ಪೇಜರ್‌ ಸ್ಪೋಟ ಪ್ರಕರಣ : ಇಸ್ರೇಲ್‌ ಗೆ ಎಚ್ಚರಿಕೆ ಕೊಟ್ಟ ಉಗ್ರರು

ನವದೆಹಲಿ: 

   ಲೆಬನಾನ್‌ನಾದ್ಯಂತ ಸಂಭವಿಸಿರುವ ಪೇಜರ್‌ಗಳ ಸ್ಫೋಟ ವಿಚಾರವಾಗಿ ಇಸ್ರೇಲ್ ವಿರುದ್ಧ ಕಿಡಿಕಾರಿರುವ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಮಂಗಳವಾರ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

   ಪೇಜರ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಕನಿಷ್ಠ 9 ಮಂದಿ ಸಾವಿಗೀಡಾಗಿ ಸುಮಾರು 2,800 ಜನರು ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಗಾಯಾಳುಗಳಿಗೆ ಹೆಚ್ಚಾಗಿ ಮುಖ, ಕೈಗಳು ಮತ್ತು ಹೊಟ್ಟೆಗೆ ಗಾಯಗಳಾಗಿವೆ ಎಂದು ಲೆಬನಾನಿನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ.

   ಈ ಪೇಜರ್ ಸ್ಫೋಟದಲ್ಲಿ ಇಸ್ರೇಲ್ ನ ನೇರ ಕೈವಾಡವಿದೆ ಎಂದು ಹೆಜ್ಬುಲ್ಲಾ ಆರೋಪಿಸಿದ್ದು, ದಕ್ಷಿಣ ಲೆಬನಾನ್‌ನಲ್ಲಿನ ತನ್ನ ಭದ್ರಕೋಟೆಗಳಲ್ಲಿ ಅದರ ಸದಸ್ಯರು ಬಳಸಿದ ನೂರಾರು ಪೇಜರ್‌ಗಳು ಸ್ಫೋಟಗೊಂಡಿವೆ. ಬೈರುತ್‌ನಲ್ಲಿರುವ ಇರಾನ್‌ನ ರಾಯಭಾರಿ ಕೂಡ ಪೇಜರ್ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಈ ಸ್ಫೋಟಕ್ಕೆ ಕಾರಣರಾದವರನ್ನು ಶೀಘ್ರದಲ್ಲೇ ಶಿಕ್ಷಿಸಲಾಗುತ್ತದೆ ಎಂದು ಎಚ್ಚರಿಸಿದೆ.

   ಇಸ್ರೇಲಿ ಶತ್ರುವನ್ನು “ಈ ಕ್ರಿಮಿನಲ್ ಆಕ್ರಮಣಕ್ಕೆ ಸಂಪೂರ್ಣ ಹೊಣೆಗಾರ”ನನ್ನಾಗಿ ಮಾಡಲಾಗುತ್ತದೆ. ಇಸ್ರೇಲ್ “ಈ ಪಾಪದ ಆಕ್ರಮಣಕ್ಕಾಗಿ ಖಂಡಿತವಾಗಿಯೂ ತನ್ನ ನ್ಯಾಯಯುತ ಶಿಕ್ಷೆಯನ್ನು ಪಡೆಯುತ್ತದೆ” ಎಂದು ಹೆಜ್ಬುಲ್ಲಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Recent Articles

spot_img

Related Stories

Share via
Copy link
Powered by Social Snap