ನವದೆಹಲಿ:
ಮುಂಬರುವ ದಿನಗಳಲ್ಲಿ ಜಾರಿಗೆ ಬರಬಹುದಾದ ಮತ್ತು ಇನ್ನು ಜಾರಿಗೆ ಬಾರದ ನಾಲ್ಕು ಕಾರ್ಮಿಕ ಕಾನೂನುಗಳು ಅನೇಕ ಕ್ಷೇತ್ರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತವೆ ಎನ್ನಲಾಗುತ್ತಿದೆ. ಈ ನಡುವೆ ಈ ಕಾನೂನುಗಳು ಜಾರಿಗೆ ಬಂದ ನಂತರ, ಇತರ ನಿಯಮಗಳ ನಡುವೆ, ನೌಕರರು ಕ್ಯಾಲೆಂಡರ್ ವರ್ಷದಲ್ಲಿ 30 ದಿನಗಳಿಗಿಂತ ಹೆಚ್ಚು ವೇತನ ಸಹಿತ ರಜೆಗಳನ್ನು ಸಂಗ್ರಹಿಸುವಂತಿಲ್ಲ.
ರಜೆಗಳು 30 ದಿನಗಳಿಗಿಂತ ಹೆಚ್ಚಿದ್ದರೆ, ಕಂಪನಿ ಅಥವಾ ಉದ್ಯೋಗದಾತರು ಉದ್ಯೋಗಿಗೆ ಹೆಚ್ಚುವರಿ ರಜೆಯನ್ನು ಪಾವತಿಸಬೇಕಾಗುತ್ತದೆ.
4 ಕಾರ್ಮಿಕ ಕಾನೂನುಗಳಲ್ಲಿ ಒಂದಾದ ‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ’ ಪ್ರಕಾರ, ಈ ಸಂದರ್ಭದಲ್ಲಿ ‘ಉದ್ಯೋಗಿ’ ಎಂದರೆ ವ್ಯವಸ್ಥಾಪಕ ಅಥವಾ ಮೇಲ್ವಿಚಾರಣಾ ಪಾತ್ರಗಳಲ್ಲಿಲ್ಲದವರು ಅಂತ ಉಲ್ಲೇಖ ಮಾಡಲಾಗಿದೆ.
ನಾಲ್ಕು ಕಾರ್ಮಿಕ ಕಾನೂನುಗಳು – ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ; ವೇತನ ಸಂಹಿತೆ; ಕೈಗಾರಿಕಾ ಸಂಬಂಧಗಳ ಸಂಹಿತೆ; ಮತ್ತು ಸಾಮಾಜಿಕ ಭದ್ರತಾ ಸಂಹಿತೆ – ಈಗಾಗಲೇ ಸಂಸತ್ತು ಅಂಗೀಕರಿಸಿದೆ ಮತ್ತು ಸರ್ಕಾರದಿಂದ ಅಧಿಸೂಚನೆ ಹೊರಡಿಸಿದೆ.
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020 (ಒಎಸ್‌ಎಚ್ ಕೋಡ್) ನ ಸೆಕ್ಷನ್ 32, ವಾರ್ಷಿಕ ರಜೆ ಪಡೆಯಲು, ಮುಂದುವರಿಸಲು ಮತ್ತು ನಗದೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ಷರತ್ತುಗಳನ್ನು ಹೊಂದಿದೆ. ಸೆಕ್ಷನ್ 32 (vii) ಒಬ್ಬ ಕೆಲಸಗಾರನಿಗೆ ಮುಂದಿನ ಕ್ಯಾಲೆಂಡರ್ ವರ್ಷಕ್ಕೆ, ಗರಿಷ್ಠ 30 ದಿನಗಳವರೆಗೆ ವಾರ್ಷಿಕ ರಜೆಯನ್ನು ಮುಂದುವರಿಸಲು ಅನುಮತಿಸುತ್ತದೆ. ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ವಾರ್ಷಿಕ ರಜೆ ಬ್ಯಾಲೆನ್ಸ್ 30 ಕ್ಕಿಂತ ಹೆಚ್ಚಿದ್ದರೆ, ಉದ್ಯೋಗಿಯು ಹೆಚ್ಚುವರಿ ರಜೆಯನ್ನು ನಗದೀಕರಿಸಲು ಮತ್ತು ಮುಂದಿನ ವರ್ಷಕ್ಕೆ 30 ದಿನಗಳನ್ನು ಮುಂದುವರಿಸಲು ಅರ್ಹರಾಗಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ