ಪಹಲ್ಗಾಮ್‌ನಲ್ಲಿ ಪೈಶಾಚಿಕ ಕೃತ್ಯ; 70 ವರ್ಷದ ವೃದ್ಧೆ ಮೇಲೆ ಅತ್ಯಾಚಾರ

ಶ್ರೀನಗರ: 

   ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. 70 ವರ್ಷ ಮಹಿಳೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಏಪ್ರಿಲ್ 11 ರಂದು ಪಹಲ್ಗಾಮ್‌ನಲ್ಲಿರುವ ಹೋಟೆಲ್‌ನಲ್ಲಿ ಮಹಾರಾಷ್ಟ್ರದ ಪ್ರವಾಸಿ ಮೇಲೆ ಅತ್ಯಾಚಾರ ನಡೆದಿತ್ತು. ಆರೋಪಿಯು ಮಹಿಳೆಯ ಹೋಟೆಲ್ ಕೋಣೆಗೆ ಬಲವಂತವಾಗಿ ನುಗ್ಗಿ, ಕಂಬಳಿಯಿಂದ ಬಾಯಿ ಮುಚ್ಚಿ, ಅತ್ಯಾಚಾರ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ನ್ಯಾಯಾಲಯ ಜಾಮೀನನ್ನು ನಿರಾಕರಿಸಿದೆ.

   ಈ ಘಟನೆಯು ಸಮಾಜದೊಳಗಿನ “ನೈತಿಕ ಅವನತಿ” ಮತ್ತು “ಅನಾರೋಗ್ಯ ಮನಸ್ಥಿತಿ”ಯ ಪ್ರತಿಬಿಂಬವಾಗಿದೆ ಎಂದು ಹೇಳಿದೆ. ಸಮಾಜದ ನೈತಿಕ ರಚನೆಯನ್ನು ಸಂರಕ್ಷಿಸದ ಹೊರತು ಕಾಶ್ಮೀರದ ನೈಸರ್ಗಿಕ ಸೌಂದರ್ಯವು ಪ್ರವಾಸಿ ತಾಣವಾಗಿ ತನ್ನ ಆಕರ್ಷಣೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಈ ಘಟನೆಯನ್ನು ಕೇವಲ ಕ್ರಿಮಿನಲ್ ಕೃತ್ಯವೆಂದು ಮಾತ್ರವಲ್ಲದೆ ನೈತಿಕ ಕುಸಿತ ಎಂದು ನ್ಯಾಯಾಲಯ ಹೇಳಿದೆ.

   ಸಂತರು ಮತ್ತು ಋಷಿಗಳ ಭೂಮಿಗೆ ಭೇಟಿ ನೀಡಿದ ಹಿರಿಯ ಮಹಿಳೆಯೊಬ್ಬರ ಮೇಲೆ ಇಂತಹ ಘೋರ ಕೃತ್ಯ ನಡೆದಿರುವುದು ಅಪರಾಧ. ಅವರು ತಮ್ಮ ವೃದ್ಧಾಪ್ಯವನ್ನು ಕಳೆಯಲು ಈ ಸ್ಥಳವನ್ನು ಆಯ್ಕೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದ್ದು, ಇದು “ದುರ್ಬಲತೆ ಮತ್ತು ಅನಾರೋಗ್ಯಕರ ಮನಸ್ಥಿತಿಯ ಪ್ರತಿಬಿಂಬ” ಎಂದು ವಿಷಾದಿಸಿದೆ. ಆರೋಪಿಯನ್ನು ಜುಬೈರ್ ಅಹ್ಮದ್ ಎಂದು ಗುರುತಿಸಲಾಗಿದೆ.

   ಜಾಮೀನು, ಜೈಲು ಶಿಕ್ಷೆಯಲ್ಲ’ ಎಂಬ ತತ್ವವನ್ನು ಯಾಂತ್ರಿಕವಾಗಿ ಅನ್ವಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಅಪರಾಧದ ಗಂಭೀರತೆ, ಆರೋಪಿಗಳು ಪರಾರಿಯಾಗುವ ಅಪಾಯ, ಸಾಕ್ಷ್ಯಗಳನ್ನು ಹಾಳುಮಾಡುವ ಸಾಧ್ಯತೆ ಮತ್ತು ಸಮಾಜದ ಮೇಲೆ ಬೀರುವ ವ್ಯಾಪಕ ಪರಿಣಾಮದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು, ಆದರೆ ಈ ಪ್ರಕರಣದಲ್ಲಿ ಜಾಮೀನು ನೀಡಲು ಯಾವುದೇ ಒಲವು ಇಲ್ಲ ಎಂದು ನ್ಯಾಯಾಲಯ ಹೇಳಿದೆ. 

   ಈ ಹಂತದಲ್ಲಿ ಜಾಮೀನು ನೀಡುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ. ಪ್ರತ್ಯಕ್ಷದರ್ಶಿಗಳ ಸಾಕ್ಷ್ಯಗಳು ಮತ್ತು ವೈದ್ಯಕೀಯ ಮತ್ತು ವಿಧಿವಿಜ್ಞಾನ ವರದಿಗಳು ಸೇರಿದಂತೆ ಪ್ರಾಥಮಿಕ ಸಾಕ್ಷಿಗಳಿವೆ. ಜಾಮೀನು ಅರ್ಜಿಯಲ್ಲಿ ಅಥವಾ ಮಂಡಿಸಲಾದ ವಾದಗಳಲ್ಲಿ ಯಾವುದೂ ಆರೋಪಿಯ ಬಿಡುಗಡೆಯನ್ನು ಸಮರ್ಥಿಸುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

Recent Articles

spot_img

Related Stories

Share via
Copy link