ಚಳ್ಳಕೆರೆ:
ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಶ್ರೀ ವೆಂಕಟೇಶ್ವರ ಟ್ರೈಡರ್ಸ್ ಮಾಲೀಕರು ಸರಬರಾಜು ಮಾಡಿರುವ ಕುಡಿಯುವ ನೀರು ಹಾಗೂ ಬೀದಿ ದೀಪದ ಬಿಡಿಭಾಗಗಳ 7,46,915 ಬಿಲ್ ಪಾವತಿಸದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿ ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬೇಡರಹಳ್ಳಿ ಬಸವ ರೆಡ್ಡಿ ಶ್ರೀ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕರು ಗ್ರಾಮ ಪಂಚಾಯಿತಿಗೆ ಸರಬರಾಜು ಮಾಡಿರುವ ಬಿಡಿಭಾಗಗಳ ಹಣದ ಬಾಪ್ತನ್ನು ಬಿಡುಗಡೆಗೊಳಿಸುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಪಿಡಿಓಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಅಂಗಡಿ ಮಾಲೀಕರು ಸಾಲ ಮಾಡಿ ಸಾಮಾನುಗಳನ್ನು ಖರೀದಿಸಿ ಗ್ರಾಮ ಪಂಚಾಯಿತಿಗೆ ನೀಡಿದ್ದಾರೆ ಆದರೂ ಸಹ ಬಾಕಿ ಉಳಿಸಿಕೊಂಡಿರುವುದರಿಂದ ಇಂದು ಅಂಗಡಿ ಮಾಲೀಕರು ವಿಷ ಸೇವಿಸುವಂತೆ ಆಗಿದೆ.
ಕೂಡಲೇ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಸತ್ಯ ಸತ್ಯತೆ ತಿಳಿಯಲು ಅಧಿಕಾರಿಗಳು ಎಲ್ಲಾ ಪಕ್ಷದ ರಾಜಕಾರಣಿಗಳು ಪ್ರಗತಿಪರ ರೈತ ಸಂಘಟನೆಗಳ ಮುಖಂಡರ ಒಳಗೊಂಡ ಸತ್ಯಶೋಧನ ಸಮಿತಿ ರಚನೆ ಮಾಡಿ ಬೇಡರೆಡ್ಡಿಹಳ್ಳಿ ಬಂಜೆಗೆರೆ ಗ್ರಾಮಗಳಲ್ಲಿ ಆಗಿರುವ ಅಭಿವೃದ್ಧಿ ಖರ್ಚು ವೆಚ್ಚಗಳ ಬಗ್ಗೆ ತನಿಖೆ ನಡೆಸಿ ಗ್ರಾಮಸ್ಥರಿಗೆ ಹಾಗೂ ತಾಲೂಕಿನ ಜನತೆಗೆ ಸತ್ಯ ತಿಳಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು
