ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ಪಾಕಿಸ್ತಾನದ ಮೊದಲ ರಿಯಾಕ್ಷನ್‌ ಏನು?

ನವದೆಹಲಿ:

    26/11 ಮುಂಬೈ ದಾಳಿಯ ಆರೋಪಿ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಎನ್‌ಐಎ ಅಧಿಕಾರಿಗಳು ಅಮೆರಿಕದಿಂದ ಭಾರತಕ್ಕೆ ಆತನನ್ನು ಕರೆದುಕೊಂಡು ಬಂದಿದ್ದಾರೆ. , ರಾಣಾನನ್ನು ಲಾಸ್ ಏಂಜಲೀಸ್‌ನಲ್ಲಿರುವ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ದೆಹಲಿಗೆ ಆಗಮಿಸಿದ ನಂತರ, ಗುಪ್ತಚರ ಅಧಿಕಾರಿಗಳು, ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಮತ್ತು ಅಪರಾಧಶಾಸ್ತ್ರ ಮನಶ್ಶಾಸ್ತ್ರಜ್ಞರನ್ನು ಒಳಗೊಂಡ ಬಹು-ಏಜೆನ್ಸಿ ತಂಡವು ವಿಚಾರಣೆ ನಡೆಸಲಿದೆ. ರಾಣಾ ಹಸ್ತಾಂತರ ಪ್ರಕ್ರಿಯೆ ನಂತರ ಪಾಕಿಸ್ತಾನ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದೆ.

   ರಾಣಾ ಮೂಲತಃ ಪಾಕಿಸ್ತಾನೆ ಪ್ರಜೆಯಾಗಿದ್ದಾನೆ. ಆತ ಅಮೆರಿಕ ಹಾಗೂ ಕೆನಡಾದಲ್ಲಿ ವಾಸ ಮಾಡುತ್ತಿದ್ದ. ಇದೀಗ ಪಾಕಿಸ್ತಾನ ರಾಣಾ ನಮ್ಮ ದೇಶದ ಪ್ರಜೆಯಲ್ಲ ಎಂದು ಹೇಳಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿ, ಆತ ಕೆನಡಾದಲ್ಲಿ ವಾಸಿಸುತ್ತಿದ್ದ, ಆತ ಕೆನಡಾ ಪ್ರಜೆ ಎಂದು ಹೇಳಿಕೆ ನೀಡಿದೆ. ತಹವ್ವೂರ್ ರಾಣಾ ಕಳೆದ ಎರಡು ದಶಕಗಳಲ್ಲಿ ತನ್ನ ಪಾಕಿಸ್ತಾನಿ ದಾಖಲೆಗಳನ್ನು ನವೀಕರಿಸಿಲ್ಲ. ಕೆನಡಾದ ರಾಷ್ಟ್ರೀಯತೆ ಬಹಳ ಸ್ಪಷ್ಟವಾಗಿದೆ” ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಮುಂಬೈ 26/11 ದಾಳಿಯ ಪಿತೂರಿಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ರಾಣಾ ಬಹಿರಂಗ ಹೇಳಿಕೆ ನೀಡಬಹುದು ಎಂದು ಪಾಕಿಸ್ತಾನ ಭಯಗೊಂಡಿದೆ ಎಂದು ಹೇಳಲಾಗಿದೆ.

   ರಾಣಾ ಈ ಮೊದಲು ಪಾಕಿಸ್ತಾನ ಸೇನೆಯಲ್ಲಿ ವೈದ್ಯನಾಗಿದ್ದ ಎನ್ನಲಾಗಿದೆ. ನಂತರ ಆತ ಕೆನಡಾಗೆ ತೆರಳಿದ್ದ. ತಹವ್ವುರ್ ರಾಣಾ, ಲಷ್ಕರ್-ಎ-ತೊಯ್ಬಾ   ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದಾನೆ. ಈತ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆಯಾಗಿದ್ದಾನೆ. 2008 ರಲ್ಲಿ ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ ದಾಳಿಯಲ್ಲಿ 166 ಜನ ಅಮಾಯಕರು ಜೀವ ಬಿಟ್ಟಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವನ್ನು ಹೊತ್ತಿದ್ದಾನೆ. ದಾಳಿಯ ಹಿಂದಿನ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾಗಿದ್ದ ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. 

   ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ‌ತಹವ್ವುರ್ ರಾಣಾ ಮೇಲ್ವಿಚಾರಣೆ ನಡೆಯಲಿದೆ. ದೆಹಲಿಯ ತಿಹಾರ್ ಜೈಲಿನಲ್ಲಿರುವ ಹೆಚ್ಚಿನ ಭದ್ರತೆಯ ವಾರ್ಡ್‌ನಲ್ಲಿ ಇರಿಸಲಾಗುತ್ತದೆ. ಆತ ಇರುವ ಸೆಲ್‌ಗೆ ಹೆಚ್ಚಿನ ಭದ್ರತೆ ಒದಗಿ, ಸಿಸಿಟಿವಿಯನ್ನು ಅಳವಡಿಸಲಾಗುತ್ತದೆ. ಸದಾ ಆತನ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಸೆಲ್‌ನಲ್ಲಿಯೇ ಆತನಿಗೆ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ.