ಪಾವಗಡ :
ಹನ್ನೊಂದು ವರ್ಷದ ಅಚ್ಯುತಾನಂದನಿಗೆ ಕಣ್ಣಿನ ದೋಷ ವಿಪರೀತವಾಗಿ ತತ್‍ಕ್ಷಣ ಅವನಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮಾಡಿಸಬೇಕಾಗಿ ಬಂದಿತು. ಈ ನಿಟ್ಟಿನಲ್ಲಿ ಬಾಲಕನ ತಾಯಿ-ತಂದೆ ಅವನನ್ನು ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆತಂದರು.
ತಜ್ಞರು ಎಲ್ಲ ರೀತಿಯ ತಪಾಸಣೆಗಳನ್ನು ನಡೆಸಿದ ನಂತರ, ಈತನ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಶಸ್ತ್ರಚಿಕಿತ್ಸೆ ಮಾಡಲು ಸ್ವಾಮಿ ಜಪಾನಂದಜೀರವರು ನಾಡಿನ ಹೆಸರಾಂತ ನೇತ್ರ ಸಂಸ್ಥೆಯಾದ ಮಿಂಟೋ ಕಣ್ಣಾಸ್ಪತ್ರೆಯ ಸಹಕಾರದೊಂದಿಗೆ ಎಲ್ಲ ವ್ಯವಸ್ಥೆ ಮಾಡಿದರು.
ಡಾ.ಸುಬ್ರಹ್ಮಣ್ಯ, ತಜ್ಞರು ಅವರ ಸಹಕಾರದಿಂದ ಇದೀಗ ತಾನೆ ಬಾಲಕನು ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಮುಗಿಸಿಕೊಂಡು ಬಂದಿದ್ದಾನೆ. ಇದೀಗ ಬಾಲಕನ ತಂದೆ ಯೋಗಾನಂದ ಹಾಗೂ ತಾಯಿ ಸುಮಿತ್ರಾರವರ ಸಂತೋಷಕ್ಕೆ ಬೆಲೆ ಕಟ್ಟಲಾಗುತ್ತಿಲ್ಲ. ಇದೇ ತೆರನಾದ ಶಸ್ತ್ರ ಚಿಕಿತ್ಸೆಯನ್ನು ಈಗಾಗಲೇ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆಯ ಮೂಲಕ 146 ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ಮಾಡಲಾಗಿದೆ. ಸ್ವಾಮಿ ವಿವೇಕಾನಂದರ ಕೃಪಾಶೀರ್ವಾದದಿಂದ ಮುಂದೆಯೂ ಇದೇ ತೆರನಾದ ಸೇವಾ ಕಾರ್ಯಗಳು ಮುಂದುವರೆಯುತ್ತವೆ ಎಂದು ಜಪಾನಂದಜಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ