ಸಂಸತ್‌ ಭವನದ ಭದ್ರತೆಗೆ ಖಾಖಿ ಕೋಟೆ ರಚಿಸಿದ ಕೇಂದ್ರ…..!

ನವದೆಹಲಿ:

    ಜನವರಿ 31ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ವೀಕ್ಷಕರು ಮತ್ತು ಅವರ ಲಗೇಜುಗಳನ್ನು ಪರಿಶೀಲಿಸಲು 140 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಸಿಬ್ಬಂದಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ನಿಯೋಜಿಸಲಾಗಿದೆ. 

     ಕಳೆದ ಡಿಸೆಂಬರ್ 13ರ ಸಂಸತ್ ಭದ್ರತೆಯಲ್ಲಿನ ಲೋಪವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯವು ಕಳೆದ ತಿಂಗಳು ಭದ್ರತಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆಯನ್ನು ನಡೆಸಿತ್ತು. ನಂತರ ಸಿಐಎಸ್ಎಫ್ ಸಿಬ್ಬಂದಿಯ ನಿಯೋಜನೆಗೆ ಅನುಮೋದನೆ ನೀಡಿತ್ತು. 

     ಡಿಸೆಂಬರ್ 13ರಂದು ಕೆಲವರು ಲೋಕಸಭೆಯಲ್ಲಿ ಸ್ಮೋಕ್‌ ಕ್ಯಾನ್‌ ಬಳಸಿ ದಾಂದಲೆ ಎಬ್ಬಿಸಿದ್ದರು. ಇದೀಗ 140 ಸಿಐಎಸ್‌ಎಫ್ ಸಿಬ್ಬಂದಿ ಸಂಸತ್ ಭವನದ ಸಂಕೀರ್ಣದ ಭದ್ರತೆಯನ್ನು ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ವೀಕ್ಷಕರು ಮತ್ತು ಅವರ ಲಗೇಜುಗಳನ್ನು ಪರಿಶೀಲಿಸುತ್ತಾರೆ ಮತ್ತು ಕಟ್ಟಡದ ಭದ್ರತೆಯ ಜವಾಬ್ದಾರಿಯನ್ನು ಸಹ ಹೊಂದಿರುತ್ತಾರೆ.

      ಈ ತಂಡವು ಈಗಾಗಲೇ ಇರುವ ಇತರ ಭದ್ರತಾ ಏಜೆನ್ಸಿಗಳೊಂದಿಗೆ ಸಂಸತ್ತಿನ ಸಂಕೀರ್ಣದ ಪರಿಶೀಲನೆ ನಡೆಸುತ್ತಿದ್ದು, ಜನವರಿ 31ರಿಂದ ತನ್ನ ಜವಾಬ್ದಾರಿಯನ್ನು ಪೂರೈಸಲು ಸಿದ್ಧವಾಗಲಿದೆ ಎಂದು ಅವರು ಹೇಳಿದರು. ಹೊಸ ಮತ್ತು ಹಳೆಯ ಸಂಸತ್ ಭವನ ಸಂಕೀರ್ಣದ ಭದ್ರತೆಯ ಜವಾಬ್ದಾರಿಯನ್ನು ಸಿಐಎಸ್‌ಎಫ್‌ಗೆ ನೀಡಲಾಗಿದೆ. ವಿಮಾನ ನಿಲ್ದಾಣದಂತಹ ಭದ್ರತಾ ವ್ಯವಸ್ಥೆ ಇರುತ್ತದೆ. ವ್ಯಕ್ತಿ ಮತ್ತು ಸಾಮಾನು ಸರಂಜಾಮುಗಳನ್ನು ಎಕ್ಸ್-ರೇ ಯಂತ್ರ ಮತ್ತು ಲೋಹ ಶೋಧಕದಿಂದ ಪರೀಕ್ಷಿಸಲಾಗುತ್ತದೆ. ಬೂಟುಗಳು, ಭಾರವಾದ ಜಾಕೆಟ್‌ಗಳು ಮತ್ತು ಬೆಲ್ಟ್‌ಗಳನ್ನು ಟ್ರೇನಲ್ಲಿ ಇರಿಸಲು ಮತ್ತು ಎಕ್ಸ್-ರೇ ಯಂತ್ರದಿಂದ ಪರೀಕ್ಷಿಸಲು ಸಹ ನಿಯಮವಿದೆ.

     ಪಡೆಯ ಸಹಾಯಕ ಕಮಾಂಡೆಂಟ್ (ಎಸಿ) ಶ್ರೇಣಿಯ ಅಧಿಕಾರಿಯೊಬ್ಬರು ಈ ಸಿಐಎಸ್‌ಎಫ್ ತುಕಡಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ. ಅಗ್ನಿಶಾಮಕ ದಳದ 36 ಸಿಬ್ಬಂದಿಯೂ ಇರುತ್ತಾರೆ. CISF ಸುಮಾರು 1.70 ಲಕ್ಷ ಸಿಬ್ಬಂದಿಯನ್ನು ಹೊಂದಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿದೆ. ದೇಶದ 68 ನಾಗರಿಕ ವಿಮಾನ ನಿಲ್ದಾಣಗಳ ಹೊರತಾಗಿ, ಏರೋಸ್ಪೇಸ್ ಮತ್ತು ಪರಮಾಣು ಶಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳ ಭದ್ರತೆಯ ಜವಾಬ್ದಾರಿಯನ್ನು ಸಹ ಹೊಂದಿದೆ.

    ಸಂಸತ್ತಿನ ಸಂಕೀರ್ಣವು ಭಾರತದ ಅತ್ಯಂತ ಸೂಕ್ಷ್ಮ ಸ್ಥಳವಾಗಿದೆ. ಕ್ಯಾಮೆರಾಗಳು, ಸ್ಪೈ ಕ್ಯಾಮೆರಾಗಳು ಮತ್ತು ಸ್ಮಾರ್ಟ್‌ಫೋನ್‌ಗಳು ಕ್ಯಾಂಪಸ್ ಭದ್ರತೆಗೆ ನೇರ ಬೆದರಿಕೆಯಾಗಿದೆ. ಆದ್ದರಿಂದ ಆವರಣದೊಳಗೆ ಯಾವುದೇ ರೀತಿಯ ಛಾಯಾಗ್ರಹಣ-ವೀಡಿಯೋಗ್ರಫಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap