“ಪರಿಕ್ಷಾ ಪೇ ಚರ್ಚೆ” : ಇಂದು ವಿದ್ಯಾಥಿಗಳೊಂದಿಗೆ ಮೋದಿ ಚರ್ಚೆ….!

ನವದೆಹಲಿ :

   ಪ್ರಧಾನಿ ನರೇಂದ್ರ ಮೋದಿ ಇಂದು ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ  ಈ ಕಾರ್ಯಕ್ರಮವನ್ನು ಟಿವಿ, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವೀಕ್ಷಿಸಬಹುದು.

   ವಿದ್ಯಾರ್ಥಿಗಳನ್ನು ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶ. ಕಳೆದ ಕೆಲವು ವರ್ಷಗಳಲ್ಲಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವುದು, ಅವರ ಒತ್ತಡದ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಅವರು ಆರೋಗ್ಯವಾಗಿರಲು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
   ಈ ಕಾರ್ಯಕ್ರಮಕ್ಕಾಗಿ ಇದಕ್ಕಾಗಿ 3.30 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಆಯ್ಕೆಯಾದ ಸುಮಾರು 2,500 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ದೂರದರ್ಶನ, PMO ನ ಅಧಿಕೃತ ಯೂಟ್ಯೂಬ್ ಚಾನೆಲ್, ಶಿಕ್ಷಣ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಕ್ಷಿಸಬಹುದು.
   ಈ ಕಾರ್ಯಕ್ರಮವನ್ನು ಪಿಐಬಿ, ಶಿಕ್ಷಣ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ ಇತ್ಯಾದಿಗಳ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ಸಮಯದಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ದೂರದರ್ಶನ ಸೇರಿದಂತೆ ಹಲವು ಚಾನೆಲ್‌ಗಳಲ್ಲಿ ‘ಪರೀಕ್ಷಾ ಪೆ ಚರ್ಚಾ’ 2025 ಅನ್ನು ವೀಕ್ಷಿಸಬಹುದು. ಕೆಲವು ಶಾಲೆಗಳಲ್ಲಿ ಪರೀಕ್ಷಾ ಪೆ ಚರ್ಚಾ 2025 ರ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ.
   ಪ್ರಧಾನಿ ಮೋದಿ ಅವರಲ್ಲದೆ, ಸದ್ಗುರು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ವಿಕ್ರಾಂತ್ ಮಾಸ್ಸೆ, ಮೇರಿ ಕೋಮ್, ಅವನಿ ಲೇಖರಾ ಅವರು ಈ ಚರ್ಚೆಯ ಭಾಗವಾಗಿರಲಿದ್ದಾರೆ.

Recent Articles

spot_img

Related Stories

Share via
Copy link