ಬೆಂಗಳೂರು:
ಪಂಚಮಸಾಲಿಗಳನ್ನು ಹಿಂದುಳಿದ ವರ್ಗ ಎಂದು ಗುರುತಿಸಿ 2 ಎ ಮೀಸಲು ಸ್ಥಾನಮಾನ ನೀಡುವಂತೆ ಮತ್ತೆ ಒತ್ತಡ ಹೇರಲು ಆರಂಭಿಸಿದ್ದಾರೆ. ಪಂಚಮಸಾಲಿ ಮಠಾಧೀಶ ಜಯ ಮೃತ್ಯುಂಜಯ ಸ್ವಾಮೀಜಿ ವಿವಿಧ ಶಾಸಕರ ನಿವಾಸಗಳಲ್ಲಿ ಸಭೆ ನಡೆಸಲು ಆರಂಭಿಸಿದ್ದಾರೆ, ಭಾನುವಾರ ತೇರದಾಳ ಶಾಸಕ ಸಿದ್ದು ಸವದಿ ಅವರ ನಿವಾಸದಲ್ಲಿ ಸಭೆ ನಡೆಯಿತು.
ಪಂಚಮಸಾಲಿ ಮುಖಂಡರು ಹಾಗೂ ಶಾಸಕರಾದ ವಿನಯ್ ಕುಲಕರ್ಣಿ, ಅರವಿಂದ ಬೆಲ್ಲದ್, ಎಂ.ಆರ್.ಪಾಟೀಲ್ ಅವರ ನಿವಾಸದಲ್ಲಿ ಈ ಹಿಂದೆ ಸಭೆ ನಡೆಸಲಾಗಿತ್ತು. ಸದ್ಯದಲ್ಲೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆಯಲ್ಲಿಯೂ ಸಭೆ ನಡೆಯಲಿದೆ.
ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿಲ್ಲ ಹೀಗಾಗಿ ಅವರು ಮರುಚಿಂತನೆ ಮಾಡಬೇಕಾಗಿದೆ ಎಂದಿದ್ದಾರೆ.
ವಿಧಾನಸಭೆಯಲ್ಲಿ 20 ಪಂಚಮಸಾಲಿ ಸದಸ್ಯರಿದ್ದಾರೆ. ಅವರಲ್ಲಿ 11 ಕಾಂಗ್ರೆಸ್, 8 ಬಿಜೆಪಿ ಮತ್ತು ಒಬ್ಬರು ಜೆಡಿಎಸ್ ಶಾಸಕರಾಗಿದ್ದಾರೆ. ಸಮುದಾಯವು ಹಿಂದುಳಿದಿರುವುದನ್ನು ಸಾಬೀತುಪಡಿಸಿದರೆ ಅವರಿಗೂ ಮೀಸಲಾತಿ ಸಿಗುತ್ತದೆ ಎಂದು ಕೆಲವು ಹಿಂದುಳಿದ ವರ್ಗಗಳ ಚಳವಳಿಯ ಮುಖಂಡರು ಹೇಳಿದ್ದಾರೆಂದು ತಿಳಿಸಿದ್ದಾರೆ.
