ಪಾವಗಡ :
ಚಳಿ, ಮಳೆ, ಗಾಳಿ ಎನ್ನದೆ ನಗರ ಪ್ರದೇಶಗಳಲ್ಲಿ ಪತ್ರಿಕೆ ಹಂಚುವ ಹುಡುಗರು ನಿಜವಾಗಿಯೂ ಜ್ಞಾನದ ಬುತ್ತಿಯನ್ನು ಎಲ್ಲರಿಗೂ ಪಸರಿಸುವವರು ಎಂದು ಸ್ವಾಮಿ ಜಪಾನಂದಜಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಪಟ್ಟಣದ ಪತಂಜಲಿ ನಗರದಲ್ಲಿರುವ ಶ್ರೀರಾಮಕೃಷ್ಣ ಸೇವಾಶ್ರಮದಲ್ಲಿ ಪಟ್ಟಣದಲ್ಲಿ ದಿನಪತ್ರಿಗಳನ್ನು ಹಂಚುವ ಹುಡುಗರಿಗೆ ಇನ್ಫೋಸಿಸ್ ಪ್ರಾಯೋಜಕತ್ವದಲ್ಲಿ ಶ್ರೀರಕ್ಷಾ ಯೋಜನೆಯಲ್ಲಿ ಜಾರಿಯಾಗಿರುವ ವುಲ್ಲನ್ ರಗ್ಗುಗಳನ್ನು ವಿತರಿಸಿ ಮಾತನಾಡಿದರು. ಬೆಂಗಳೂರು ನಗರದಲ್ಲಿ ಫುಟ್‍ಪಾತ್‍ಗಳಲ್ಲಿ ಮತ್ತು ಮಾರುಕಟ್ಟೆ ಆವರಣದಲ್ಲಿ ಮಲಗಿರುವ ಅನಾಥರು, ಭಿಕ್ಷುಕರಿಗಾಗಿ ಶ್ರೀಮತಿ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿಯವರ ಆಶಯದಂತೆ, ಶ್ರೀ ರಕ್ಷಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. 5 ಸಾವಿರ ನಿರಾಶ್ರ್ರಿತರಿಗಾಗಿ ರಗ್ಗು ವಿತರಿಸುವ ಗುರಿಹೊಂದಿದ್ದು, ಈಗಾಗಲೆ 2 ರಗ್ಗುಗಳನ್ನು ವಿತರಿಸಿದ್ದೇವೆ ಎಂದು ತಿಳಿಸಿದರು.
ದೇಶದ ಆಗು-ಹೋಗುಗಗಳ ಬಗ್ಗೆ ದುದ್ದಿಯನ್ನು ದಿನ ನಿತ್ಯ ಹಾಗೂ ವರ್ಷವಿಡೀ ಎಂತಹ ಕಠಿಣ ಸಂದರ್ಭದಲ್ಲೂ ಎದೆಗುಂದದೆ ಪ್ರತಿ ಮನೆ ಬಾಗಿಲಿಗೆ ತಲುಪಿಸುವ ಕಾಯಕ ಮಾಡುವ ಪತ್ರಿಕಾ ಹುಡುಗರು ನಿಜವಾದ ಸಾಮಾಜಿಕ ಕಳಕಳಿಯ ಸೈನಿಕರಿದ್ದಂತೆ ಎಂದು ಕೊಂಡಾಡಿದರು. ವಿಜಯವಾಣಿ ಸೇರಿದಂತೆ ವಿವಿಧ ಪತ್ರಿಕೆ ಹಂಚುವ 100 ಕ್ಕೂ ಅಧಿಕ ಹುಡುಗರಿಗೆ ವುಲ್ಲನ್ ರಗ್ಗುಗಳನ್ನು ವಿತರಿಸಿದರು. ಈ ವೇಳೆ ಆಶ್ರಮದ ಭರತ್, ಶ್ರೀನಿವಾಸ್, ಪ್ರಕಾಶ್‍ನಾಯಕ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ