ಪಾವಗಡ : ಬೀದಿಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ

 ಪಾವಗಡ : 

     ಸ್ವಾಮಿ ವಿವೇಕಾನಂದರ 159ನೆ ಜನ್ಮದಿನೋತ್ಸವದಂದು ಪಟ್ಟಣದ ಪ್ರಸಿದ್ಧ ಶ್ರೀ ಶನಿಮಹಾತ್ಮ ದೇವಸ್ಥಾನದ ಮುಂಭಾಗದಲ್ಲಿ ಬಿಸಿಲಿನ ಬೇಗೆಯಲ್ಲೂ ತಮ್ಮ ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ಮಾಡುತ್ತಿರುವ ಬಡ ವ್ಯಾಪಾರಿಗಳಿಗೆ ಫೆ. 4 ರ ಗುರುವಾರ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಶ್ರೀರಾಮಕೃಷ್ಣಾಶ್ರಮದಿಂದ ಗಟ್ಟಿಮುಟ್ಟಾದ ಛತ್ರಿಗಳನ್ನು ನೀಡಲಾಯಿತು.

      ಸುಮಾರು ಹದಿನೈದು ಜನರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಭಯಂಕರ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಈ ವ್ಯವಸ್ಥೆಯನ್ನು ಮಾಡಲಾಗಿದೆ.

      ಛತ್ರಿಗಳನ್ನು ಎಂ.ಆರ್.ಗೌತಮ್, ಪೊಲೀಸ್ ಉಪ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಹಾಗೂ ಎ.ನಂಜುಂಡೇಶ್ವರ, ನಿವೃತ್ತ ಸೈನ್ಯಾಧಿಕಾರಿಗಳು ನೀಡಿದರು. ಆಪಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಈ ವಿತರಣಾ ಕಾರ್ಯವು ಸದರಿ ಬೀದಿ ವ್ಯಾಪಾರಿಗಳ ಮುಖದಲ್ಲಿ ಮಂದಹಾಸವನ್ನು ತಂದಿತು ಎಂದು ಪ್ರತ್ಯೇಕ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಜಪಾನಂದಜಿರವರ ಪ್ರಕಾರ ಸ್ವಾಮಿ ವಿವೇಕಾನಂದರ ಅತ್ಯಮೂಲ್ಯವಾದ ಸಂದೇಶ “ಜೀವನಲ್ಲಿ ಶಿವನನ್ನು ಕಂಡು ಸೇವೆ ಸಲ್ಲಿಸುವುದು”. ಅದರ ಅನುಷ್ಠಾನ ರೂಪವೆ ಇದು ಎಂದು ಸೇವೆಯನ್ನು ಸಲ್ಲಿಸಿದ ಸಂತೃಪ್ತಿ ಸ್ವಾಮೀಜಿಯವರಲ್ಲಿ ಕಂಡು ಬಂದಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap