ಪಾವಗಡ : ಹಳೆ ದ್ವೇಷದಿಂದ ಗುಡಿಸಲು ಮನೆ ಧ್ವಂಸ!!

 ಪಾವಗಡ :

      ಸುಮಾರು 50 ವರ್ಷಗಳಿಂದ ವಾಸವಿದ್ದ ಗುಡಿಸಲು ಮನೆಯನ್ನು ಹಳೆ ವೈಷಮ್ಯದಿಂದ ರಾತ್ರೋ ರಾತ್ರಿ ಪುಂಡರು ಕೆಡವಿದ್ದಾರೆ. ಈ ಕುರಿತು ಪಟ್ಟಣದ ಪೋಲಿಸ್ ಠಾಣೆಗೆ ದೂರು ನೀಡಿ, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ ಘಟನೆ ಆಲದಮರ ಹಟ್ಟಿ ಗ್ರಾಮದಲ್ಲಿ ನಡೆದಿದೆ.

      ತಾಲ್ಲೂಕಿನ ಆಲದಮರ ಹಟ್ಟಿ ಗ್ರಾಮದಲ್ಲಿ ದೇವಾಲಯದ ವಿಷಯಕ್ಕೆ ಎರಡು ಗುಂಪುಗಳ ನಡುವೆ ವೈಷಮ್ಯ ಬೆಳೆದಿದ್ದು, ನಿರ್ಗತಿಕರು ವಾಸವಿದ್ದ ಮನೆ ತಮಗೆ ಸೇರಿದ್ದು ಎಂದು ಭಾನುವಾರ ರಾತ್ರಿ ಗುಡಿಸಲು ಮನೆಯನ್ನು ಧ್ವಂಸ ಮಾಡಲಾಗಿದೆ. ದವಸ ಧಾನ್ಯಗಳು, ಪಾತ್ರೆಗಳನ್ನು ಕೂಡ ಹೊರಗಡೆ ಹಾಕಿದ ಪರಿಣಾಮ ನಿವಾಸಿಗಳು ಗುಡಿಸಲು ಮನೆ ಧ್ವ್ವಂಸದಿಂದ ದೌರ್ಜನ್ಯಕ್ಕೆ ಒಳಗಾದ ಕುಟುಂಬ ಕಣ್ಣಿರು ಹಾಕುವಂತಾಗಿದೆ.

      ಗುಡಿಸಲಿನಲ್ಲಿ ಹಲವು ವರ್ಷಗಳಿಂದ ವಾಸವಿದ್ದ ಕರಿಯಣ್ಣ ಮಾತನಾಡಿ, ಗುಡಿಸಲು ಮನೆ ಜಾಗಕ್ಕೆ ಗ್ರಾಪಂನಲ್ಲೂ ಖಾತೆ ಮಾಡಲಾಗಿದೆ. ಈ ಬಗ್ಗೆ ಪಾವಗಡ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಹಲವು ವರ್ಷಗಳಿಂದ ಇದೇ ಗುಡಿಸಿಲಿನಲ್ಲಿ ವಾಸವಿರುವುದನ್ನು ಕಂಡಿರುವ ನಮ್ಮೂರಿವರೆ ಬೇಕೆಂದು ರಾತ್ರಿ ವೇಳೆ ನಮ್ಮ ಗುಡಿಸಲು ಮನೆಯನ್ನು ಧ್ವ್ವಂಸ ಮಾಡಿದ್ದು, ಈ ಕೃತ್ಯಕ್ಕೆ ಭಾಗಿಯಾದವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap