ವಿದ್ಯಾರ್ಥಿಗಳಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್ ಶುಭಕೋರಿದರು

ನಾಯಕನಹಟ್ಟಿ :

     10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್ ಶುಭ ಕೋರಿದರು.

     ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು ಯಾವುದೇ ರೀತಿಯ ಆತಂಕ ಕ್ಕೆ ಹಾಗೂ ಗೊಂದಲಕ್ಕೆ ಒಳಗಾಗದೆ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮತ್ತು ಸಮಾಧಾನದಿಂದ ಪರೀಕ್ಷೆ ಬರೆಯಿರಿ ಎಂದರು.

     ಉತ್ತಮ ಅಂಕಗಳ ಜೊತೆಗೆ ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಶುಭ ಹಾರೈಸುತ್ತೇನೆ ಎಂದರು.

     ಹತ್ತನೇ ತರಗತಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಪರೀಕ್ಷೆ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಮಾತು ಹೇಳಿದರು.

     ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಪಟ್ಟಣಕ್ಕೆ ನಿಮ್ಮ ಪೋಷಕರಿಗೆ ನಿಮ್ಮ ಸಂಬಂಧಿಕರಿಗೆಒಳ್ಳೆ ಹೆಸರು ತರಬೇಕೆಂದು ಆಶೀಸಿದರು.ಈಸಂದರ್ಭದಲ್ಲಿ ಉಪಸ್ಥಿತರಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಒಂಬತ್ತನೇ ವಾರ್ಡಿನ ಪಟ್ಟಣ ಪಂಚಾಯತಿ ಸದಸ್ಯ ಜೆ.ಆರ್. ರವಿಕುಮಾರ್. ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಸರ್ವ ಮಂಗಳ ಉಮಾಪತಿ . ಮಾಜಿ ಗ್ರಾಮ ಪಂಚಾಯತಿ ಸದಸ್ಯ ಆರ್ ಶ್ರೀಕಾಂತ್ ಶುಭಕೋರಿದ್ದಾರೆ