ಅತ್ತಿಗೆ ಮೈದುನನ ಲವ್ವಿ-ಡವ್ವಿಗೆ ಪತಿ ಬಲಿ…!

ಭೋಪಾಲ್:

    ತನ್ನ ಅತ್ತಿಗೆಯನ್ನು ಲವ್‌ ಮಾಡ್ತಿದ್ದ ಕಿರಾತಕನೋರ್ವ ತನ್ನ ಹುಚ್ಚಾಟಕ್ಕೆ ಆಕೆಯ ಪತಿಯನ್ನೂ ಹತ್ಯೆ ಮಾಡಿದ್ದ ಘಟನೆಯೊಂದು ಮಧ್ಯಪ್ರದೇಶದ  ಭೂಪಾಲ್ ನಲ್ಲಿ ನಡೆದಿದೆ. ಆರೋಪಿಯನ್ನು ನವರತ್ನಾ ಗುಪ್ತ ಎನ್ನ ಲಾಗಿದ್ದು ಅತ್ತಿಗೆಯನ್ನು ಪ್ರೀತಿಸಲು ಆಕೆಯ ಪತಿ ಅಡ್ಡಿ ಆಗುತ್ತಾನೆ ಎನ್ನುವ ಕಾರಣಕ್ಕೆ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಬಳಿಕ ಅಲ್ಲಿಂದ ತಲೆ ಮರೆಸಿಕೊಂಡು ಮುಂಬೈಗೆ ಪರಾರಿಯಾಗಿದ್ದಾನೆ. ಸದ್ಯ ಕೊಲೆ ಮಾಡಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದು‌ ಈ ಆಘಾತಕಾರಿ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಇನ್ನು ಪೊಲೀಸ್‌ ವಿಚಾರಣೆ ವೇಳೆ ಆತ ಬಹಿರಂಗ ಪಡಿಸಿದ ಹಲವು ವಿಚಾರಗಳು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 

   ಭೋಪಾಲ್ ಮೂಲದ ನವರತ್ನ ಗುಪ್ತ ಎಂಬಾತ ಸೋದರ ಸಂಬಂಧದಲ್ಲಿ ಅತ್ತಿಗೆಯಾಗಬೇಕಿದ್ದ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ತನ್ನ ಪ್ರೀತಿಗೆ ಆಕೆಯ ಪತಿ ಅಡ್ಡಿಯಾಗಿದ್ದಾನೆ ಎಂಬ ಕೋಪ ಆತನಿಗಿತ್ತು. ಹಾಗಾಗಿ ಮಹಿಳೆಯ ಪತಿ ಸೋನು ಗುಪ್ತನನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಇದಕ್ಕಾಗಿ ಆತ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾನೆ. ಕ್ರೈಂ ಪೆಟ್ರೋಲ್ ಮತ್ತು ಭೋಕಲ್ ಟಿವಿ ವೆಬ್‌ ಸಿರೀಸ್‌ ವೀಕ್ಷಿಸಿ ಅದರಂತೆ ಕೊಲೆ ಮಾಡಲು ಸಂಚು ಮಾಡಿದ್ದಾನೆ. ಕೊಲೆ ಮಾಡಿದ್ದ ಬಳಿಕ ತಪ್ಪಿಸಿಕೊಳ್ಳಲು ಅನೇಕ ಮಾರ್ಗ ಕಂಡುಕೊಂಡು ತನಿಖೆಯ ಹಾದಿ ತಪ್ಪಿಸಿದ್ದಾನೆ. 

   ನವರತ್ನ ಗುಪ್ತ ಸೋನು ಗುಪ್ತನನ್ನು ಕೊಲೆ ಮಾಡುವ ಉದ್ದೇಶದಿಂದ ಮುಂಬೈನಿಂದ ಮಧ್ಯ ಪ್ರದೇಶಕ್ಕೆ ಬಂದಿದ್ದಾನೆ. ತನ್ನ ಫೋನ್ ಸ್ವಿಚ್ ಆಫ್ ಮಾಡಿ ಬೇರೊಬ್ಬ ವ್ಯಕ್ತಿಯ ಸಹಾಯದಿಂದ ಸೋನು ಗುಪ್ತಗೆ ಕರೆ ಮಾಡಿ ತಾನು ಮುಂಬೈನಿಂದ ಬಂದಿದ್ದು ತನ್ನನ್ನು ಕರೆ ದುಕೊಂಡು ಹೋಗುವಂತೆ ತಿಳಿಸಿದ್ದಾನೆ. ಸೋನು ಕೂಡ ಈತನನ್ನು ಭೇಟಿಯಾಗಲು ಹೋಗಿ ಕೊಲೆ ಕೃತ್ಯಕ್ಕೆ ಬಲಿಪಶುವಾಗಿದ್ದಾನೆ.

   ಕೊಲೆಯಾದ ಬಳಿಕ ಕಾಲೇಜೊಂದರ ಬಳಿ ಮೃತದೇಹ ಇರಿಸಿದ್ದು ತನಿಖೆಯ ಹಾದಿ ತಪ್ಪಿಸಲು ಬಳೆ , ಮೇಕಪ್ ಇತರ ಸಾಮಗ್ರಿ ಖರೀದಿ ಮಾಡಿ ಅವೆಲ್ಲವನ್ನು ಮೃತ ದೇಹದ ಸುತ್ತ ಹರಡಿದ್ದಾನೆ. ಈ ಮೂಲಕ ಸೋನು ಗುಪ್ತ ಬೇರೆ ಯಾವುದೋ ಕಾರಣಕ್ಕೆ ಕೊಲೆಯಾಗಿದ್ದಾನೆ ಎಂದು ಪೊಲೀಸರ ಗಮನ ಹರಿಸಲು ಈ ತಂತ್ರ ಹಣೆದಿದ್ದು ಬಳಿಕ ಅಲ್ಲಿಂದ ಪರಾರಿಯಾಗಿ ಮುಂಬೈಗೆ ತೆರಳಿದ್ದಾನೆ. 

   ಈ ಘಟನೆ ಬಳಿಕ ಪೊಲೀಸರು ಘಟನಾ ಸ್ಥಳದ ಸಿಸಿಟಿವಿ ಮತ್ತು ಇತರ ಕಾಲ್ ರೆಕಾರ್ಡ್ ಆಧರಿಸಿ ತನಿಖೆಯನ್ನು ಯಶಸ್ವಿಯಾಗಿ ಭೇದಿಸಿದ್ದಾರೆ‌‌. ಈ ಮೂಲಕ ಆತನನ್ನು ತಕ್ಷಣ ಅರೆಸ್ಟ್‌ ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Recent Articles

spot_img

Related Stories

Share via
Copy link