ಪಾವಗಡ :
ತಾಲೂಕಿನ ಸಾವಿರಾರು ರೈತರಿಗೆ ಬೆಳೆ ವಿಮೆ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ತಕ್ಷಣವೇ ರೈತರಿಗೆ ಪರಿಹಾರ ವಿತರಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ರಾಷ್ಠ್ರೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ತಿಳಿಸಿದರು.
ಸೋಮವಾರ ಪಟ್ಟಣದ ತಹಸೀಲ್ದರ್ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿ ಮಾತನಾಡಿು ತಾಲೂಕಿನ ಟೊಮೇಟೊ, ಈರುಳ್ಳಿ, ಬಾಳೆ, ಪಪ್ಪಾಯಿ, ಬೆಳೆದಿರುವ ರೈತರ ಮಾಹಿತಿ ಜಿಲ್ಲಾಧಿಕಾರಿಗಳ ಬಳಿ ಇದೆ, ಸಕಾಲದಲ್ಲಿ ರೈತರು ಬೆಳೆ ಪಾವತಿಸಿದರೂ ಇಂದಿಗೂ ಪರಿಹಾರ ವಿತರಣೆ ಹಾಗಿಲ್ಲ, ಕೊವಿಡ್ ಸಂಕಷ್ಠ ಸಮಯದಲ್ಲಿ ಸಂಕಷ್ಠಕ್ಕೆ ಸಿಲುಕಿದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಇಂದಿಗೂ ರೈತರಿಗೆ ಇಲಾಖೆಗಳು ವಿತರಣೆ ಮಾಡದಿರುವುದು ದುರಂತವಾಗಿದೆ ಎಂದರು.
ರಾಷ್ಠ್ರೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ವಿ.ನಾಗಭೂಷಣ ರೆಡ್ಡಿ ಮಾತನಾಡಿ ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಇಂದಿಗೂ ಭ್ರಷ್ಠಚಾರ ಜೀವಂತವಾಗಿದ್ದು ರೈತರ ಕೇಲಸಗಳನ್ನು ಮಾಡಿಕೊಡಲು ಹಣವಿಲ್ಲದೆ ಮಾಡುವಂತಿಲ್ಲ ಎಂಬಂತಾಗಿದ್ದು, ಗ್ರಾಮೀಣ ಪ್ರದೇಶದ ರೈತರು ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೇ ಪ್ರತಿ ದಿನ ಪಟ್ಟಣಕ್ಕೆ ಅಲೆಯುವಂತಾಗಿದೆ ಎಂದರು. ಹಲವು ಇಲಾಖೆಗಳ ಭ್ರಷ್ಟಾಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ತಪ್ಪಿತಸ್ಥರಿಗೆ ತಕ್ಕ ಪಾಠ ಕಲಿಸುವುದೇ ನಮ್ಮ ಗುರಿ ಎಂದರು.
ರಾಜ್ಯ ಮಹಿಳಾ ಘಟಕದ ಸಂಚಾಲಕರಾದ ಚಂದ್ರಕಲಾರವಿ ಮಾತನಾಡಿ ಕೃಷಿ ಇಲಾಖೆ, ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ಅಗತ್ಯ ಮಾರ್ಗದರ್ಶನ, ಸರ್ಕಾರಿ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿ ವರ್ಗವೇ ನಿರ್ಲಕ್ಷ ತೋರುತ್ತಿದ್ದು ಇದರ ವಿರುದ್ಧ ಉಗ್ರಹೊರಾಟ ನಡೆಸುವ ಅನಿವಾರ್ಯತೆ ತಾಲೂಕಿನಲ್ಲಿ ಎದುರಾಗಿದ್ದು ಸಂಬಂದಪಟ್ಟವರು ಗಮನಹರಸಿ ರೈತರ ರಕ್ಷಣಿಗೆ ನಿಲ್ಲಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ತೋಟಗಾರಿಕೆ, ಅರಣ್ಯ, ಹಾಗೂ ಕೃಷಿ ಇಲಾಖೆಯಲ್ಲಿನ ಸೌಲಭ್ಯಗಳು ಹಾಗೂ ರೈತರಿಗೆ ಬೆಳೆ ವಿಮೇ ಶೀಘ್ರಕಲ್ಪಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತ್ತು.
ರೈತರ ಮನವಿಯನ್ನು ಉಪ ತಹಶೀಲ್ದರ್ ಜಿ.ಆರ್.ಚಂದ್ರಶೇಖರ್ ಸ್ವೀಕರಿಸಿ ತಹಶೀಲ್ದರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
