ಪಾವಗಡ :
ಪುರಸಭಾ ಅನುದಾನದಲ್ಲಿ 6 ಸಾವಿರ ಕ್ಯಾಲೆಂಡರ್ ವಿತರಿಸಲಾಗುತ್ತಿದ್ದು ಪುರಸಭೆಯ ಎಲ್ಲಾ ಮಾಹಿತಿಗಳು ದಿನ ದರ್ಶಿಕೆಯಿಂದ ಪಟ್ಟಣದವಾಸಿಗಳಿಗೆ ಸುಲಭವಾಗಿ ಹಲವು ಮಾಹಿತಿಗಳು ಲಭ್ಯವಾಗಲು ಸಹಕಾರಿಯಾಗಲಿದೆ ಎಂದು ಶಾಸಕರಾದ ವೆಂಕಟರಮಣಪ್ಪ ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ಶುಕ್ರವಾರ 2021ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು ದಿನ ದರ್ಶಿಕೆಯಲ್ಲಿ ಪುರಸಭೆಯ ವತಿಯಿಂದ ಕೈಗೊಂಡಿರುವ ಸ್ವಚ್ಚತೆ, ನೈಮಲ್ಯ ಕಾಪಾಡುವ ಬಗ್ಗೆ ಹಾಗೂ ಹಸಿ ಮತ್ತು ಒಣಕಸ ವಿಗಂಡನೆಯ ಬಗ್ಗೆ ಕೂಡ ಮಾಹಿತಿ ಲಭ್ಯವಿದೆ, ರಸ್ತೆಗಳ ಸ್ವಚ್ಚತೆ, ನೀರಿನ ಬಳಕೆ ಮತ್ತು ಸಂರಕ್ಷಣೆಗೆ ದಿನದರ್ಶಿಕೆಯಲ್ಲಿ ಅಧ್ಯತೆ ನೀಡಿದ್ದು ಈ ಅಂಶಗಳನ್ನು ಪಟ್ಟಣದ ನಿವಾಸಿಗಳು ತಿಳಿದು ಪುರಸಭೆಗೆ ಸಹಕರಿಸಬೇಕೆಂದರು.
ಪಟ್ಟಣದ ಅಗಸರ ಕುಂಟೆ ಕೆರೆಗೆ ನಾಗಲಮಡಿಕೆ ಡ್ಯಾಂನಿಂದ ನೀರು ಪೂರೈಕೆ ಮಾಡಲಾಗುತ್ತಿದ್ದು ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವುದೆಂದರು.
ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ ಮಾತನಾಡಿ ಪುರಸಭೆಯ ಇಸಿ ಅನುದಾನದಲ್ಲಿ ಪಟ್ಟಣದ ನಿವಾಸಿಗಳಿಗೆ ವಿತರಣೆ ಮಾಡುವ ಸಲುವಾಗಿ 6 ಸಾವಿರ ಕ್ಯಾಲೆಂಡರ್‍ಗಳನ್ನು ವಾರ್ಡ್ ಸದಸ್ಯರ ಮೂಲಕ ವಿತರಣೆ ಮಾಡಲಾಗುತ್ತದೆ. ಪುರಸಭೆಯ ವತಿಯಂದ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಕ್ಯಾಲೆಂಡರ್‍ನಲ್ಲಿ ಮುದ್ರಿಸಲಾಗಿದ್ದು ಪಟ್ಟಣದ ನಿವಾಸಿಗಳಿಗೆ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ರಾಮಾಂಜಿನಪ್ಪ ಸದಸ್ಯರಾದ ಸುದೇಶ್ ಬಾಬು, ರವಿ, ವೇಲು, ನಾಗಭೂಷಣ ರೆಡ್ಡಿ, ವೆಂಕಟರವಣ ಹಾಗೂ ಮುಖಂಡರಾದ ಗುಟ್ಟೆಹಳ್ಳಿ ಅಂಜಿನಪ್ಪ, ರಿಜ್ವಾನ್, ಎಂ.ಎಸ್.ವಿಶ್ವನಾಥ್, ಅವಿನಾಶ್, ಹನುಮಂತರಾಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ