ಶಶಿಧರ ಶಾಹಪೂರ ಸಂಪ್ರದಾಯಬದ್ಧವಾಗಿ ಮಣ್ಣಿನ ಗಣೇಶ ಮೂರ್ತಿಗಳ ತಯಾರಕೆ
ಗುಳೇದಗುಡ್ಡ:
ವಿಶೇಷ ವರದಿ: ಮಹಾಲಿಂಗೇಶ ಯಂಡಿಗೇರಿ
ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಎಲ್ಲೆಡೆ ಗಣೇಶನ ಮೂರ್ತಿಗಳ ತಯಾರಿಕೆ ಜೋರಾಗಿದೆ. ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ವಿಗ್ರಹ ನಿಷೇಧ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿಗಳ ಬೇಡಿಕೆ ಹೆಚ್ಚಿದೆ. ಪಟ್ಟಣದ ಸರಾಪ ಬಜಾರದ ಶಶಿಧರ ಶಾಹಾಪೂರ ಅವರ ಕುಟುಂಬ ತಲೆತಲಾಂತರದಿಂದ ಮಣ್ಣಿನ ಗಣಪತಿ ತಯಾರಿಸುತ್ತಿದ್ದಾರೆ.
ಈ ಶಹಪೂರ ಕುಟುಂಬದವರು ಪ್ರತಿವರ್ಷ ವಿಜಯದಶಮಿಯಂದು ಸಂಪ್ರದಾಯಕವಾಗಿ ಮಣ್ಣಿಗೆ ಪೂಜೆಸಲ್ಲಿಸಿ ಗಣೇಶ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ, ಬಳಿಕ ಶ್ರಾವಣಮಾಸದಿಂದ ಮೂರ್ತಿಗಳಿಗೆ ನೈಸರ್ಗಿಕ ಬಣ್ಣ ಲೇಪನಕ್ಕೆ ತೊಡಗುತ್ತಾರೆ. ಮೂರ್ತಿಗಳನ್ನು ತಯಾರಿಸುವುದೆ ಶಶಿಧರ ಅವರ ಮೂಲ ಉದ್ಯೋಗವಾಗಿದ್ದು, ಗಣೇಶ ಮೂರ್ತಿಗಳಲ್ಲದೇ ಇವರು ಮಣ್ಣತ್ತಿನ ಅಮವಾಸೆಯ ಪೂಜೆಗೆ ಬಸವಣ್ಣ, ಗುಳ್ಳವ್ವ, ಶ್ರಾವಣ ಮಾಸದಲ್ಲಿ ನಾಗಪ್ಪ, ಗೋಕಲಾಷ್ಟಮಿ ಪೂಜೆಗೆ ಕೃಷ್ಣ ಬಲರಾಮ, ಈಶ್ವರ, ಶಿವಲಿಂಗು, ಬಾಲ ಗಣಪ, ಹೀಗೇ ಭಕ್ತರ ಬೇಡಿಕೆಯ ಪ್ರಕಾರ ವಿವಿಧ ವಿಶೇಷ ಮೂರ್ತಿಗಳನ್ನು ತಯಾರಿಸಿಕೊಡುತ್ತಾರೆ. ಅಲ್ಲದೆ ಶಾಲಾಕಾಲೇಜುಗಳಲ್ಲಿ ಪ್ರದರ್ಶನಕ್ಕಾಗಿ ನೆಹರು, ಸುಭಾಷ್ ಚಂದ್ರಬೋಸ್, ರಾಮಾನುಚಾರ್ಯರು, ತಾಜ್‍ಮಹಲ್ ಹಿಗೇ ಅನೇಕ ಸಣ್ಣ ಪುಟ್ಟ ಮೂರ್ತಿಗಳನ್ನು ತಯಾರಿಸಿಕೊಟ್ಟಿದ್ದಾರೆ.
ಪ್ರಾಥಮಿಕ ಶಿಕ್ಷಣ ಕಲಿಕೆಯಲ್ಲಿ ಮೂರ್ತಿ ತಯಾರಿಸುವುದೆ ಗುರಿಯಾಗಿಸಿಕೊಂಡು ದಣಿವರೆಯದೆ ಇಲ್ಲಿಯವರಿಗೂ ಹಿರಿಯ ತಲೆಮಾರುಗಳಿಂದ ಬಂದ ಸಂಪ್ರದಾಯವನ್ನು ಇನ್ನು ಮುಂದುವರೆಸಿಕೊಂಡು ಮೂರ್ತಿ ತಯಾರಿಸುತ್ತಿದ್ದಾರೆ
ಶಶಿಧರ ಶಹಾಪೂರ ಅವರು ಗಣೇಶ ಮೂರ್ತಿ ತಯಾರಿಕೆಗೆ ಜೇಡಿ ಮಣ್ಣನ್ನು ಬಳಸುತ್ತಾರೆ. ಮೂರ್ತಿ ತಯಾರಿಕೆಗೆ ಹಾಗೂ ನೈಸರ್ಗಿಕ ಬಣ್ಣ ಲೇಪನ ಹಚ್ಚುವುದಕ್ಕೆ ಪತ್ನಿ ಹಾಗೂ ಮಗ ಮಗಳು ಸಾಥ ನೀಡುತ್ತಾರೆ. ವಿಭಿನ್ನ ರೂಪದ, ಅಳತೆಯ ಗಣಪತಿ ಮೂರ್ತಿಗಳನ್ನು ವಿವಿಧ ಅಲಂಕೃತ ಅವತಾರಗಳಲ್ಲಿ ಗಣೇಶನ ಮೂರ್ತಿ ತಯಾರಿಸುತ್ತಾರೆ. ಶಶಿಧರ ಅವರು ಬಿಡುವಿನ ಸಮಯದಲ್ಲಿ ದೇವರ ಸೇವೆಯ ಕಾರ್ಯದಲ್ಲಿ ತೊಡಗುತ್ತಾರೆ.
