ಪಾವಗಡ : ಕರ್ಫ್ಯೂ ನಿಯಮ ಗಾಳಿಗೆ ತೂರಿ ಸಂತೆ

ಪಾವಗಡ :  

      ತಾಲೂಕಿನ ಕೋಟಗುಡ್ಡ ಗ್ರಾಪಂ ಕೊವಿಡ್ ಹಾಟ್‍ಸ್ಪಾಟ್ ಆಗಿದ್ದರು ಗ್ರಾಮದಲ್ಲಿ ಕೊವಿಡ್ ಕರ್ಪೂಗಾಳಿಗೆ ತೂರಿ ಸಂತೆ ಆಯೋಜನೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

      ಕೊವಿಡ್ ಎರಡನೇ ಅಲೆಯಿಂದ ದುಡಿಯುವ ಕೈಗಳಿಗೆ ಕೇಲಸವಿಲ್ಲದೆ ಒಂದು ರೂಪಾಯಿ ಕೇಲಸವಿಲ್ಲದೆ ತುತ್ತು ಅನ್ನಕ್ಕಾಗಿ ತಾಲೂಕಿನ ಅದೆಷ್ಠೋ ಕುಟುಂಬಗಳು ಕರ್ಪೂನಿಂದ ಕಂಗೆಟ್ಟು ಸೊಂಕು ಹರಡುತ್ತದೆ ಎಂಬ ಭಯದಿಂದ ಮನೆಯನ್ನು ಬಿಟ್ಟು ಹೊರಬಾರದ ಪರಿಸ್ಥಿತಿಯಲ್ಲಿ ಕೊಟಗುಡ್ಡದಲ್ಲಿ ಯಾವುದೇ ಮುಂಜಾಗ್ರತೆ ಕ್ರಮಗಳಿಲ್ಲದೆ, ಜನಸಾಮಾನ್ಯರು ಸಾಮಾಜಿಕ ಅಂತರವನ್ನ ಪಾಲಿಸದೇ ಮಾಸ್ಕ್ ಧರಿಸದೇ ಸಂತೆಯಲ್ಲಿ ಸೇರಿದ್ದ ಸಿಕ್ಕಬಟ್ಟೆ ಜನತೆಯನ್ನ ಕಂಡಾ ಗ್ರಾಮಸ್ಥರು ಗ್ರಾಪಂ ಹಾಗೂ ತಾಲೂಕು ಆಡಳಿತ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಕೊವಿಡ್ ಎರಡನೇ ಅಲೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು ಹಲವರು ಸೊಂಕಿನಿಂದ ಬಳಲುತ್ತಿದ್ದು ಕೊಟಗುಡ್ಡ ಗ್ರಾಪಂ ಹಾಟ್‍ಸ್ಪಾಟ್ ಗ್ರಾಪಂ ಎಂದು ಗುರುತಿಸಿದ್ದರು ಕೂಡ ಇಲ್ಲಿ ಇಂದು ನಡೆದಾ ಸಂತೆಗೆ ಅನುಮತಿ ನೀಡಿದವರು ಯಾರು ಎಂದು ತಾಲೂಕು ಆಡಳಿತ ವಿರುದ್ದ, ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ವಿರುದ್ದ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸದ್ದು ಅನುಮತಿ ನೀಡಿದವರ ಮೇಲೆ ಸೂಕ್ತ ಕ್ರಮಕೈಗೋಳ್ಳಬೇಕೆಂದು ಸ್ಥಲೀಯರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link