ನವದೆಹಲಿ:
ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಭಾರತ ಪಾಕಿಸ್ತಾನದ 16 ನಗರಗಳ ಮೇಲೆ ದಾಳಿ ನಡೆಸಿದೆ. ಇದೀಗ ಭಾರತದ ದಾಳಿಗೆ ಬೆಚ್ಚಿ ಬಿದ್ದಿರುವ ಪಾಕ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಶುರುವಾಗಿದೆ. ಪಾಕಿಸ್ತಾನದ ಸಂಸತ್ತಿನಲ್ಲಿ ಬಹಿರಂಗವಾಗಿಯೇ ಪ್ರಧಾನಿ ಶೆಹಬಾಜ್ ವಿರುದ್ಧ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಸಂಸದರೊಬ್ಬರು ತಮ್ಮದೇ ಪ್ರಧಾನಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು “ಉಚ್ಚರಿಸಲು” ಹೆದರುವ “ಹೇಡಿ” ಎಂದು ಕರೆದಿದ್ದು, ಶೆಹಬಾಜ್ ಷರೀಫ್‌ಗೆ ಭಾರಿ ಮುಜುಗರವನ್ನುಂಟು ಮಾಡಿದೆ.
ಪಾಕಿಸ್ತಾನ ಭಾರತದ ಸೇನಾ ನೆಲೆ ಹಾಗೂ ನಾಗರಿಕ ಪ್ರದೇಶವನ್ನು ಗುರಿಯಾಸಿ ಕ್ಷಿಪಣಿ ದಾಳಿ ನಡೆಸಿತ್ತು. ನಂತರ ಭಾರತ ಆ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ನಂತರ ಪ್ರತಿದಾಳಿಯಾಗಿ ಪಾಕಿಸ್ತಾನದ 16 ನಗರಗಳ ಮೇಲೆ ದಾಳಿ ನಡೆಸಿತ್ತು. ಭಾರತದ ಆರ್ಭಟಕ್ಕೆ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಇದೀಗ ಅಲ್ಲಿನ ಸಂಸದರು ಪ್ರಧಾನಿ ವಿರುದ್ಧ ಸಿಡಿದೆದ್ದಿದ್ದಾರೆ. ನಮ್ಮ ನಾಯಕ ಪಕ್ಕದ ದೇಶದ ನಾಯಕನ ಹೆಸರು ಹೇಳಲು ಭಯ ಪಡುತ್ತಾರೆ. ರಾಜ ಸಿಂಹನಂತಿದ್ದರೆ ಆತನ ಸೇನೆಯಲ್ಲಿ ತೋಳಗಳಿದ್ದರೂ ಅವು ಸಿಂಹಗಳಂತೆ ಹೋರಾಟುತ್ತವೆ ಎಂದು ಟಿಪ್ಪು ಸುಲ್ತಾನ್ ಅವರ ಮಾತನ್ನು ಸಂಸದ ಸಂಸತ್ತಿನಲ್ಲಿ ಉಲ್ಲೇಖಿಸಿದ್ದಾನೆ.
ನಮ್ಮ ಸರ್ಕಾರಕ್ಕೆ ಧೈರ್ಯ ಇಲ್ಲ. ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ?” ಎಂದು ಪಾಕಿಸ್ತಾನಿ ಸಂಸತ್ತಿನ ಸದನದಲ್ಲಿ ಸಂಸದರು ಪ್ರಶ್ನಿಸಿದರು. ನಿನ್ನೆ ಪಾಕಿಸ್ತಾನದ ಮೇಲೆ ನಡೆದ ದಾಳಿ ಬಳಿಕ ಮತ್ತೊಬ್ಬ ತಾಹೀರ್ ಇಕ್ಬಾಲ್ ಪಾಕಿಸ್ತಾನದ ಪ್ರಜೆಗಳನ್ನು ಕಾಪಾಡುವಂತೆ ಕೋರಿ ಸಂಸತ್ತಿನಲ್ಲಿಯೇ ಅತ್ತು ಗೋಳಾಡಿದ್ದಾನೆ. “ಭಾರತದ ದಾಳಿಯಿಂದ ಪಾಕಿಸ್ತಾನದ ನಿವಾಸಿಗಳನ್ನು ದಯವಿಟ್ಟು ರಕ್ಷಿಸಿ. ಭಾರತದ ದಾಳಿಯಿಂದಾಗಿ ಅಮಾಯಕ ಜನರು ಸಾಯುತ್ತಾರೆ. ಸರ್ಕಾರವು ನಾಗರಿಕರನ್ನು ರಕ್ಷಿಸಲೇಬೇಕು” ಎಂದು ಇಕ್ಬಾಲ್ ಕಣ್ಣೀರಿಟ್ಟಿದ್ದಾನೆ. ಸಂಸದನಾಗಿರುವ ತಾಹೀರ್ ಇಕ್ಬಾಲ್ ಪಾಕ್ ಸೇನೆಯ ನಿವೃತ್ತ ಮೇಜರ್ ಎಂದು ಮೂಲಗಳು ತಿಳಿಸಿವೆ.
ಭಾರತ ಯುದ್ಧಕ್ಕೆ ಸಂಪೂರ್ಣ ಸಜ್ಜಾಗಿದ್ದು, ನಮ್ಮ ನೆಲವನ್ನು ಮುಟ್ಟಿದವರಿಗೆ ನಾವು ತಕ್ಕ ಉತ್ತರವನ್ನು ನೀಡುತ್ತೇವೆ ಎಂದು ತಿಳಿಸಿದೆ. ಕೇಂದ್ರ ಸರ್ಕಾರ ಸಭೆ ಮೇಲೆ ಸಭೆ ನಡೆಸುತ್ತಿದ್ದು, ಇಡೀ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆ ಕರೆದಿದ್ದಾರೆ. , ಅವರು ಗಡಿ ಭದ್ರತಾ ಪಡೆ (BSF) ಸೇರಿದಂತೆ ದೇಶದ ಗಡಿ ಕಾವಲು ಪಡೆಗಳ ಮುಖ್ಯಸ್ಥರೊಂದಿಗೆ ಗುರುವಾರ ತಡರಾತ್ರಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯುದ್ಧಕ್ಕೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದು, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಹೆಚ್ಚು ಮಾಡುವಂತೆ ಸಚಿವರು ಸೂಚನೆ ನೀಡಿದ್ದಾರೆ.








