ಗೋಸಲ ಚನ್ನಬಸವೇಶ್ವರರು ನಿರಾಕಾರ ಸ್ವರೂಪಿಗಳು ಅವರು ನಿತ್ಯ ಸಂಚಾರವನ್ನು ಈ ಪಾದುಕೆಗಳ ಮೂಲಕವೇ ಮಾಡುವುದು, ಇಂದಿಗೂ ಕಲ್ಲು ಮುಳ್ಳು ಚುಚ್ಚಿರುವ ಗುರುತು ಈ ಪಾದುಕೆಗಳಲ್ಲಿ ಇರುತ್ತದೆ ಹಾಗೂ ಹೆಜ್ಜೆ ಗುರುತು ಸಹ ಇರುತ್ತದೆ ಎಂದು ಕಳೆದ ತಿಂಗಳು ನೆಡೆದ ಮಹಾ ಕುಂಭ ಮೇಳದಲ್ಲಿ ನಾಗ ಸಾದು ಧನಂಜಯ ಗುರೂಜಿ ಹೇಳಿದ್ದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಆ ಪವಾಡ ಪಾದುಕೆಗಳು ಯಾವುವು ಎಲ್ಲಿವೆ ಅದರ ನಿರ್ಮಾಣ ಪ್ರತೀವರ್ಷ ಯಾರು ಮಾಡುತ್ತಾರೆ ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ,
ಗುಬ್ಬಿಯ ಗೋಸಲ ಚನ್ನಬಸವೇಶ್ವರರು 15 ನೇ ಶತಮಾನದಲ್ಲಿ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಿಂದ ಬಂದು ಗುಬ್ಬಿಯಲ್ಲಿ ನೆಲೆಸಿದ್ದರು ಎಂಬ ಐತಿಹ್ಯವಿದೆ ಶ್ರೀ ಗಳು ರಾಜ ಗುರುಗಳಾಗಿದ್ದರು ಸಾಹಿತಿಗಳು ಆಗಿದ್ದರು ಎಂಬುದಕ್ಕೆ ಇವರ ಕ್ಷೇತ್ರಜ್ಞ ಸುಮನೋವಾದ ಕೃತಿ ಸಾಕ್ಷಿಯಾಗಿದೆ. ಇವರು ಗುಬ್ಬಿಯ ಸುತ್ತಮುತ್ತ ಅನುಷ್ಠಾನ ಕೈಗೊಂಡು ತಮ್ಮ ತಪಸ್ ಶಕ್ತಿಯಿಂದ ಕಷ್ಟ ಕಾರ್ಪಣ್ಯಗಳನ್ನೆಲ್ಲಾ ಬಗೆಹರಿಸುತ್ತಿದ್ದರೆಂಬ ನಂಬಿಕೆ ಈಗಲೂ ಇದೆ
ಇವರ ಪವಾಡ ಹೇಗಿದೆಯೆಂದರೆ ಇವರ ಶಿಷ್ಯ ಎಡೆಯೂರು ಸಿದ್ದಲಿಂಗೇಶ್ವರರ ಪವಾಡಗಳನ್ನು ಕೇಳಿದರೆ ಸಾಕು ಇಂದು ಸಿದ್ದಗಂಗೆಯಲ್ಲಿ ಬೆಟ್ಟದಲ್ಲಿ ನೀರು ಉಕ್ಕುತ್ತಿರುವುದು ಇವರ ಪವಾಡದಿಂದಲೇ.ಇಂತಹ ಪವಾಡ ಪುರುಷ ಗುಬ್ಬಿ ಚನ್ನಬಸವೇಶ್ವರರ ಪವಾಡದ ಪಾದುಕೆಗಗಳು ವರ್ಷಕ್ಕೊಮ್ಮೆ ಬದಲಾಗುತ್ತವೆ, ನೀವು ನಂಬಿದರೆ ನಂಬಬಹುದು ಇಲ್ಲವಾದರೆ ಇಲ್ಲ ಇಂದಿಗೂ ಈ ಪಾದರಕ್ಷೆಗಳನ್ನು ನಿರ್ಮಾಣ ಮಾಡುವ ಕಾರ್ಯ ವಂಶ ಪಾರಂಪರ್ಯದಿಂದ ನೆಡೆಸಿಕೊಂಡು ಬಂದಿರುವುದು ಗುಬ್ಬಿಯ ಸಮೀಪದಲ್ಲೇ ಇರುವ ಚಿಕ್ಕೋನಹಳ್ಳಿ ಗ್ರಾಮದ ದಲಿತ ಕುಟುಂಬದವರಾದ
ದೊಡ್ಡಯ್ಯ, ಹುಚ್ಚಯ್ಯ, ನಂಜುಂಡಯ್ಯನವರ 10 ಜನ ಮಕ್ಕಳು ಹಾಗೂ ಇವತ್ತಿನ ಪೀಳಿಗೆಯವರು ಹೇಳುವ ಪ್ರಕಾರ ಸುಮಾರು 300 ವರ್ಷಗಳಿಂದ ನಮ್ಮ ವಂಶಸ್ಥರು ಪಾದುಕೆಯ ನಿರ್ಮಾಣ ಕಾರ್ಯ ಮಾಡುತ್ತಿದ್ದು ಈಗಲೂ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ, ಮೈ ನವಿರೇಳುವ ವಿಚಾರವನ್ನು ಚಿಕ್ಕೋನಹಳ್ಳಿ ಗ್ರಾಮದ ದಲಿತ ನರಸಿಂಹಮೂರ್ತಿ ಹಂಚಿಕೊಂಡರು
ಮೂಲತಃ ಬೆಂಗಳೂರಿನ ಖಾಸಗಿ ಕಂಪನಿ ಯೊಂದರಲ್ಲಿ ಸೆಕುರಿಟಿ ಗಾರ್ಡ್ ಕೆಲಸ ಮಾಡುತ್ತಿರುವ ಇವರು ಬರಿಗಾಲಲ್ಲಿ 20 ಕ್ಕೂ ಹೆಚ್ಚು ಹಳ್ಳಿಗಳಿಗೆ ಗುರುವಿನ ಪಾದುಕೆಯನ್ನು ಹೊತ್ತುಕೊಂಡು ಹೋಗುತ್ತಾರೆ ಪ್ರತಿ ಹಳ್ಳಿಗಳಲ್ಲಿಭಕ್ತರ ಮನೆಗಳಿಗೆ ತಲುಪಿಸಿ ಅಲ್ಲಿ ಮನೆಯವರು ಪಾದುಕೆಗೆ ಪೂಜೆ ಸಲ್ಲಿಸಿ ತಾವು ಬೆಳೆದಿರುವ ದಾನ್ಯಗಳಾದ ರಾಗಿ ಭತ್ತ ಅವರೆಕಾಳುಗಳನ್ನು ಇವರಿಗೆ ನೀಡುವ ಸಂಪ್ರದಾಯ ಬಹಳ ವರ್ಷಗಳಿಂದ ರೂಡಿಯಲ್ಲಿದೆ ಪಾದುಕೆಯ ನಿರ್ಮಾಣದ ಪ್ರತಿವರ್ಷ ಶಿವರಾತ್ರಿಯ ಹಿಂದಿನ ದಿನ ಈ ಪಾದುಕೆಗಳನ್ನು ಚನ್ನಬಸವೆಶ್ವರ ದೇವಾಲಯದಿಂದ ಹೊತ್ತೋಯುತ್ತಾರೆ
ನಂತರ ಬಹಳ ಭಕ್ತಿಯಿಂದ ಚಿಕ್ಕೋನಹಳ್ಳಿ ಗ್ರಾಮದಲ್ಲಿನ ನಿರ್ದಿಷ್ಟ ಜಾಗವೊಂದರಲ್ಲಿ ಗುಡಿಸಲು ನಿರ್ಮಾಣ ಮಾಡಿ ನಿತ್ಯ ಪೂಜೆ ಸಲ್ಲಿಸಿ ಹೊಸ ಪಾದುಕೆ ನಿರ್ಮಾಣ ಮಾಡುತ್ತಾರೆ. ಇವರು ಹೇಳುವ ಪ್ರಕಾರ ಹಳೆಯ ಪಾದುಕೆಗಳಲ್ಲಿ ಹೆಜ್ಜೆ ಗುರುತು ಕಲ್ಲು ಮುಳ್ಳುಗಳ ಗುರುತು ಗೋಚರವಾಗುತ್ತದಂತೆ ಇವರ ಪ್ರಕಾರ ಇಂದಿಗೂ ಚನ್ನಬಸವೇಶ್ವಸ್ವಾಮಿಯವರು ಈ ಪಾದುಕೆಗಳನ್ನು ಹಾಕಿಕೊಂಡು ಸಂಚಾರ ಮಾಡುತ್ತಾರೆಂಬ ನಂಬಿಕೆ ಇವರದ್ದಾಗಿದೆ,
ಹೊಸದಾಗಿ ನಿರ್ಮಾಣವಾದ ಪಾದುಕೆಗಳನ್ನು ಚನ್ನಬಸವೇಶ್ವರಸ್ವಾಮಿ ರಥೋತ್ಸವದ ದಿನ ಸಂಜೆ 4 ಗಂಟೆಗೆ ದೇವಾಲಯದ ಆವರಣದಲ್ಲಿರುವ ಗೂಡಿಗೆ ತಂದು ಇಡುತ್ತಾರೆ ಅಂದಿನಿಂದ ಒಂದು ವರ್ಷಗಳ ಕಾಲ ಈ ಪಾದುಕೆ ಸವೆಯುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ, ಏನೇ ಆಗಲಿ 15 ಶತಮಾನದಲ್ಲಿ ಪವಾಡಗಳನ್ನು ಮಾಡಿ 21ನೇ ಶತಮಾನದಲ್ಲೂ ಜನರ ಭಕ್ತಿಯ ಪರಾಕಾಷ್ಠೆಯಲ್ಲಿರುವ ಗೋಸಲ ಚನ್ನಬಸವೇಶ್ವರರ ರಥೋತ್ಸವ ಪಾಲ್ಗುಣ ಮಾಸದ ದಶಮಿಯ ದಿನ 15 ದಿನಗಳ ಕಾಲ ನೆಡೆಯುವ ಈ ಅದ್ದೂರಿ ಜಾತ್ರೆಗೆ ಸಾವಿರಾರರು ಭಕ್ತರು ಸಾಕ್ಷಿಯಾಗುತ್ತಾರೆ. ಪವಿತ್ರವಾದ ಈ ಕಾರ್ಯಕ್ಕೆ ಸರ್ಕಾರದ ಮುಜರಾಯಿ ಇಲಾಖೆಯ ಸಹಾಯ ಹಸ್ತ ದ ಅಗತ್ಯತೆ ಇದೆ
ಬಯಲಲ್ಲಿ ಗುಡಿಸಲು ನಿರ್ಮಾಣ ಮಾಡಿಕೊಂಡು ಮೂರು ನಾಲ್ಕು ದಿನಗಳು ಮಾಡುವ ಈ ಕಾರ್ಯಕ್ಕೆ ಚಿಕ್ಕ ಗುಡಿಯೊಂದರ ಅವಶ್ಯಕತೆ ಇದೆ ಕಾರಣ ಚರ್ಮವನ್ನು ನಾಯಿ ಅಥವಾ ಕಾಡು ಪ್ರಾಣಿಗಳು ಹೊತ್ತೊಯುವ ಭಯ ಇವರದ್ದು,
ಗುಬ್ಬಿ ಚನ್ನಬಸವೇಶ್ವರ ರು 15 ಶತಮಾನದಲ್ಲಿ ಗುಬ್ಬಿಯ ಸುತ್ತಮುತ್ತ ಅನುಷ್ಠಾನ ಕೈಗೊಂಡಿದ್ದರು ಹಾಗೂ ಭಕ್ತರ ಮನೆಗಳಿಗೆ ಹೋಗಿ ಪಾದ ಪೂಜೆ ಶಿವಪೂಜೆಯಂತಹ ಕೈಂಕರ್ಯ ನೆರವೇರಿಸುತ್ತಿದ್ದರು ಆ ಕಾರಣದಿಂದ ಇಂದಿಗೂ ಜಾತ್ರಾ ಸಮಯದಲ್ಲಿ ಹಳ್ಳಿ ಹಳ್ಳಿಗೆ ಪಾದುಕೆ ಹೊತ್ತೊಯ್ದು ಪೂಜೆ ಸಲ್ಲಿಸುವ ವಾಡಿಕೆ ಬಂದಿದೆ ಎನ್ನುತ್ತಾರೆ -ಗುಬ್ಬಿ ಪ್ರಕಾಶ್, ಹಿರಿಯ ಕಿರುತೆರೆಯ ಕಲಾವಿದರು,
ಪೂರ್ವದಲ್ಲಿ ಯಾವುದೇ ಸುದ್ದಿ ಮಾಧ್ಯಮ ಇಲ್ಲದ ಕಾರಣ ಜನರಿಗೆ ಗುಬ್ಬಿಯಪ್ಪನ ಜಾತ್ರೆ ಯಾವಾಗ ಎಂದು ತಿಳಿಯಲು ಪಾದುಕೆಗಳನ್ನು ಊರಿಂದ ಊರಿಗೆ ಹೊತ್ತು ಪೂಜೆ ಮಾಡಿಸಿ ಜಾತ್ರೆಯ ದಿನಾಂಕ ತಿಳಿಸಿ ಬರುತ್ತಿದ್ದರು ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದರು,- ಯತೀಶ್ ಗ್ರಾಮಪಂಚಾಯ್ತಿ ಸದಸ್ಯರು ಚೆನ್ನಶೆಟ್ಟಿಹಳ್ಳಿ ಗ್ರಾಮ,
