಾದಯಾತ್ರೆ
ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟಗಾರ ಪ್ರವೀಣ್ ತಿಳಿಸಿದ್ದಾರೆ..

   ಇಡೀ ವಿಶ್ವಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರಗಳ ವಾಠ ಹೇಳಿಕೊಟ್ಟ ನಮ್ಮ ಭವ್ಯ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಒಂದು ಹೆಣ್ಣು ಓದಿನ ವಿಚಾರವಾಗಿಯೋ, ಅಥವಾ ಕೆಲಸದ ವಿಚಾರವಾಗಿಯೋ, ಅಥವಾ ಒಂದು ವ್ಯಾಪಾರದ ವಿಚಾರವಾಗಿಯೋ, ಅಥವಾ ಇನ್ಯಾವುದೋ ವಿಚಾರವಾಗಿಯೋ ಮನೆಯಿಂದ ಹೊರಗಡೆ ಹೋದರೆ ಆಕೆ ಕ್ರಮವಾಗಿ ಮತ್ತೆ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಹಾಗೂ ಭರವಸೆ ಆ ಕುಟುಂಬಗಳಿಗೆ ಇಲ್ಲ, ಯಾಕೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದವನಿಗೆ ಯಾಕೆ ನಮ್ಮ ದೇಶದ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣವಾದ ಶಿಕ್ಷೆ ಇಲ್ಲ? ದೇಶದಲ್ಲಿ ಸಮಾನತೆ ಇಲ್ಲ?.

   ಈ ನಮ್ಮ ಭಾರತ ದೇಶದಲ್ಲಿ ಒಬ್ಬ ಪುರುಷ ಎಷ್ಟು ಸ್ವತಂತ್ರವಾಗಿ ಜೀವನ ಮಾಡುತ್ತಾನೋ ಹಾಗೆ ಮಹಿಳೆಯು ಕೂಡ ಘನತೆ ಮತ್ತು ಗೌರವದಿಂದ ಹಾಗೂ ಪ್ರತಿಷ್ಠೆಯಿಂದ ಸಮಾಜದಲ್ಲಿ ಬದುಕುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ. ಹೆಸರಿಗಷ್ಟೇ ಈ ಭೇಟಿ ಬಚಾವೋ ಎಂಬ ಯೋಜನೆ ಈ ಯೋಜನೆ ದೇಶದ ಯಾವುದೇ ಹೆಣ್ಣು ಮಕ್ಕಳಿಗೆ ನೆರವಾಗುತ್ತಿಲ್ಲ. ವಿದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವಂತಹ ರಕ್ಷಣೆ ನಮ್ಮ ದೇಶದಲ್ಲಿ ಯಾಕೆ ಇಲ್ಲ. ಪ್ರತಿ ವರ್ಷ 35 ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಇದೇ ರೀತಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ಮುಂದುವರೆದರೆ ಕೊನೆಗೆ ನಾವು ಹಣ್ಣು ಮಕ್ಕಳನ್ನು ಮ್ಯೂಸಿಯಂನಲ್ಲಿ ನೋಡಬೇಕಾದ ವರಿಸ್ಥಿತಿ ನಿರ್ಮಾಣವಾಗುತ್ತದೆ.

   ಇದರ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ದೆಹಲಿಯಲ್ಲಿ ಅವರನ್ನು ಕಚೇರಿಯಲ್ಲಿ ಭೇಟಿಯಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ “ಬೇಟಿ ಬಚಾವೋ” ಎಂಬ ಯೋಜನೆಯನ್ನು ಹೆಚ್ಚು ಬಲಿಷ್ಠ ಗೊಳಿಸಿ ದೇಶದ ಯಾವುದೇ ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾಗದೆ ಸಮಾಜದಲ್ಲಿ ಘನತೆ, ಗೌರವ ಮತ್ತು ಪ್ರತಿಷ್ಠೆಯಿಂದ ಬದುಕುವಂತೆ ಹಾಗೂ ಹೆಣ್ಣನ್ನು ಹೆತ್ತ ತಂದೆ ತಾಯಿಯು ಕೂಡ ನಮ್ಮದಿಯಿಂದ ಹಾಗೂ ಇಡೀ ದೇಶವೇ ಒಂದು ಹೆಣ್ಣನ್ನು ಗೌರವದಿಂದ ಕಾಣುವಂತೇ ಈ ಯೋಜನೆಯನ್ನು ರೂಪಿಸಬೇಕೆಂದು ದೇಶಕ್ಕೆ ತಾಯಿ ಸ್ಥಾನದಲ್ಲಿರುವಂತಹ ಪ್ರಧಾನಮಂತ್ರಿಗಳನ್ನು ಮನವಿ ಮಾಡಿಕೊಳ್ಳುತ್ತೇವೆ.

   ಶ್ರೀ. ಶರೀಫ್ ರವರ ನಾಯಕತ್ವದಲ್ಲಿ ಅಕ್ಟೋಬರ್ 17 ರಂದು ಮಂಗಳೂರಿನ ಟೌನ್ ಹಾಲ್ ಬಳಿ ಇರುವ ಗಾಂಧಿ ಪ್ರತಿಮೆಯಿಂದ ಆರಂಭಗೊಂಡು ದೆಹಲಿಯ “ಪ್ರಧಾನ ಮಂತ್ರಿಗಳ ಕಚೇರಿಯವರೆಗೆ* ಪಾದಯಾತ್ರೆಯ ಮೂಲಕ ದೆಹಲಿಯಲ್ಲಿರುವಂತ ಪ್ರಧಾನ ಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಅವರಿಗೆ ನಮ್ಮ ಈ ಬೇಡಿಕೆಗಳನ್ನು ತಿಳಿಸಿ ಬರುವುದು ನಮ್ಮ ಉದ್ದೇಶ. ಹಾಗಾಗಿ ನಮ್ಮ ದೇಶದ ಎಲ್ಲಾ ಸಮುದಾಯದವರು ಇದರಲ್ಲಿ ಭಾಗಿಯಾಗಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ವಿನಂತಿ ಮಾಡಿಕೊಂಡರು.ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಅಬ್ದುಲ್, ಶ್ವ್ಕೂರ್, ನೌಫಾಲ್ ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ರು..

 

Recent Articles

spot_img

Related Stories

Share via
Copy link