ಪತಿಯ ಚಿತ್ರಹಿಂಸೆಗೆ ಬೇಸತ್ತು 3ನೇ ಮಹಡಿಯಿಂದ ಜಿಗಿದ ಮಹಿಳೆ

ಬೆಂಗಳೂರು:

    ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ  ನಡೆದಿದೆ. ಪತಿಯ ಹಿಂಸೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ಆಕೆಯ ಬೆನ್ನುಮೂಳೆ ಹಾಗೂ ಎರಡು ಕಾಲುಗಳಿಗೆ ಗಂಭೀರವಾಗಿ ಗಾಯಗಳಾಗಿವೆ.

    ಮಹಿಳೆ ಸದ್ಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಪ್ರಿಯಾ ಹಾಗೂ ನಿಕ್ಸನ್ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ 7 ವರ್ಷ ಆದರೂ ಮಕ್ಕಳಾಗಿಲ್ಲ ಎಂದು ಪ್ರತಿ ನಿತ್ಯ ಪತ್ನಿಗೆ ನಿಕ್ಸನ್‌ ಕಿರುಕುಳ ನೀಡುತಿದ್ದ. ಹೀಗಾಗಿ ಸೂಕ್ತ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ದಂಪತಿಗೆ ಹೆಣ್ಣು ಮಗು ಅಗಿತ್ತು.

   ಮಗುವಾದ ಬಳಿಕ ಸಹ ಪ್ರತಿ ದಿನ ಕುಡಿದು ಬಂದು ಎಲ್ಲಿಯಾದರೂ ಹೋಗಿ ಸಾಯಿ ಎಂದು ಪತ್ನಿ ಮೇಲೆ ಹಲ್ಲೆ ಮಾಡುತ್ತಿದ್ದ. ಇದಕ್ಕೆ ಬೇಸತ್ತು ತಾನು ವಾಸವಿದ್ದ ಮನೆಯ ಮೂರನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪತಿಯ ವಿರುದ್ಧ ಬಾಣವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

   ಪತ್ನಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟ ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹರಿಕಿಶನ್ ಎಂಬಾತ ಪತ್ನಿ ಪುಲಾ ದೇವಿಯನ್ನು ಕೊಂದು ಹಾಸಿಗೆಯ ಕೆಳಗೆ ಗುಂಡಿ ತೋಡಿ ಹೂತಿಟ್ಟಿದ್ದ. ಸುಮಾರು 12 ದಿನಗಳ ಕಾಲ ಅದೇ ಹಾಸಿಗೆಯ ಮೇಲೆ ಮಲಗಿದ್ದನು. ಪುಲಾ ದೇವಿ ಸಹೋದರ ನಾಪತ್ತೆ ದೂರುದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಅನೈತಿಕ ಸಂಬಂಧದ ಆರೋಪದಲ್ಲಿ ಹರಿ ಕಿಶನ್ ತನ್ನ ಪತ್ನಿಯನ್ನು ಕೊಂದು ಹಾಕಿದ್ದಾನೆ. ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹರಿಕಿಶನ್ ಮನೆಗೆ ಮರಳಿದ ಬಳಿಕ ಅಕ್ಟೋಬರ್ 6 ರಿಂದ ಆತನ ಪತ್ನಿ ನಾಪತ್ತೆಯಾಗಿದ್ದಳು. ಈ ಕುರಿತು ಅಕ್ಟೋಬರ್ 13ರಂದು ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದನು. ಪ್ರಕರಣಕ್ಕೆ ಸಂಬಂಧಿಸಿ ಹರಿಕಿಶನ್ ನನ್ನು ಬಂಧಿಸಲಾಗಿದೆ.

Recent Articles

spot_img

Related Stories

Share via
Copy link