ಸ್ನೂಕರ್ ಚಾಂಪಿಯನ್ ಶಿಫ್ ಗೆದ್ದು ಬೀಗಿದ ಪಂಕಜ್ ಅಡ್ವಾಣಿ!

ದೋಹಾ:

   ಭಾರತದ ಅತ್ಯಂತ ನಿಪುಣ ಆಟಗಾರ ಪಂಕಜ್‌ ಅಡ್ವಾಣಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹೋನ್ನತ ಸಾಧನೆ ಮಾಡಿದ್ದಾರೆ.14ನೇ ಏಷ್ಯನ್ ಸ್ನೂಕರ್ ಚಾಂಪಿಯನ್ ಶಿಫ್ ಗೆದ್ದು ಬೀಗಿದ್ದಾರೆ. ವೃತ್ತಿ ಜೀವನದಲ್ಲಿ ಮೂರನೇ ಬಾರಿಗೆ ಈ ಪ್ರಶಸ್ತಿ ಗೆದಿದ್ದಾರೆ.

   ಫೈನಲ್ ಪಂದ್ಯದಲ್ಲಿ ಇರಾನ್ ನ ಅಮಿರ್ ಸರ್ಕೋಶ್ ಅವರನ್ನು 4-1 ಅಂತರದಿಂ ಸೋಲಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇಂದೋರ್ ನಲ್ಲಿ ನಡೆದ ರಾಷ್ಟ್ರೀಯ ಸ್ನೋಕರ್ ಚಾಂಪಿಯನ್ ಶಿಪ್ ಗೆದ್ದ ಕೆಲವೇ ದಿನಗಳಲ್ಲಿ ಈ ಅಭೂತಪೂರ್ವ ಸಾಧನೆ ಮಾಡಿದ್ದಾರೆ.

   ಇದು 14ನೇ ಏಷ್ಯನ್ ಸ್ನೂಕರ್ ಚಾಂಪಿಯನ್ ಶಿಫ್ ಪ್ರಶಸ್ತಿಯಾಗಿದೆ. ಇದು 27 ಬಾರಿ ಅಂತರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಶನ್ ವಿಶ್ವ ಚಾಂಪಿಯನ್ ಆಗಿರುವ ಭಾರತೀಯ ಆಟಗಾರನಿಗೆ ಮತ್ತೊಂದು ಗೆಲುವಿನ ಗರಿಯಾಗಿದೆ. ಪಂಕಜ್ ಅಡ್ವಾಣಿ ಒಟ್ಟು 18 ಬಿಲಿಯರ್ಡ್ಸ್ ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಸಾಧನೆಗಳನ್ನು ಗುರುತಿಸಿ, ಭಾರತ ಸರ್ಕಾರವು 2004 ರಲ್ಲಿ ಅರ್ಜುನ ಪ್ರಶಸ್ತಿ, 2006 ರಲ್ಲಿ ಖೇಲ್ ರತ್ನ, 2009 ರಲ್ಲಿ ಪದ್ಮಶ್ರೀ ಮತ್ತು 2018 ರಲ್ಲಿ ಪದ್ಮಭೂಷಣ ಮುಂತಾದ ವಿವಿಧ ಪ್ರಶಸ್ತಿಗಳನ್ನು ನೀಡಿದೆ.

 

Recent Articles

spot_img

Related Stories

Share via
Copy link