ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

ಬೆಂಗಳೂರು:

     ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಕೈದಿಗಳ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಜೈಲಲ್ಲೇ ರೌಡಿಗಳ ಹುಟ್ಟುಹಬ್ಬ ಆಚರಣೆ, ಗುಂಡು-ತುಂಡಿನ ಪಾರ್ಟಿಯ ಜೊತೆಗೆ ಉಗ್ರರ ಕೈನಲ್ಲೂ ಮೊಬೈಲ್​ ಇರುವ ಸಾಕಷ್ಟು ವಿಡಿಯೋಗಳು ಈಗಾಗಲೇ ಹೊರ ಬಂದಿವೆ. ಈ ನಡುವಲ್ಲೇ ಮತ್ತೊಂದು ಕರ್ಮಕಾಂಡದ ವಿಡಿಯೋ ವೈರಲ್ ಆಗಿದೆ.

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮದ್ಯ ತಯಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆ್ಯಪಲ್, ದ್ರಾಕ್ಷಿಮತ್ತು ಪೈನ್ ಆ್ಯಪಲ್‌ಗಳನ್ನು ಬಳಸಿ ಜೈಲಿನಲ್ಲಿ ಕೈದಿಗಳು ವೈನ್ ತಯಾರಿಸಿದ್ದಾರೆ ಎನ್ನಲಾದ ವಿಡಿಯೋ ಜಾಲತಾಣದಲ್ಲಿ ಹರಿಬಿಡಲಾಗಿದೆ.

    ಇದನ್ನು ಜೆಡಿಎಸ್ ಪೋಸ್ಟ್ ಮಾಡಿದ್ದು, ‘ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದ್ಯದ ಫ್ಯಾಕ್ಟರಿ ಮಾಡಿಕೊಟ್ಟ ಕಾಂಗ್ರೆಸ್ ಸರ್ಕಾರ’ ಎಂದು ಬರಹ ಬರೆದು, ವಿಡಿಯೋವನ್ನು ಹಂಚಿಕೊಂಡಿದೆ. ಒಟ್ಟು 33 ಸೆಕೆಂಡಿನ ವಿಡಿಯೋ ಅದಾಗಿದ್ದು, ಅದರಲ್ಲಿ ಮೂವರು ಕೈದಿಗಳು ಮತ್ತು 4 ಮದ್ಯದ ಬಾಟಲಿಗಳು ಕಾಣಿಸಿಕೊಂಡಿವೆ.

    ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬನಿಗೆ ಇಬ್ಬರು ಕೈದಿಗಳು ಹಣ ನೀಡಿ ಮದ್ಯದ ಬಾಟಲ್ ಪಡೆದು ಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.ಜೊತೆಗೆ ಒಂದು ತಟ್ಟೆಯಲ್ಲಿ ಮದ್ಯವಿರುವ ಗ್ಲಾಸ್, ಆ್ಯಪಲ್ ಬಾಳೇಹಣ್ಣು ಇರುವ ಸಲಾಡ್ ಮತ್ತು ಕಡ್ಲೆಬೀಜ ಇಟ್ಟುಕೊಂಡು ಪಾರ್ಟಿ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

Recent Articles

spot_img

Related Stories

Share via
Copy link