ಬೆಂಗಳೂರು:
ಪ್ರೆಸ್ ಕ್ಲಬ್ ಸಭಾಂಗಣದಲ್ಲಿ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ-2025ರ ನವೆಂಬರ್ 7ರಿಂದ 9ರವರೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಇದರ ಕುರಿತು ಮಾಧ್ಯಮಗೋಷ್ಟಿ ಸಂಘಟನಾ ಅಧ್ಯಕ್ಷರಾದ ಬಿ.ಹೆಚ್.ಅನಿಲ್ ಕುಮಾರ್ ನಿವೃತ್ತ ಐಎಎಸ್ ರವರು ಸ್ಥಾಪಕ ಟ್ರಸ್ಟಿ ಶ್ರೀಮತಿ ಲಲಿತಾ ಗೋಯಲ್ ಮತ್ತು ಆಧುನಿಕ ಪೈಥಿಯನ್ ಕ್ರೀಡಾಕೂಟಗಳ ಸಂಸ್ಥಾಪಕರಾದ ಬಿಜೇಂದರ್ ಗೋಯಲ್ , ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸ್ನೇಹಾ ವೆಂಕರಮಣಿ, ಡೆಲ್ಛಿಕ್ ಇಂಡಿಯ ಟ್ರಸ್ಟಿ ಶಿವಕುಮಾರ್ , ಐ.ಎಎಸ್.ಅಧಿಕಾರಿ ಜೋಗ್ ಪಾಲ್ ಸಮಾಜ ಸೇವಕ ಚೇತನ್ ದಾಸರಹಳ್ಳಿ ರವರು ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಸಂಸ್ಥಾಪಕರಾದ ಬಿಜೇಂದ್ರರ್ ಗೋಯಲ್ ರವರು ಮಾತನಾಡಿ ಎರಡನೇಯ ರಾಷ್ಟ್ರೀಯ ಸಾಂಸ್ಕೃತಿಕ ಕ್ರೀಡಾಹಬ್ಬ ಪೈಥಿಯನ್ ಕ್ರೀಡಾಕೂಟ ನವೆಂಬರ್ 7ರಿಂದ 9ರವರಗೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.ಪೈಥಿಯನ್ ಕ್ರೀಡಾಕೂಟ ಹಳೆಯ ಕ್ರೀಡೆಯಾಗಿದೆ. ಇದರಲ್ಲಿ ನಾಟಕ, ಪೈಟಿಂಗ್, ನಾಟಕ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದೆ.
ಓಲಂಪಿಕ್ ನಲ್ಲಿ ಕ್ರೀಡೆಗಳಿಗೆ ಮಾತ್ರ ಅವಕಾಶವಿದೆ ಅದರೆ ಪೈಥಿಯನ್ ಕ್ರೀಡೆಗಳಲ್ಲಿ ಕಲೆ, ಸಂಸ್ಕೃತಿ ಮತ್ತು ಕ್ರೀಡೆಗಳಿಗೆ ಅವಕಾಶವಿದೆ 8 ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ.ಇದೀಗ ಕ್ರಿಕೆಟ್ ಆಡಿಸಲಾಗುತ್ತದೆ ಮಹಿಳೆ ಮತ್ತು ಪುರುಷರು ಒಂದೇ ಟೀಮ್ ನಲ್ಲಿ ಇರುತ್ತಾರೆ.ಪ್ರಾಚೀನ ಕ್ರೀಡೆಯಾದ ಪೈಥಿಯನ್ ಗ್ರೇಮ್ಸ್ ಪ್ರಚಾರಪಡಿಸಲು ಪೈಥಿಯನ್ ಟಿ.ವಿ.ಚಾನಲ್ ಆರಂಭಿಸಲಾಗುತ್ತಿದೆ.
ಬಿ.ಹೆಚ್.ಅನಿಲ್ ಕುಮಾರ್ ರವರು ಮಾತನಾಡಿ ಪೈಥಿಯನ್ ಕ್ರೀಡೆಗಳು ಗ್ರೀಸ್ ದೇಶದಲ್ಲಿ ಆರಂಭವಾಯಿತು. ದೇಶದಲ್ಲಿ 2002ರಲ್ಲಿ ಪೈಥಿಯನ್ ಗೇಮ್ಸ್ ಆರಂಭಿಸಲಾಯಿತು.ಅಪಲೋ ದೇವರ ಗೌರವಾರ್ಥವಾಗಿ ಆಧುನಿಕ ಇಸ್ತಮಿಯನ್ ಗೇಮ್ಸ್ ಮಾಡಲಾಗುತ್ತಿದೆ. 2ನೇ ರಾಷ್ಟ್ರೀಯ ಪೈಥಿಯನ್ ಗೇಮ್ಸ್ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಪೈಥಿಯನ್ ಕ್ರೀಡಾಕೂಟ ಆಯೋಜನೆಯಿಂದ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಲಿದೆ.ಸಾಂಸ್ಕೃತಿಕ ಕ್ರೀಡಾಹಬ್ಬವನ್ನು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಮತ್ತು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಉದ್ಘಾಟನೆ ಮಾಡಲಿದ್ದಾರೆ
ಮಾನಸಿಕ ಮತ್ತು ದೃಹಿಕವಾಗಿ ಆರೋಗ್ಯವಂತರಾಗಿ ಇರಲು ಕ್ರೀಡಾ ಚಟುವಟಿಕೆ ಮುಖ್ಯ, ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟಕ್ಕೆ ಸಾರ್ವಜನಿಕರು, ಕ್ರೀಡಾಪಟುಗಳು ಆಗಮಿಸಬೇಕಾಗಿ ವಿನಂತಿ ಎಂದು ಹೇಳಿದರು.ಸ್ಪರ್ಧೆಗಳ ಪಟ್ಟಿಯಲ್ಲಿ ಕಲೆ ಮತ್ತು ಸಂಸ್ಕೃತಿಯಲ್ಲಿ ನೃತ್ಯ, ಸಂಗೀತ, ಗಾಯನ, ನಾಟಕ, ಕಾವ್ಯ, ಪ್ರಬಂಧ ಬರಹ,ಚಿತ್ರಕಲೆ,ರಂಗೋಲಿ,ಮೆಹೆಂದಿ ವಿನ್ಯಾಸ,ಪೇಂಟಿಂಗ್,ಸಾಂಸ್ಕೃತಿಕ ಫ್ಯಾಷನ್ ಶೋ,ಕಥೆ ಹೇಳುವಿಕೆ ಸ್ಟ್ಯಾಂಡ್-ಅಪ್ ಕಾಮಿಡಿ ಆಟಗಳಲ್ಲಿ ಮೂಸಿಕಲ್ ಚೇರ್, ಕಯಿ ಹಾರಾಟ,ಯೋಗ ಕ್ರೀಡೆಗಳು ತುಗ್ಗು-ಓಟ, ಭುಜಬಲ (Arm Wrestling)ಹ್ಯಾಮರ್ ಬಾಲ್,ಲಗೋರಿ,ಟೆನ್ನಿಸ್ ವಾಲಿಬಾಲ್,ಸೈಕ್ಲೊಥಾನ್,ಮ್ಯಾರಥಾನ್,ಚೀಲ ಓಟ, ಕಪ್ಪೆ ಓಟ,ಒಂದು ಕಾಲು ಓಟ, ಲೂಡೋ ಮಾರ್ಷಲ್ ಆರ್ಟ್ಸ್ ನಲ್ಲಿ ಗದಾ ಯುದ್ಧ,ಕರಾಟೆ, ಟೆಕ್ವಾಂಡೋ ಬಗತೂರ್ ಮತ್ತು ಸಾಫ್ಟ್ ಬಾಲ್ ಕ್ರಿಕೆಟ್ ಆಯೋಜಿಸಲಾಗಿದೆ.
