ಮುಂಬೈ:
ಪಾರ್ಲೆ-ಜಿ ಬಿಸ್ಕತ್ತುಗಳ ತಯಾರಕ ಸಂಸ್ಥೆ ಪಾರ್ಲೆ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮೇಲೆ ಶುಕ್ರವಾರ ಆದಾಯ ತೆರಿಗೆ (ಐಟಿ) ಇಲಾಖೆಯು ದಾಳಿ ನಡೆಸಿದೆ. ಮುಂಬೈನಲ್ಲಿರುವ ವೈಲ್ ಪಾರ್ಲೆ ಕಚೇರಿ ಮೇಲೆ ದಾಳಿ ನಡೆದಿದೆ. ದಾಳಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ವರದಿಗಳ ಪ್ರಕಾರ, ಕೇಂದ್ರೀಯ ಸಂಸ್ಥೆಯ ಆರ್ಥಿಕ ವಿಭಾಗವು ಕಂಪನಿಯ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿದೆ. ವಿದೇಶಿ ಆಸ್ತಿ ಘಟಕ ಮತ್ತು ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ನೇತೃತ್ವದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈನ ಕಂಪನಿಯ ಹಲವಾರು ಸ್ಥಳಗಳಲ್ಲಿ ಆದಾಯ ತೆರಿಗೆ ದಾಳಿ ನಡೆಸಲಾಗುತ್ತಿದ್ದು, ಬೆಳಿಗ್ಗೆಯಿಂದ ದಾಳಿ ನಡೆಯುತ್ತಿದೆ. ಆದಾಯ ತೆರಿಗೆ ಇಲಾಖೆಯ ವಿದೇಶಿ ಆಸ್ತಿ ಘಟಕ ಮತ್ತು ಮುಂಬೈನ ಆದಾಯ ತೆರಿಗೆ ತನಿಖಾ ವಿಭಾಗವು ಶೋಧ ನಡೆಸುತ್ತಿದೆ. ಆದಾಗ್ಯೂ, ಈ ತನಿಖೆಯನ್ನು ಏಕೆ ನಡೆಸಲಾಗುತ್ತಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ದಾಳಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ತನಿಖೆಯ ಹಿಂದಿನ ಕಾರಣ ತಿಳಿಯಬಹುದು. ಪ್ರಸ್ತುತ ಐಟಿ ಇಲಾಖೆಯು ಕಂಪನಿಯ ದಾಖಲೆಗಳನ್ನು ಪರಿಶೀಲಿಸುವಲ್ಲಿ ನಿರತವಾಗಿದೆ.
2023-24ರ ಆರ್ಥಿಕ ವರ್ಷದಲ್ಲಿ ಕಂಪನಿಯ ಲಾಭ ದ್ವಿಗುಣಗೊಂಡಿದ್ದು, , 1,606.95 ಕೋಟಿ ರೂ.ಗಳಿಗೆ ತಲುಪಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಇದು 743.66 ಕೋಟಿ ರೂ.ಗಳಷ್ಟಿತ್ತು. 1929 ರಲ್ಲಿ ಪಾರ್ಲೆ ಕಚೇರಿಯನ್ನು ಪ್ರಾರಂಭಿಸಲಾಗಿತ್ತು. 1938 ರಲ್ಲಿ, ಕಂಪನಿಯು ಪಾರ್ಲೆ-ಗ್ಲುಕೊ ಎಂಬ ಬ್ರಾಂಡ್ ಹೆಸರಿನಲ್ಲಿ ಬಿಸ್ಕತ್ತುಗಳನ್ನು ಪರಿಚಯಿಸಿತು, ಇದು ಅಪಾರ ಜನಪ್ರಿಯತೆಯನ್ನು ಗಳಿಸಿತು. ಆದರೆ ಸ್ವಾತಂತ್ಯ ನಂತರ ಕೆಲ ಕಾಲ ಕಂಪನಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ನಂತರ ಪುನರಾರಂಭ ಮಾಡಲಾಯಿತು. ಪಾರ್ಲೆ ಬಿಸ್ಕತ್ತು ಈಗಲೂ ಅದೇ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ. ಪಾರ್ಲೆ ಗ್ರೂಪ್ ಪಾರ್ಲೆ ಜಿ, ಮೊನಾಕೊ ಮತ್ತು ಇತರ ಬ್ರಾಂಡ್ ಹೆಸರುಗಳೊಂದಿಗೆ ಬಿಸ್ಕತ್ತುಗಳನ್ನು ಮಾರಾಟ ಮಾಡುತ್ತಿದೆ.
